ಗುರುವಾರ , ಮೇ 6, 2021
23 °C

ನಗರದಲ್ಲಿ ಇಂದು: ಸೆಪ್ಟೆಂಬರ್ 2, ಶುಕ್ರವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ವಿಶ್ವವಿದ್ಯಾಲಯ: ತ್ರಿಪುರವಾಸಿನಿ, ಅರಮನೆ ಮೈದಾನ. `ಪುಸ್ತಕ ಪ್ರಪಂಚ~ ಮೇಳ ಉದ್ಘಾಟನೆ- ಸಚಿವ ಡಾ.ವಿ.ಎಸ್.ಆಚಾರ್ಯ. ಅತಿಥಿಗಳು- ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ, ಸಾಹಿತಿ ಡಾ.ಯು.ಆರ್.ಅನಂತಮೂರ್ತಿ, ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ. ಅಧ್ಯಕ್ಷತೆ- ಕುಲಪತಿ ಡಾ.ಎನ್.ಪ್ರಭುದೇವ. ಸಂಜೆ 4.ಕರ್ನಾಟಕ ನಾಟಕ ಅಕಾಡೆಮಿ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಪರ್ವತವಾಣಿ ಜನ್ಮಶತಮಾನೋತ್ಸವ ಕಾರ್ಯಕ್ರಮ. ಉದ್ಘಾಟನೆ- ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ, ಅತಿಥಿಗಳು- ಸಾಹಿತಿ ಪ್ರೊ.ಎಲ್.ಎಸ್.ಶೇಷಗಿರಿರಾವ್, ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ರಾಜಾರಾಂ. ಸಂಜೆ 6.ಕೆ.ಎಸ್.ತಾಂತ್ರಿಕ ಮಹಾವಿದ್ಯಾಲಯ: ರಘುವನಹಳ್ಳಿ, ಕನಕಪುರ ಮುಖ್ಯರಸ್ತೆ. `ಹಾರ್ಡ್‌ವೇರ್ ತಂತ್ರಜ್ಞಾನ~ ಕುರಿತು ವಿಚಾರ ಸಂಕಿರಣ. ಅತಿಥಿಗಳು- ಟ್ರೈಡೆಂಟ್ ಟೆಕೇಬಲ್ ಸಂಸ್ಥೆಯ ಶಾಖಾಧಿಕಾರಿ ಎನ್.ದೀನದಯಾಳ್, ಕಮ್ಮವಾರಿ ಸಂಘದ ಅಧ್ಯಕ್ಷ ಕೆ.ಎಸ್.ಸುಬ್ರಹ್ಮಣ್ಯ ನಾಯ್ಡು. ಬೆಳಿಗ್ಗೆ 9.30.ಎಂವಿಜೆ ತಾಂತ್ರಿಕ ಸಂಸ್ಥೆ: ವೈಟ್‌ಫೀಲ್ಡ್. ಮೊದಲ ವರ್ಷದ ಬಿ.ಇ ಪದವಿ ತರಗತಿಗಳ ಉದ್ಘಾಟನೆ. ಅತಿಥಿಗಳು- ಸಚಿವ ಡಾ.ವಿ.ಎಸ್.ಆಚಾರ್ಯ, ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಮಧ್ಯಾಹ್ನ 1.ನೋವಾ ಮೆಡಿಕಲ್ ಸೆಂಟರ್: ವಿವಾಂತ ತಾಜ್ ಹೋಟೆಲ್, ಯಶವಂತಪುರ. ಶಸ್ತ್ರಚಿಕಿತ್ಸೆ ಕುರಿತು ರಾಷ್ಟ್ರೀಯ ಮಟ್ಟದ ಸಮಾವೇಶ. ಉದ್ಘಾಟನೆ- ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ. ಸಂಜೆ 4.45.ಪಿಇಎಸ್ ಸಂಸ್ಥೆ: ಹನುಮಂತನಗರ. ನೂತನ ತಂತ್ರಜ್ಞಾನ ಕುರಿತ ಕಾರ್ಯಾಗಾರ. ಬೆಳಿಗ್ಗೆ 11.30.ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ವಾಡಿಯಾ ರಸ್ತೆ, ಬಸವನಗುಡಿ. ಭ್ರಷ್ಟಾಚಾರ ನಿರ್ಮೂಲನೆ ಕುರಿತ ಉಪನ್ಯಾಸ- ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆಯ ಅಧ್ಯಕ್ಷ ಡಾ.ಆಲಿ ಖ್ವಾಜಾ. ಸಂಜೆ 5.

ರಂಗದರ್ಶಿ

ನಾಟಕ ಮನೆ
: ನಗರ ಕೇಂದ್ರ ಗ್ರಂಥಾಲಯ ಸಭಾಂಗಣ, ಹಂಪಿನಗರ. ಮಹಾಕವಿ ಭಾಸನ `ದೂತ ಘಟೋತ್ಕಚ~ ನಾಟಕ ಪ್ರದರ್ಶನ. ನಿರ್ದೇಶನ- ಎಂ.ಎಸ್.ಉಮೇಶ್, ಅತಿಥಿಗಳು- ಸುಧಾ ವಾರಪತ್ರಿಕೆಯ ಉಪ ಸುದ್ದಿ ಸಂಪಾದಕ ಗುಡಿಹಳ್ಳಿ ನಾಗರಾಜ್, ತುಮಕೂರು ಶಿವಕುಮಾರ್, ಅಶ್ವತ್ಥನಾರಾಯಣ. ಸಂಜೆ 6.30.ರಂಗಶಂಕರ: ಜೆ.ಪಿ.ನಗರ 2ನೇ ಹಂತ. ಸಿಎಫ್‌ಡಿ ಬೆಂಗಳೂರು ತಂಡದಿಂದ `ಭಕ್ತಿ ಇತಿಹಾಸ್- ದ ಅದರ್ ಸೈಡ್ ಆಫ್ ಹಿಸ್ಟರಿ~ ಇಂಗ್ಲಿಷ್ ನಾಟಕ ಪ್ರದರ್ಶನ. ರಚನೆ-ಬಾದಲ್ ಸರ್ಕಾರ್. ನಿರ್ದೇಶನ- ಪ್ರಕಾಶ್ ಬೆಳವಾಡಿ. ಸಂಜೆ 7.30.

ಗಣೇಶೋತ್ಸವ ಕಾರ್ಯಕ್ರಮ

ವಿದ್ಯಾರಣ್ಯ ಯುವಕ ಸಂಘ:
ಎಪಿಎಸ್ ಕಾಲೇಜು ಆವರಣ, ಬಸವನಗುಡಿ. ಬೆಂಗಳೂರು ಗಣೇಶ ಉತ್ಸವ. ಉಷಾ ಉತುಪ್ ಮತ್ತು ರಘುದೀಕ್ಷಿತ್ ತಂಡದಿಂದ ಗಾಯನ ಕಾರ್ಯಕ್ರಮ. ಅಧ್ಯಕ್ಷತೆ- ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ. ಸಂಜೆ 6.30.ವಿನಾಯಕ ಸೇವಾ ಸಮಿತಿ: ಜಯನಗರ 4ನೇ ಬಡಾವಣೆ. ವಿಶೇಷ ಅಲಂಕಾರ. ರವೀಂದ್ರ ಸೊರಗಾಂವಿ ಮತ್ತು ಸಂಗಡಿಗರಿಂದ ಸುಗಮ ಸಂಗೀತ. ಸಂಜೆ 7.ಗಣೇಶ ಮಂದಿರ: ತ್ಯಾಗರಾಜನಗರ. ವಸುಮತಿ ರಘುನಾಥ್ ಮತ್ತು ಸಂಗಡಿಗರಿಂದ ಸಂಗೀತ. ಸಂಜೆ 7.ವಿನಾಯಕ ಮಿತ್ರ ಮಂಡಳಿ: ಜಯನಗರ 8ನೇ ಬ್ಲಾಕ್. ವಿಶೇಷ ಪೂಜೆ. ಬೆಳಿಗ್ಗೆ 10. ಆದರ್ಶ ಮೆಲೋಡಿಸ್‌ನ ರಂಗಸ್ವಾಮಿ ಮತ್ತು ಶಮಿತಾ ಮಲ್ನಾಡ್ ಅವರಿಂದ ರಸಮಂಜರಿ. ಸಂಜೆ 6.ಭಗವಾನ್ ಅರ್ಕ ಮಹಾಗಣಪತಿ ದೇವಸ್ಥಾನ ಟ್ರಸ್ಟ್: ಕೆಂಪೇಗೌಡ ರಸ್ತೆ, ಗಾಂಧಿನಗರ. ಮಹಾಗಣಪತಿ ಸಹಸ್ರಮೋದಕ ಹೋಮ, ನವಗ್ರಹ ಹೋಮ, ದುರ್ಗಾಶಾಂತಿ ಹೋಮ. ಬೆಳಿಗ್ಗೆ 8.ವಿದ್ಯಾಗಣಪತಿ ಸೇವಾ ಟ್ರಸ್ಟ್: ರಾಜಾಜಿನಗರ 6ನೇ ಬ್ಲಾಕ್. ಆರ್‌ಪಿಇಎಸ್ ನೃತ್ಯ ಅಕಾಡೆಮಿಯ ವಿದ್ಯಾರ್ಥಿಗಳಿಂದ ಭರತನಾಟ್ಯ. ಸಂಜೆ 7.ವಿನಾಯಕ ಮಿತ್ರ ಮಂಡಳಿ: ಜಯನಗರ 8ನೇ ಬ್ಲಾಕ್. ಗಣಪತಿಗೆ ಪೂಜೆ ಮತ್ತು ಮಂಗಳಾರತಿ. ಬೆಳಿಗ್ಗೆ 9.ಲಕ್ಕಸಂದ್ರ ಶ್ರೀ ವಿನಾಯಕ ಗೆಳೆಯರ ಬಳಗ: ಲಕ್ಕಸಂದ್ರ. ದಯಾನಂದ ಮೆಲೋಡಿಸ್ ಅವರಿಂದ ರಸಮಂಜರಿ. ಸಂಜೆ 6.ಸನಾತನ ಭಕ್ತ ಮಂಡಲಿ ಟ್ರಸ್ಟ್: ವಿಜಯನಗರ. ವೈದೇಹಿ ಭಜನಾ ಮಂಡಳಿಯಿಂದ ಭಜನೆ. ಸಂಜೆ 6.ಲೇಕ್‌ವ್ಯೆ ಗಣಪತಿ ಸಮಿತಿ: ಹಲಸೂರು ಕೆರೆ ಸಮೀಪ. ಲಕ್ಷಮೋದಕ ಹೋಮ. ಸಂಜೆ 6.

ಧಾರ್ಮಿಕ ಕಾರ್ಯಕ್ರಮ

ಚಕ್ರೇಶ್ವರಿ ಮಹಿಳಾ ಸಮಾಜ:
ಆದಿನಾಥ ದಿಗಂಬರ ಜಿನಮಂದಿರ, ಸೌತ್ ಎಂಡ್ ವೃತ್ತ, ಜಯನಗರ. ದಶಲಕ್ಷಣ ಮಹಾಪರ್ವದಲ್ಲಿ ಉತ್ತಮ ಕ್ಷಮಾಧರ್ಮ ಕುರಿತು ಪ್ರವಚನ- ಧವಳಕೀರ್ತಿ ಭಟ್ಟಾರಕ ಪಟ್ಟಾಚಾರ್ಯರು. ಸಾನಿಧ್ಯ- ಮುನಿಶ್ರೀ ಪಾವನಕೀರ್ತಿ ಮಹಾರಾಜರು. ಮಧ್ಯಾಹ್ನ 2.30.ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್: ಮಾರುತಿ ಕುಟೀರ, ಜಯನಗರ 9ನೇ ಬ್ಲಾಕ್. ಮಂಜುನಾಥ್ ಭಟ್ ವಿನಾಯಕ ಅವರಿಂದ `ವೇದಾಂತ ಪರಿಭಾಷೆಗಳು ಮತ್ತು ಪರಿಚ್ಛೇದಗಳು~ ಕುರಿತು ಪ್ರವಚನ. ಸಂಜೆ 6.30.ದೇವಗಿರಿ ಶ್ರೀ ಗುರುಸೇವಾ ಸಮಿತಿ: ದೇವಗಿರಿ ರಾಯರ ಮಠ, 24ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಅಂಬರೀಷಾಚಾರ್ಯ ಅವರಿಂದ `ದ್ವಾದಶ ಸ್ತೋತ್ರ~ ಕುರಿತು ಪ್ರವಚನ. ಸಂಜೆ 7.ವೇದಾಂತ ಸತ್ಸಂಗ ಕೇಂದ್ರ: ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರ. `ಅಧ್ಯಾಸ ಭಾಷ್ಯಂ~ ಕುರಿತು ಉಪನ್ಯಾಸ- ಕೆ.ಜಿ.ಸುಬ್ರಾಯ ಶರ್ಮ. ಬೆಳಿಗ್ಗೆ 7.45.ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಡಿವಿಜಿ ಸಭಾಂಗಣ, ಬಸವನಗುಡಿ ರಸ್ತೆ, ನರಸಿಂಹರಾಜ ಕಾಲೊನಿ. ಗಣೇಶಭಟ್ಟ ಹೋಬಳಿ ಅವರಿಂದ ಭಗವದ್ಗೀತೆ ಕುರಿತು ಉಪನ್ಯಾಸ. ಸಂಜೆ 6.30.ಮದಾನಂದತೀರ್ಥ ಪ್ರವಚನ ಸಮಿತಿ: ರಾಘವೇಂದ್ರಸ್ವಾಮಿ ಮಠ, 6ನೇ ಅಡ್ಡ ರಸ್ತೆ, ಅಮರಜ್ಯೋತಿನಗರ.  ಹೊಳವನಹಳ್ಳಿ ಶ್ರೀನಿವಾಸಾಚಾರ್ಯ ಅವರಿಂದ `ಪ್ರೋಷ್ಠಪದಿ ಭಾಗವತ~ ಕುರಿತು ಪ್ರವಚನ. ಸಂಜೆ 7.ರಾಘವೇಂದ್ರ ಮಠ: ಇಟ್ಟಮಡು. ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರಿಂದ ಪ್ರವಚನ. ಸಂಜೆ 7.30.ನಾಗಮ್ಮ ದೇವಿ ದೇವಸ್ಥಾನ: ಸೇಂಟ್ ಜಾನ್ ರಸ್ತೆ, ಕೋರಮಂಗಲ. ಮಾವಿಳಕ್ಕು ಸೇವಾ (ಭಕ್ತರಿಂದ ತಂಬಿಟ್ಟಿನ ಆರತಿ) ಸಂಜೆ 7.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.