ಬುಧವಾರ, ನವೆಂಬರ್ 20, 2019
21 °C

ನಗರದಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ

Published:
Updated:

ಹಾವೇರಿ: ಕೆಜೆಪಿಯ ಮಹಿಳಾ ಮುಖಂಡರೊಬ್ಬರು ಮತದಾರರಿಗೆ ಆಮಿಷೆ ಒಡ್ಡುತ್ತಿದ್ದಾರೆ ಎಂಬ ಕಾಂಗ್ರೆಸ್ ಮುಖಂಡರ ಆರೋಪ ಎರಡು ಪಕ್ಷಗಳ ಮುಖಂಡರ ಹಾಗೂ ಕಾರ್ಯಕರ್ತರ ನಡುವಿನ ಮಾತಿನ ಚಕಮಕಿ ನಗರದಲ್ಲಿ ಕೆಲಕಾಲ ಪ್ರಕ್ಷುಬ್ದ ವಾತಾವರಣ ನಿರ್ಮಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.ಗುರುವಾರ ರಾತ್ರಿ ಸುಮಾರು ನಾಲ್ಕು ಗಂಟೆಗಳ ಕಾಲ ಮುಖಂಡರ ಹಾಗೂ ಕಾರ್ಯಕರ್ತರ ನಡೆದ ಪರಸ್ಪರ ಆರೋಪ, ಪ್ರತ್ಯಾರೋಪ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖ ಲಾಗುವ ಮೂಲಕ ಅಂತ್ಯಗೊಂಡಿತು.ಇದಕ್ಕೂ ಮುನ್ನ ಕಾಂಗ್ರೆಸ್ ಮುಖಂಡರು, ಕೆಜೆಪಿ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಓಲೇಕಾರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ನಗರದ ಏಲಕ್ಕಿ ಓಣಿಯಿಂದ ಶಹರ ಪೊಲೀಸ್ ಠಾಣೆವರೆಗೆ ಮೆರವಣಿಗೆ ನಡೆಸಿದರೆ, ಪೊಲೀಸ್ ಠಾಣೆ ಎದುರಿನಲ್ಲಿಯೇ ಜಮಾಯಿಸಿದ ಕೆಜೆಪಿ ಕಾರ್ಯಕರ್ತರು ಕಾಂಗ್ರೆಸ್ ಮುಖಂಡರ ವಿರುದ್ಧ ಘೋಷಣೆಗಳನ್ನು ಕೂಗಿದರು.ಇದರಿಂದ ಎರಡೂ ಪಕ್ಷ ಕಾರ್ಯ ಕರ್ತರು ಪೊಲೀಸ್ ಠಾಣೆ ಎದುರು ಸೇರಿದಾಗ ಪರಸ್ಪರ ಮಾತಿನ ಚಕಮಕಿ, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿ ದ್ದರಿಂದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಜಮಾ ಯಿಸಿದ ಕಾರ್ಯಕರ್ತರನ್ನು ಅಲ್ಲಿಂದ ಚದುರಿ ಸಲು ಪೊಲೀ ಸರು, ಆಯಾ ಪಕ್ಷಗಳ ಮುಖಂಡರು ಹರಸಾಹಸ ಪಡಬೇಕಾ ಯಿತು.ಪ್ರತ್ಯೇಕ ಪ್ರಕರಣ ದಾಖಲು: ಘಟನೆಗೆ ಸಂಬಂಧಿಸಿದಂತೆ ಕೆಜೆಪಿ ಮುಖಂಡೆ ಅನಿತಾ ಸುಬ್ರಹ್ಮಣ್ಯ ಅವರು ತಮ್ಮ ಪಕ್ಷದ ಪರ ಪ್ರಚಾರ ನಡೆಸು ವುದಕ್ಕೆ ಅಡ್ಡಿ ಪಡಿಸಿದ್ದಾರಲ್ಲದೇ, ತಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಹಾವೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ಲಮಾಣಿ, ಮುಖಂಡರಾದ ಕೊಟ್ರೇಶಪ್ಪ ಬಸೇಗಣ್ಣಿ, ಎಸ್.ಎಫ್.ಎನ್. ಗಾಜೀ ಗೌಡರ, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಂ. ಹಿರೇಮಠ, ನಗರಸಭೆ ಸದಸ್ಯ ಐ.ಯು.ಪಠಾಣ ಹಾಗೂ ಕರಬಸಪ್ಪ ಹಲಗಣ್ಣನವರ ವಿರುದ್ಧ ದೂರು ದಾಖಲಿಸಿದ್ದಾರೆ.ಅದಕ್ಕೆ ಪ್ರತಿಯಾಗಿ ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಎಂ.ಎಂ. ಹಿರೇಮಠ ಅವರು, ಹಾವೇರಿ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ನೆಹರೂ ಓಲೇಕಾರ ಅವರು ಜೀವ ಬೆದರಿಕೆ ಹಾಕಿದ್ದಾರೆ ಹಾಗೂ ಅನಿತಾ ಸುಬ್ರಹ್ಮಣ್ಯ ವಿರುದ್ಧ ಮತದಾರರಿಗೆ ಆಮಿಷೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.ಘಟನೆ ವಿವರ: ಗುರುವಾರ ಸಂಜೆ ನಗರದ ಏಲಕ್ಕಿ ಓಣಿಯ ಮನೆಯೊಂದ ರಲ್ಲಿ ಕೆಜೆಪಿ ಮುಖಂಡೆ  ಅನಿತಾ ಸುಬ್ರಮಣ್ಯ ಎಂಬುವರು ಮಹಿಳೆಯ ರನ್ನು ಸೇರಿಸಿ ಮತಯಾಚನೆ ನೆಪದಲ್ಲಿ ಅವರಿಗೆ ಕೆಜೆಪಿ ವತಿಯಿಂದ ಒಂದು ಲಕ್ಷ ರೂಪಾಯಿ ಸಾಲ ಕೊಡುತ್ತೇವೆ. ಅದರಲ್ಲಿ 25 ಸಾವಿರ ರೂಪಾಯಿ ಸಬ್ಸಿಡಿ ಇರುತ್ತದೆ. ಚುನಾವಣೆಯಲ್ಲಿ ನೆಹರೂ ಓಲೇಕಾರ ಆಯ್ಕೆ ಯಾದರೆ, ಸಂಪೂರ್ಣ ಸಾಲ ಮನ್ನಾ ಮಾಡ ಲಾಗುತ್ತದೆ. ಅದಕ್ಕೆ ನೀವು ನಿಮ್ಮ ಮತ ದಾರರ ಚೀಟಿಯನ್ನು ನಮ್ಮ ಕೈಗೆ ಕೊಡಬೇಕು. ಅಂದರೆ, ನಿಮಗೆ ನಾವು ಸಾಲು ಕೊಡುತ್ತೇವೆ ಎಂದು ಆಮಿಷೆ ಒಡ್ಡುತ್ತಿದ್ದರೆಂದು ಹೇಳಲಾಗಿದೆ.ಈ ವಿಷಯ ತಿಳಿದು ಕಾಂಗ್ರೆಸ್‌ನ ಕೆಲ ಮುಖಂಡರು, ಅನಿತಾ ಸುಬ್ರಹ್ಮಣ್ಯ ಆಮಿಷೆ ಒಡ್ಡುತ್ತಿದ್ದ ಮನೆಗೆ ತೆರಳಿ, ಮತ ದಾರರಿಗೆ ಯಾವುದೇ ರೀತಿಯ ಆಮಿಷೆ ಒಡ್ಡದೇ ಪ್ರಚಾರ ನಡೆಸುವಂತೆ ತಾಕೀತು ಮಾಡಿದ್ದಾರೆ. ಇದೇ ಸಮಯಕ್ಕೆ ಕೆಜೆಪಿ ಕಾರ್ಯ ಕರ್ತರು ಅಲ್ಲಿಗೆ ಆಗಮಿಸಿ, ಮತದಾರರಿಗೆ ನಾವು ಯಾವುದೇ  ರೀತಿಯ ಆಮಿಷೆ ಒಡ್ಡುತ್ತಿಲ್ಲ. ಕೇವಲ ನೆಹರೂ ಓಲೇಕಾರ ಪರ ಪ್ರಚಾರ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.ಆಗ ಕೆಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಮಾತಿಗೆ ಮಾತು ಬೆಳೆದು ವಾಗ್ವಾದ, ಮಾತಿನ ಚಕಮಕಿ ನಡೆ ಯಿತು. ವಿಷಯ ತಿಳಿದು ಉಪ ವಿಭಾಗಾಧಿಕಾರಿ ಕೆ. ಚನ್ನಬಸಪ್ಪ, ಸಿಪಿಐ ಪಂಪಾಪತಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ.

ಎಂ.ಎಂ. ಹಿರೇಮಠರಿಗೆ ನಿಂದನೆ:  ಘಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ನೆಹರೂ ಓಲೇಕಾರ ಅವರು, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಹಾಗೂ ಜಿ.ಪಂ. ಮಾಜಿ ಸದಸ್ಯ ಎಂ.ಎಂ. ಹಿರೇಮಠ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದರೆಂದು ಹೇಳಲಾಗಿದೆ.ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್‌ನ ಕಾರ್ಯಕರ್ತರು ಮಾಜಿ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗ ಲಾರಂಭಿಸಿದ್ದಾರೆ. ಆಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿ ಸುವುದನ್ನು ಕಂಡು ಅಧಿಕಾರಿಗಳು ಮಾಜಿ ಶಾಸಕ ರನ್ನು ಅಲ್ಲಿಂದ ವಾಪಸ್ಸು ಕಳುಹಿಸಿದ್ದಾರೆ. 

ಮಾಜಿ ಶಾಸಕರ ವರ್ತನೆಗೆ ಬೇಸತ್ತು ಅವರ ವಿರುದ್ಧ ಘೋಷಣೆಗಳನ್ನು ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ಲಮಾಣಿ, ಕೊಟ್ರೇಶಪ್ಪ ಬಸೇಗಣ್ಣಿ, ಎಸ್‌ಎಫ್‌ಎನ್ ಗಾಜಿಗೌಡರ, ಎಂ.ಎಂ.ಹಿರೇಮಠ, ಐ.ಯು.ಪಠಾಣ, ಕರಬಸಪ್ಪ ಹಲಗಣ್ಣನವರ, ರಮೇಶ ಕಡಕೋಳ, ಸಂಜೀವ ನೀರಲಗಿ, ಸುಭ್ಹಾನಿ ಚೂಡಿ ಗಾರ, ನಗರಸಭೆ ಸದಸ್ಯ ಜಮಾದಾರ ಅಲ್ಲದೇ ನೂರಾರು ಕಾರ್ಯಕರ್ತರು ಮೆರವಣಿಗೆ ನಡೆಸಿದರು.ಇದಕ್ಕೆ ಪ್ರತಿಯಾಗಿ ಕಜೆಪಿಯ ಅನಿತಾ ಸುಬ್ರಹ್ಮಣ್ಯ, ಸುರೇಶ ಹೊಸಮನಿ, ವಿಜಯಕುಮಾರ ಚಿನ್ನಿಕಟ್ಟಿ, ಕ್ಯಾತಣ್ಣ ನವರ ಅಲ್ಲದೇ ಅನೇಕ ಕಾರ್ಯಕರ್ತರು ಕಾಂಗ್ರೆಸ್ ಮುಖಂಡರು ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಅವರು ಮೆರವಣಿಗೆ ನಡೆಸಿ ಪೊಲೀಸ್ ಠಾಣೆಗೆ ಆಗಮಿಸಿದರು.ಘಟನೆ ಸುದ್ದಿ ತಿಳಿದು ನಗರದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಎಂ.ಎಂ.ಹಿರೇಮಠ ಅವರ ಊರಿನಿಂದ ಎರಡ್ನೂ ರಕ್ಕೂ ಹೆಚ್ಚು ಅಭಿಮಾನಿಗಳು ಠಾಣೆಗೆ ಆಗಮಿಸಿದ್ದರೆ, ನಗರದ ಕೆಜೆಪಿ ಕಾರ್ಯಕರ್ತರು ಠಾಣೆಗೆ ಆಗಮಿಸಿ ದ್ದರು. ಇದರಿಂದ ಪೊಲೀಸ್ ಠಾಣೆ ಎದುರೇ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ನಂತರ ಎರಡೂ ಪಕ್ಷದ ಮುಖಂಡರು ಪೊಲೀಸ್ ಠಾಣೆಗೆ ತೆರಳಿ ಪರಸ್ಪರ ದೂರು, ಪ್ರತಿದೂರು ದಾಖಲಿಸಿದರು. ಎರಡು ಕೆಎಸ್‌ಆರ್‌ಪಿ ತುಕುಡಿಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.

ಪ್ರತಿಕ್ರಿಯಿಸಿ (+)