ನಗರದಲ್ಲಿ ಇಂದು

7

ನಗರದಲ್ಲಿ ಇಂದು

Published:
Updated:

ಫೆಬ್ರುವರಿ, 22, ಬುಧವಾರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, 2009 ಮತ್ತು 2010ನೇ ಸಾಲಿನ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭ. ಪ್ರಶಸ್ತಿ ಪ್ರದಾನ- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಅಧ್ಯಕ್ಷತೆ- ವಿಧಾನಸಭಾ ಸದಸ್ಯ ಡಾ.ಡಿ.ಹೇಮಚಂದ್ರ ಸಾಗರ್, ಅತಿಥಿಗಳು- ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಎಂ.ಕಾರಜೋಳ, ಸಾರಿಗೆ ಸಚಿವ ಆರ್.ಅಶೋಕ, ಸಂಸದ ಅನಂತಕುಮಾರ್. ಪ್ರಶಸ್ತಿ ಪುರಸ್ಕೃತರು- ಎನ್.ರಾಜಂ (ಟಿ.ಚೌಡಯ್ಯ ಪ್ರಶಸ್ತಿ), ಪಿ.ವಜ್ರಪ್ಪ, ಪ್ರಮೀಳಮ್ಮ ಗುಡೂರ (ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ), ಉಳ್ಳಾಲ ಮೋಹನ್ ಕುಮಾರ್, ರಾಧಾ ಶ್ರೀಧರ್ (ಶಾಂತಲಾ ನಾಟ್ಯ ಪ್ರಶಸ್ತಿ), ಕೆ.ಸಿ.ಪುಟ್ಟಣ್ಣಾಚಾರ್, ವೆಂಕಟಾಚಲಪತಿ (ಜಕಣಾಚಾರಿ ಪ್ರಶಸ್ತಿ), ಟಿ.ವಿ.ರಾಜು, ಬಿ.ಕೆ.ಸುಮಿತ್ರಾ (ಸಂತ ಶಿಶುನಾಳ ಷರೀಫ ಪ್ರಶಸ್ತಿ), ಶಾಂತಾದೇವಿ ಕಣವಿ, ಡಾ.ಸುಧಾಮೂರ್ತಿ (ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ), ಪುಟ್ಟಮಲ್ಲೇಗೌಡ, ದರೋಜಿ ಈರಮ್ಮ (ಜಾನಪದಶ್ರೀ ಪ್ರಶಸ್ತಿ), ರಘುಪತಿ ಶಾಸ್ತ್ರಿ (ಕುಮಾರವ್ಯಾಸ ಪ್ರಶಸ್ತಿ) ಬೆಳಿಗ್ಗೆ 11.ಜಯನಗರ 9ನೇ ಬಡಾವಣೆ ಕನ್ನಡಾಭಿಮಾನಿಗಳ ಸಂಘ: ಸಂಘದ ಧ್ವಜಸ್ತಂಭದ ಪಕ್ಕ, 9ನೇ ಬ್ಲಾಕ್ ಬಸ್ ನಿಲ್ದಾಣದ ಹತ್ತಿರ, ಜಯನಗರ. ಡಾ. ರಾಜ್‌ಕುಮಾರ್ ಅವರ ಕಂಚಿನ ಪುತ್ಥಳಿ ಅನಾವರಣ ಸಮಾರಂಭ. ಉದ್ಘಾಟನೆ- ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್, ನಟರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ನಟಿ ತಾರಾ, ಅಧ್ಯಕ್ಷತೆ- ಶಾಸಕ ಬಿ.ಎನ್.ವಿಜಯಕುಮಾರ್, ಮಾಜಿ ಸಚಿವ ರಾಮಲಿಂಗಾರೆಡ್ಡಿ, ಅತಿಥಿಗಳು- ಮಾಜಿ ಮೇಯರ್ ಎಸ್.ಕೆ.ನಟರಾಜ್, ಬಿಬಿಎಂಪಿ ಸದಸ್ಯ ಸಿ.ಕೆ.ರಾಮಮೂರ್ತಿ. ಬೆಳಿಗ್ಗೆ 11.ಉದಯಬಾನು ಕಲಾಸಂಘ: ಎಚ್.ರಾಮಸ್ವಾಮಿ ಸಭಾ ಭವನ, ವಿಜಯ ಕಾಲೇಜು, 4ನೇ ಬ್ಲಾಕ್, ಜಯನಗರ, `ವಾಣಿಜ್ಯ ಮತ್ತು ಆಡಳಿತ ನಿರ್ವಹಣೆ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು~ ವಿಷಯ ಕುರಿತ ಪ್ರಸಾರೋಪನ್ಯಾಸ ಮಾಲೆ, ಉಪನ್ಯಾಸ- ಕಾರ್ಯನಿರತ ಲೆಕ್ಕ ಪರಿಶೋಧಕ ವಿಜಯ್ ರಾಜ್. ಮಧ್ಯಾಹ್ನ 12.30.ದಿ ಬೆಂಗಳೂರು ವಿಜ್ಞಾನ ವೇದಿಕೆ: ಡಾ.ಎಚ್.ಎನ್.ಮಲ್ಟಿಮೀಡಿಯ ಸಭಾ ಭವನ, ಬಸವನಗುಡಿ, `ಸಾಮಾಜಿಕ ಕೀಟಗಳ ಪ್ರಾಮುಖ್ಯ ಮತ್ತು ಪರಿಸರ ಸಂರಕ್ಷಣೆ~ ವಿಷಯ ಕುರಿತ ಉಪನ್ಯಾಸ- ಬೆಂಗಳೂರು ವಿವಿಯ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಎಸ್.ರೆಡ್ಡಿ, ಸಂಜೆ 6.ಜೆಲ್ಲಿ ಬೀನ್ಸ್ ಸ್ಕೂಲ್: ಎ.ಡಿ.ಎ ರಂಗಮಂದಿರ, ರವೀಂದ್ರ ಕಲಾಕ್ಷೇತ್ರ ಎದುರು, ಜೆ.ಸಿ.ರಸ್ತೆ, ಅಧ್ಯಕ್ಷತೆ- ಜಿ.ಸಿ.ಎಚ್. ಸಿಲ್ಕ್ ಹೌಸ್‌ನ ಜಿ. ಚಿಕ್ಕಹನುಮಂತಪ್ಪ, ಅತಿಥಿಗಳು- ರಾಜ್ಯ ಕೈಮಗ್ಗ ಅಭಿವೃದ್ಧಿ ಇಲಾಖೆ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ, ಕಾರ್ಪೊರೇಟರ್ ಎ.ಎಲ್.ಶಿವಕುಮಾರ್, ಪಿ.ಧನರಾಜ್, ಗೋಪಿ. ಬೆಳಿಗ್ಗೆ 10.30.ಅಲಿಜೆಂಡ್ ಲಿವಿಂಗ್: ಉಪನ್ಯಾಸ ಕೊಠಡಿ, ಉನ್ನತ ಅಧ್ಯಯನ ಕೇಂದ್ರ, ಐಐಎಸ್‌ಸಿ ಕ್ಯಾಂಪಸ್, ಎ.ಸೆಂತಿವೆಲ್ ಮತ್ತು ಗೋವಿಂದ ಬಾಬು ಅವರ `ಲೈಫ್ ಈಸ್ ಫಂಡಮೆಂಟಲಿ ಮೇನೇಜ್‌ಮೆಂಟ್~ ಪುಸ್ತಕ ಲೋಕಾರ್ಪಣೆ. ಅತಿಥಿ- ಶ್ರಾಫ್ ಪಬ್ಲಿಶರ್ಸ್‌ ಅಂಡ್ ಡಿಸ್ಟ್ರಿಬ್ಯೂಟರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಶಾಸ್ತ್ರಿ. ಸಂಜೆ 5.30.ಸಾಂಸ್ಕೃತಿಕ ಕಾರ್ಯಕ್ರಮ

ಬನಗಿರಿ ವರಸಿದ್ಧಿ ವಿನಾಯಕ ಮಂಡಳಿ ಟ್ರಸ್ಟ್: 100 ಅಡಿ ರಸ್ತೆ, ಬನಶಂಕರಿ 3ನೇ ಹಂತ, ದೇವಸ್ಥಾನದ 24ನೇ ವಾರ್ಷಿಕೋತ್ಸವ ಸಮಾರಂಭ. ಅಷ್ಟದ್ರವ್ಯ, ಮಹಾಗಣಪತಿ ಹೋಮ, ಧನ್ವಂತರಿ ಹೋಮ, ದ್ರಾಕ್ಷಿ ಗೋಡಂಬಿ ಅಲಂಕಾರ. ಬೆಳಿಗ್ಗೆ 9. ವಿಷ್ಣು ಸಹಸ್ರನಾಮ ಪಾರಾಯಣ. ಸಂಜೆ 5. ನಂತರ ವಿದ್ವಾನ್ ಮೈಸೂರು ರಾಮಚಂದ್ರರಾವ್ ಅವರಿಂದ ದೇವರನಾಮ ಮತ್ತು ದಾಸರ ಪದ. ಸಂಜೆ 6.30.ಭಾಗವತರು ಸಾಂಸ್ಕೃತಿಕ ಸಂಘಟನೆ ಮತ್ತು ಇಂಡಿಯನ್ ಕಲ್ಚರಲ್ ಅಕಾಡೆಮಿ ಟ್ರಸ್ಟ್: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. `ಸಿರಿ ಸಂಪಿಗೆ~- ಚಂದ್ರಶೇಖರ ಕಂಬಾರರ ರಂಗ ಸಂಭ್ರಮ. ಪ್ರಯೋಗ ರಂಗ ತಂಡದಿಂದ `ಶಿವರಾತ್ರಿ~ ನಾಟಕ ಪ್ರದರ್ಶನ. ನಿರ್ದೇಶನ: ಕೃಷ್ಣಮೂರ್ತಿ ಅತ್ತಾವರ್. ಸಂಜೆ 7.ದಿವ್ಯಜ್ಯೋತಿ ಜಾಗೃತಿ ಸಂಸ್ಥಾನ: ಫ್ರೀಡಂ ಪಾರ್ಕ್, ಗಾಂಧಿನಗರ. ಸ್ವಾಮಿ ಮೋಹನಪುರಿ ಅವರಿಂದ ಗೋಕಥಾ ವಾಚನ. ಸಂಜೆ 4.30. ಯೋಗಗುರು ಆಶುತೋಷ್ ಮಹಾರಾಜ್ ಅವರಿಂದ ವಿಲಕ್ಷಣ ಯೋಗ ಶಿಬಿರ. ಸಂಜೆ 5.30ರಿಂದ 7.30.

====

ವಚನ ಜ್ಯೋತಿ ಬಳಗ: ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು. ಸಂಸ್ಥಾಪಕರ ದಿನಾಚರಣೆ, ಶಿವಲಿಂಗ ಪ್ರಶಸ್ತಿ ಪ್ರದಾನ ಹಾಗೂ ವಚನ ಜ್ಯೋತಿ ವೆಬ್‌ಸೈಟ್‌ಗೆ ಚಾಲನೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ.ನರಸಿಂಹ ವಡವಾಟಿ ಅವರಿಂದ ವಚನ ಗಾಯನ ಮತ್ತು ಕ್ಲಾರಿಯೋನೆಟ್ ವಾದನ.ಸಂಜೆ 5. ಸಭಾ ಕಾರ್ಯಕ್ರಮದ ಸಾನ್ನಿಧ್ಯ- ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅಧ್ಯಕ್ಷತೆ- ಕರ್ನಾಟಕ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ರಾಮಚಂದ್ರಗೌಡ, ಶಿವಲಿಂಗ ಪ್ರಶಸ್ತಿ ಪ್ರದಾನ- ಸಚಿವ ವಿ.ಸೋಮಣ್ಣ, ಪುರಸ್ಕೃತರು- ತ್ರಿಭಾಷಾ ವಿದ್ವಾಂಸ ಷಣ್ಮುಖಯ್ಯ ಅಕ್ಕೂರಮಠ, ಹೊನ್ನ ಗೀರ್ವಾಣ ಪುರಸ್ಕಾರ ಪ್ರದಾನ- ಕೃಷಿ ಮಾರುಕಟ್ಟೆ ನಿರ್ದೇಶಕ ಡಾ. ಸಿ.ಸೋಮಶೇಖರ, ವಚನಜ್ಯೋತಿ ವೆಬ್‌ಸೈಟ್‌ಗೆಚಾಲನೆ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್, ಅತಿಥಿಗಳು- ಶಾಸಕ ಎಚ್.ಎಸ್.ಮಹದೇವಪ್ರಸಾದ್, ಕವಿ ಪ್ರೊ. ದೊಡ್ಡರಂಗೇಗೌಡ. ಸಂಜೆ 6.

ಕನ್ನಡ ಭಾಷೆ ಮತ್ತು ಸಂಸ್ಕೃತಿ ಹಾಗೂ ವಚನ ಸಾಹಿತ್ಯಕ್ಕೆ ಮೌಲಿಕ ಕೊಡುಗೆ ನೀಡಿರುವ ಮಹನೀಯರನ್ನು ಗೌರವಿಸುವ ಸಲುವಾಗಿ ವಚನ ಜ್ಯೋತಿ ಬಳಗ ಸಂಸ್ಥಾಪಕ ಪಂಡಿತ್ ಕೆ.ಪಿ.ಶಿವಲಿಂಗಯ್ಯ ಅವರ ಹೆಸರಿನಲ್ಲಿ ಶಿವಲಿಂಗ ಪ್ರಶಸ್ತಿಯನ್ನು ಸ್ಥಾಪಿಸಿದೆ.ತ್ರಿಭಾಷಾ ವಿದ್ವಾಂಸ ಷಣ್ಮುಖಯ್ಯ ಅಕ್ಕೂರ ಮಠ ಅವರನ್ನು ಈ ಬಾರಿಯ ಶಿವಲಿಂಗ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕನ್ನಡ, ಸಂಸ್ಕೃತ ಮತ್ತು ಹಿಂದಿ ಭಾಷೆಯಲ್ಲಿ ಪ್ರಭುತ್ವ ಸಾಧಿಸಿರುವ ಅಕ್ಕೂರಮಠ ನಗರದ ಸರ್ವೋದಯ ಪ್ರೌಢಶಾಲೆ ಮತ್ತು ಕಾಲೇಜಿನಲ್ಲಿ ಮೂರು ದಶಕ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅಪೂರ್ವ ಪಾಂಡಿತ್ಯದಿಂದ ಸಾಹಿತ್ಯ ವಲಯದಲ್ಲಿ ಜನಪ್ರಿಯತೆ ಪಡೆದಿರುವ ಷಣ್ಮುಖಯ್ಯ ಅವರದ್ದು ಬಹುಮುಖ ಪ್ರತಿಭೆ.ಆಳವಾದ ಅಧ್ಯಯನ, ತುಲನಾತ್ಮಕ ವಿವೇಚನೆ ಹಾಗೂ ವೈಚಾರಿಕ ನೆಲೆಗಟ್ಟಿನಲ್ಲಿ ಇವರು ಹಲವು ಮಹತ್ವದ ಗ್ರಂಥಗಳನ್ನು ಹೊರತಂದಿದ್ದಾರೆ. `ದಿಗ್ದರ್ಶನ~, `ಸೂಫಿ ಮತ್ತು ಶರಣರ ಅನುಭಾವಪಥ~, `ವಚನ ಸಾಹಿತ್ಯ ವಿವೇಚನೆ~, `ಧರ್ಮಸಂಪದ~, `ಭಾರತೀಯ ಭಕ್ತಿ ಚಳವಳಿ~ ಇವರ ಗ್ರಂಥಗಳು. ಹಿಂದಿಯಿಂದ ಕನ್ನಡಕ್ಕೆ ಕೆಲವು ಲೇಖನಗಳನ್ನು ಅನುವಾದಿಸಿದ್ದಾರೆ. ಇವರ ಕೆಲವು ಗ್ರಂಥಗಳು ಸಂಸ್ಕೃತಕ್ಕೂ ಭಾಷಾಂತರಗೊಂಡಿವೆ. 

ಸಮರ್ಥ ಪ್ರಕಾಶನ: ದಿ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ನಂ.6, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ, ಗಾಯತ್ರಿ ರಾಜಪುರ್ ಕಾಸಬಾಂ ಅವರ `ಭಾರತೀಯ ಸಂಗೀತ ದರ್ಶನ~ದ ಪರಿಷ್ಕೃತ ಆವೃತ್ತಿ ಬಿಡುಗಡೆ, ಅತಿಥಿಗಳು- ವಿದ್ವಾಂಸ ಆರ್.ಕೆ. ಶ್ರೀಕಂಠನ್, ವೀಣಾ ವಾದನ ತಜ್ಞ ಪ್ರೊ. ರಾ.ವಿಶ್ವೇಶ್ವರನ್‌ಸಂಜೆ 6.ದಿವ್ಯಜ್ಯೋತಿ ಜಾಗೃತಿ ಸಂಸ್ಥಾನ: ಫ್ರೀಡಂ ಪಾರ್ಕ್, ಗಾಂಧಿನಗರ. ಸ್ವಾಮಿ ಮೋಹನಪುರಿ ಅವರಿಂದ ಗೋಕಥಾ ವಾಚನ. ಸಂಜೆ 4.30. ಯೋಗಗುರು ಆಶುತೋಷ್ ಮಹಾರಾಜ್ ಅವರಿಂದ ವಿಲಕ್ಷಣ ಯೋಗ ಶಿಬಿರ. ಸಂಜೆ 5.30ರಿಂದ 7.30. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry