ಶುಕ್ರವಾರ, ಮೇ 14, 2021
35 °C

ನಗರದಲ್ಲಿ ಇಂದು (ಸೆಪ್ಟೆಂಬರ್ 24, ಶನಿವಾರ)

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ಕಿಡ್ನಿ ಪ್ರತಿಷ್ಠಾನ: ಜೆಎಸ್‌ಎಸ್ ಕಾಲೇಜು, ಜಯನಗರ 8ನೇ ಬ್ಲಾಕ್. ಪಂ.ಮಲ್ಲಿಕಾರ್ಜುನ್ ಮನ್ಸೂರ್ ಪ್ರಶಸ್ತಿ ಪ್ರದಾನ ಸಮಾರಂಭ. ಪುರಸ್ಕೃತರು- ಐಟಿಸಿ ಸಂಗೀತ ಸಂಶೋಧನಾ ಅಕಾಡೆಮಿಯ ಸಂಗೀತ ಗುರು ಪಂ.ಉಲ್ಲಾಸ್ ಕಶಲ್ಕರ್. ಅತಿಥಿ- ರಾಜ್ಯಪಾಲ ಎಚ್.ಆರ್.ಭಾರದ್ವಾಜ್. ಸಂಜೆ 7.30.ಅಖಿಲ ಭಾರತ ನೌಕರರ ವಿಮಾ ನಿಗಮ ಅಧಿಕಾರಿಗಳ ಒಕ್ಕೂಟ: ಬೆಲ್ ಹೋಟೆಲ್, ನಗರ ರೈಲು ನಿಲ್ದಾಣ ಸಮೀಪ. `ರಾಜ್ಯ ನೌಕರರ ವಿಮಾ ಯೋಜನೆಯ ಅಭಿವೃದ್ಧಿಗೆ ಅಳವಡಿಸಿಕೊಳ್ಳಬೇಕಿರುವ ದೂರದರ್ಶಿತ್ವ~ ಕುರಿತು ವಿಚಾರ ಸಂಕಿರಣ. ಉದ್ಘಾಟನೆ- ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ನೌಕರರ ವಿಮಾ ನಿಗಮದ ಪ್ರಧಾನ ನಿರ್ದೇಶಕ ಡಾ.ಸಿ.ಎಸ್.ಕೇದಾರ್. ಬೆಳಿಗ್ಗೆ 10.ಅರಣ್ಯ ಭವನ: 8ನೇ ಮಹಡಿ, 18ನೇ ಅಡ್ಡರಸ್ತೆ, ಮಲ್ಲೇಶ್ವರ. ದೇವರ ಕಾಡು ಸಂರಕ್ಷಣೆ ಮತ್ತು ಸಂವರ್ಧನೆ ಕಾರ್ಯಾಗಾರ ಉದ್ಘಾಟನೆ- ಸಚಿವ ಸಿ.ಪಿ.ಯೋಗೀಶ್ವರ್. ಬೆಳಿಗ್ಗೆ 10.30.ಸುಮುಖ ಪ್ರಕಾಶನ: ಬಾಪೂಜಿ ಸಭಾಂಗಣ, ಸರ್ಕಾರಿ ಕಲಾ ಕಾಲೇಜು, ಸೆಂಟ್ರಲ್ ಕಾಲೇಜು ಮುಂಭಾಗ. ಕಮಲಾ ನರಸಿಂಹ ಅವರ `ಹದ್ದು~ ಕಾದಂಬರಿ ಬಿಡುಗಡೆ- ಸಾಹಿತಿ ಡಾ.ಯು.ಆರ್.ಅನಂತಮೂರ್ತಿ. ಅತಿಥಿಗಳು- ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಪ್ರಾಧ್ಯಾಪಕ ಡಾ.ಎಸ್.ನಟರಾಜ ಬೂದಾಳು. ಬೆಳಿಗ್ಗೆ 10.30.ಉದಯಭಾನು ಕಲಾಸಂಘ: ಬಿ.ವಿ.ಜಗದೀಶ ವಿಜ್ಞಾನ ಕೇಂದ್ರ, ನ್ಯಾಷನಲ್ ಕಾಲೇಜು, 7ನೇ ಬ್ಲಾಕ್, ಜಯನಗರ. ಅಂತರರಾಷ್ಟ್ರೀಯ ರಸಾಯನಶಾಸ್ತ್ರ ವರ್ಷಾಚರಣೆ ಪ್ರಯುಕ್ತ ಅಂತರ ಕಾಲೇಜು ಪ್ರಬಂಧ ಸ್ಪರ್ಧಾ ಕಾರ್ಯಕ್ರಮ. ಅತಿಥಿಗಳು- ದಯಾನಂದ ಸಾಗರ್ ಕಾಲೇಜಿನ ಪ್ರಾಧ್ಯಾಪಕ ಡಾ.ಕೆ.ವಿ.ರಮೇಶ್, ಸಂಘದ ಕಾರ್ಯದರ್ಶಿ ಎಂ.ನರಸಿಂಹ. ಬೆಳಿಗ್ಗೆ 10.30.ದಿ ಜನತಾ ಕೋ-ಅಪರೇಟಿವ್ ಬ್ಯಾಂಕ್: ವೈ.ಮುನಿಸ್ವಾಮಪ್ಪ ಕಲ್ಯಾಣ ಮಂಟಪ, ಯಶವಂತಪುರ. ಬ್ಯಾಂಕಿನ ಸದಸ್ಯರುಗಳ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ. ಸಂಜೆ 4.ಕೆಇಬಿ ಪಿಂಚಣಿದಾರರ ಸಂಘ: ಕೆಪಿಟಿಸಿಎಲ್ ನೌಕರರ ಸಂಘ, ರಾಜಾಜಿನಗರ 2ನೇ ಹಂತ. ಸಾಮಾನ್ಯ ಸಭೆ. ಉದ್ಘಾಟನೆ- ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ರವಿಕುಮಾರ್. ಅತಿಥಿ- ಕೆಪಿಟಿಸಿಎಲ್ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ವಿ.ಯಶವಂತ. ಬೆಳಿಗ್ಗೆ 11.ನೂಪುರ ಕಲಾಕೇಂದ್ರ: ನ್ಯಾಷನಲ್ ಮಾರ್ಡನ್ ಆರ್ಟ್ ಗ್ಯಾಲರಿ, ಅರಮನೆ ರಸ್ತೆ. ಕಥಕ್ ನೃತ್ಯ ಪ್ರದರ್ಶನ- ಹರಿ ಮತ್ತು ಚೇತನಾ ಅವರಿಂದ. ಸಂಜೆ 6.30.ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. `ಪುರಾತನ ಭಾರತದ ರಾಜಕೀಯ ತತ್ವ~ ಕುರಿತ ಉಪನ್ಯಾಸ- ಡಾ.ಆರ್.ಎನ್.ನಾಗರಾಜ್. ಸಂಜೆ 6.ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು: ಚಾಮರಾಜಪೇಟೆ. `ಕನ್ನಡ ಸಾಹಿತ್ಯದ ಯುಗ ನಿರ್ಮಾಪಕರು~ ಕುರಿತು ವಿಚಾರಗೋಷ್ಠಿ. ಅತಿಥಿಗಳು- ವಿಮರ್ಶಕರಾದ ಡಾ.ಎನ್.ಆರ್.ಲಲಿತಾಂಬ, ಡಾ.ಸೆಲ್ವಕುಮಾರಿ, ಸಂಶೋಧಕ ಡಾ.ಎಚ್.ಎನ್.ಮುರಳೀಧರ್, ಪ್ರಾಧ್ಯಾಪಕ ಪ್ರೊ. ಭಕ್ತರಹಳ್ಳಿ ಕಾಮರಾಜ್. ಅಧ್ಯಕ್ಷತೆ- ಕವಿ ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ. ಮಧ್ಯಾಹ್ನ 2.30. ಡಾ.ಬೈರಮಂಗಲ ರಾಮೇಗೌಡ ಅವರಿಗೆ ಅಭಿನಂದನೆ ಕಾರ್ಯಕ್ರಮ. ಅತಿಥಿಗಳು- ಸಾಹಿತಿ ದೇ.ಜವರೇಗೌಡ, ಜಾನಪದ ವಿದ್ವಾಂಸ ಡಾ.ಹಿ.ಶಿ.ರಾಮಚಂದ್ರೇಗೌಡ, ಪರಿಷತ್ತಿನ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ. ಅಧ್ಯಕ್ಷತೆ- ಪರಿಷತ್ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್. ಸಂಜೆ 6.45.ಕರ್ನಾಟಕ ರಕ್ಷಣಾ ವೇದಿಕೆ: ಸಂಗಮ್ ವೃತ್ತ, ಜೆ.ಜೆ.ಆರ್.ನಗರ. ಕರುನಾಡ ಜಾನಪದೋತ್ಸವ ಮತ್ತು ಡಾ.ರಾಜ್‌ಕುಮಾರ್ ಪುತ್ಥಳಿ ಮಂಟಪ ಉದ್ಘಾಟನೆ ಸಮಾರಂಭ. ಉದ್ಘಾಟನೆ- ನಟ ಶಿವರಾಜ್‌ಕುಮಾರ್. ಸಂಜೆ 4.ನ್ಯಾಷನಲ್ ಕಾಲೇಜು: ಬಸವನಗುಡಿ. ಅಂತರ ಕಾಲೇಜು ಕನ್ನಡ ಚರ್ಚಾಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭ. ಅತಿಥಿಗಳು- ಪ್ರೊ.ಎಚ್.ಕೆ.ಅಂಬಿಕಾ, ಡಾ.ಎಂ.ಕೆ.ಶ್ರೀಧರ್,ಆರ್. ಪ್ರಭಾಕರ ರೆಡ್ಡಿ. ಸಂಜೆ 5.30.ಬಿಎನ್‌ಇಎಸ್ ಕಾಲೇಜು: ಮಹಾಲಕ್ಷ್ಮಿ ಬಡಾವಣೆ. ಡಾ.ರಾಜಾ ರಾಮಣ್ಣ ಸ್ಮಾರಕ ವಿಜ್ಞಾನ ದಿನಾಚರಣೆ. ಅತಿಥಿಗಳು- ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ವೈದ್ಯೆ ಡಾ.ವಸುಂಧರಾ ಭೂಪತಿ, ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್. ಅಧ್ಯಕ್ಷತೆ- ಸಚಿವ ಎಸ್.ಎ.ರಾಮದಾಸ್. ಬೆಳಿಗ್ಗೆ 9.30.ಬೆಂಗಳೂರು ವಿಶ್ವವಿದ್ಯಾಲಯ: ಜ್ಞಾನ ಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ. ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್ ಲಿಪಿ ಪಠ್ಯಪುಸ್ತಕ ವಿತರಣೆ- ವಿ.ವಿ.ಯ ಕುಲಪತಿ ಪ್ರೊ.ಎನ್.ಪ್ರಭುದೇವ್. ಬೆಳಿಗ್ಗೆ 11.30.ಕರ್ನಾಟಕ ದಲಿತ ಸಂಘರ್ಷ ಸಮಿತಿ: ಸೆನೆಟ್ ಸಭಾಂಗಣ, ಸೆಂಟ್ರಲ್ ಕಾಲೇಜು. `ಸಂವಿಧಾನದ ಆಶಯ~ ಕುರಿತು ವಿಚಾರ ಸಂಕಿರಣ. ಉದ್ಘಾಟನೆ- ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಮುಖ್ಯಸ್ಥ ಡಾ.ಚಿನ್ನಸ್ವಾಮಿ ಸೋಸಲೆ. ಅತಿಥಿಗಳು- ಕವಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಬಂಡಾಯ ಸಾಹಿತಿ ಮಾಸ್ತಿ ಜಗನ್ನಾಥ್. ಬೆಳಿಗ್ಗೆ 11.ಬೆಂಗಳೂರು ಉತ್ತರ ಜಿಲ್ಲೆ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ: ಎಂ.ಇ.ಎಸ್ ಕಿಶೋರ ಕೇಂದ್ರ ಪದವಿ ಪೂರ್ವ ಕಾಲೇಜು, 15ನೇ ಅಡ್ಡರಸ್ತೆ, ಮಲ್ಲೇಶ್ವರ. ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ. ಅತಿಥಿಗಳು- ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹ ನಿರ್ದೇಶಕಿ ಜಿ.ಎಚ್.ದಾಕ್ಷಾಯಿಣಿ ದೇವಿ. ಅಧ್ಯಕ್ಷತೆ- ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಚೌಡಯ್ಯ. ಬೆಳಿಗ್ಗೆ 10.ಜೈನ ಕಾಲೇಜು: ಕುವೆಂಪು ಕಲಾಕ್ಷೇತ್ರ. `ತಾರಾ ಸಂಸ್ಕೃತಿ~ ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವ. ಬೆಳಿಗ್ಗೆ 9.ವಿಜಯ ಕಾಲೇಜು: ಜಯನಗರ. ಶತವಾಧಾನಿ ಡಾ.ಆರ್.ಗಣೇಶ್ ಅವರ ಅಷ್ಟಾವಧಾನ ಕಾರ್ಯಕ್ರಮ. ಸಂಜೆ 4.ಬೆಂಗಳೂರು ಪ್ರೆಸ್‌ಕ್ಲಬ್: ಕಬ್ಬನ್ ಉದ್ಯಾನ. ಗಣೇಶ ಕಾಸರಗೋಡು ರಚಿಸಿರುವ `ಗುರಿ ಹೆಗ್ಗುರಿ~ ಕೃತಿ ಬಿಡುಗಡೆ- ಚಿತ್ರನಟ ರಮೇಶ್ ಅರವಿಂದ್. ಅತಿಥಿ- ಚಿತ್ರನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್. ಅಧ್ಯಕ್ಷತೆ- ಪ್ರೆಸ್‌ಕ್ಲಬ್‌ನ ಅಧ್ಯಕ್ಷ ಎಂ.ಎ.ಪೊನ್ನಪ್ಪ. ಬೆಳಿಗ್ಗೆ 11.30.

ರಂಗದರ್ಶಿ

ರಂಗಶಂಕರ: ಜೆ.ಪಿ.ನಗರ, 2ನೇ ಹಂತ. ದಿವ್ಯಾ ಅರೋರ ತಂಡದಿಂದ `ದಿ ಮೆಲೋಡಿ ಆಫ್ ಲವ್~ ನಾಟಕ ಪ್ರದರ್ಶನ. ರಚನೆ, ನಿರ್ದೇಶನ-ದಿವ್ಯಾ ಅರೋರ. ಸಂಜೆ 7.30.ರಂಗತಂತ್ರ: ರಾಮಾಂಜನೇಯ ಸ್ವಾಮಿ ದೇವಸ್ಥಾನದ ಆವರಣ, ಹನುಮಂತನಗರ. ರಂಗ ತಂತ್ರ ತಂಡದಿಂದ `ಲಾಕ್ ಔಟ್ ಅಲ್ಲ ನಾಕ್ ಔಟ್~ ನಾಟಕ ಪ್ರದರ್ಶನ. ರಚನೆ: ಎಂ.ಎಸ್ .ನರಸಿಂಹ ಮೂರ್ತಿ. ಸಂಜೆ 7.30.ಕರ್ನಾಟಕ ಕಲಾದರ್ಶಿನಿ: ಪುರಭವನ, ಜೆ.ಸಿ.ರಸ್ತೆ. ಮಾರುತಿ ಪ್ರತಾಪ~ ಯಕ್ಷಗಾನ ರಂಗಪ್ರಯೋಗ. ಭಾಗವತರು- ಕೊಳಗಿ ಕೇಶವ ಹೆಗ್ಡೆ, ಮೃದಂಗ- ಎ.ಪಿ.ಪಾಠಕ್, ಚಂಡೆ- ಮಂಜುನಾಥ ನಾವುಡ, ನಿರ್ದೇಶನ-ಆರ‌್ಗೋಡು ಮೋಹನದಾಸ ಶೆಣೈ, ಶ್ರೀನಿವಾಸ ಸಾಸ್ತಾನ, ಸಂಯೋಜನೆ-ಗೌತಮ್ ಸಾಸ್ತಾನ. ಮಧ್ಯಾಹ್ನ 2.30.

ಧಾರ್ಮಿಕ ಕಾರ್ಯಕ್ರಮ

ತಿರುಪತಿ ತಿರುಮಲ ದೇವಸ್ಥಾನ
: ತಿರುಪತಿ ತಿರುಮಲ ವಾರ್ತಾ ಕೇಂದ್ರ, ಜಯನಗರ. ಸೀತಾರಾಮ ಮುನಿಕೋಟಿ ಅವರಿಂದ ಹರಿಕಥೆ. ಸಂಜೆ 6.ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಬಸವನಗುಡಿ ರಸ್ತೆ, ನರಸಿಂಹರಾಜ ಕಾಲೋನಿ. ಡಿವಿಜಿ ಸಪಾದ ಶತೋತ್ಸವ ಸರಣಿಯಲ್ಲಿ ಗಣೇಶ ಭಟ್ಟ ಹೋಬಳಿ ಅವರಿಂದ ಭಗವದ್ಗೀತೆ ಪ್ರವಚನ. ಸಂಜೆ 6.30.ಕೋದಂಡರಾಮ ದೇವಸ್ಥಾನ ಸಮಿತಿ: ಸಂಪಂಗಿರಾಮ ನಗರ. ಎಳ್ಳು ಅಲಂಕಾರ. ಬೆಳಿಗ್ಗೆ 7.ಶ್ರೀಮದಾನಂದತೀರ್ಥ ಪ್ರವಚನ ಸಮಿತಿ: ರಾಘವೇಂದ್ರ ಸ್ವಾಮಿ ಮಠ, 6ನೇ ಅಡ್ಡ ರಸ್ತೆ, ಅಮರ ಜ್ಯೋತಿನಗರ. ಖೇಡಾ ಕೃಷ್ಣಾಚಾರ್ಯ ಅವರಿಂದ `ಗರುಡ ಪುರಾಣ~ ಕುರಿತು ಪ್ರವಚನ. ಸಂಜೆ 7.ದೇವಗಿರಿ ಶ್ರೀ ಗುರುಸೇವಾ ಸಮಿತಿ:  24ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಪ್ರದ್ಯುಮ್ನಾಚಾರ್ಯ ಜೋಶಿ ಅವರಿಂದ ಪ್ರವಚನ. ಸಂಜೆ 7.ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್: 9ನೇ ಬ್ಲಾಕ್ ಜಯನಗರ. ಕೇಶವದಾಸಮೂರ್ತಿ ಮತ್ತು ತಂಡದಿಂದ ಭಜನೆ. ಸಂಜೆ 6.ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳವರ ಮಠ: ಶೇಷಾದ್ರಿಪುರ. ಜೆ.ಪಿ.ನಾಗಾರಾಜಾಚಾರ್ಯ ಅವರಿಂದ `ಷಟ್ ಪ್ರಶ್ನೆ~ ಕುರಿತು ಉಪನ್ಯಾಸ. ಸಂಜೆ 6.30.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.