ನಗರದಲ್ಲಿ ಕಂಚಿಶ್ರೀ ಜಯೇಂದ್ರ ಸರಸ್ವತಿ

7

ನಗರದಲ್ಲಿ ಕಂಚಿಶ್ರೀ ಜಯೇಂದ್ರ ಸರಸ್ವತಿ

Published:
Updated:

ಬೆಂಗಳೂರು: ಕಂಚಿ ಕಾಮಕೋಟಿ ಸರ್ವಜ್ಞ ಪೀಠದ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿ ಮೂರು ದಿನಗಳ ಭೇಟಿಗಾಗಿ ಶುಕ್ರವಾರ ನಗರಕ್ಕೆ ಆಗಮಿಸಿದರು.

ತಮಿಳುನಾಡಿನಿಂದ ರಾಜ್ಯಕ್ಕೆ ಬಂದ ಅವರಿಗೆ ಹೊಸೂರು ರಸ್ತೆಯಲ್ಲಿ ಭಕ್ತರು ಪೂರ್ಣಕುಂಭದ ಸ್ವಾಗತ ನೀಡಿದರು.ಮಲ್ಲೇಶ್ವರದ ಕಂಚಿ ಶಂಕರ ಮಠದಲ್ಲಿ ಸ್ವಾಮೀಜಿ, ಭಕ್ತರಿಗೆ ಆಶೀರ್ವಚನ ನೀಡಿ­ದರು. ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊ­ಳ್ಳಲು ಮಧ್ಯಾಹ್ನ ತುಮಕೂರಿಗೆ ತೆರಳಿದರು.ಮಲ್ಲೇಶ್ವರದಲ್ಲಿ ಶನಿವಾರ ಮಧ್ಯಾಹ್ನ 12.30ಕ್ಕೆ ಸ್ವಾಮೀಜಿ ಅವರ ಮೆರವಣಿಗೆ ನಡೆಯಲಿದೆ. ಸಂಜೆ ವಿದ್ವತ್‌ ಸಭೆ ಸಂಘಟಿಸ­ಲಾಗಿದೆ. ಮಲ್ಲೇಶ್ವರ ಮಠದಲ್ಲಿ ಶನಿವಾರ ಮತ್ತು ಭಾನುವಾರ ಸಂಜೆ ಭಕ್ತರು ಸ್ವಾಮೀಜಿ ಅವರ ದರ್ಶನ ಪಡೆಯ­ಬಹುದು ಎಂದು ಮಠದ ಟ್ರಸ್ಟಿ ಟಿ.ರಾಮ­ಕುಮಾರ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry