ನಗರದಲ್ಲಿ ಕ್ರಿಸ್‌ಮಸ್ ಕಲರವ

7

ನಗರದಲ್ಲಿ ಕ್ರಿಸ್‌ಮಸ್ ಕಲರವ

Published:
Updated:
ನಗರದಲ್ಲಿ ಕ್ರಿಸ್‌ಮಸ್ ಕಲರವ

 


ಲಲಿತ್ ಅಶೋಕ್‌ನಲ್ಲಿ ಬಫೆ

ಹೋಟೆಲ್ ಲಲಿತ್ ಅಶೋಕ್‌ನ ಈಜುಕೊಳದ ಬಳಿ ಹಬ್ಬದ ವಾತಾವರಣ ಸೃಷ್ಟಿಸಲಾಗಿದೆ. ಬಗೆಬಗೆಯ ತಿನಿಸುಗಳು ಹಬ್ಬದ ದಿನಗಳನ್ನು ನೆನಪಿಸುವಂತಿದೆ. ಹೋಟೆಲ್ ಆವರಣದಲ್ಲಿರುವ 24/7 ಬಾರ್ ಹಾಗೂ ರೆಸ್ಟೋರೆಂಟ್ ಅಶೋಕ ಹೋಟೆಲ್‌ನಲ್ಲಿ ಸಾಂಪ್ರದಾಯಿಕ ಕ್ರಿಸ್‌ಮಸ್ ಬಫೆ, ವಿವಿಧ ಬಗೆಯ ಗೌರ್ಮೆಟ್ ಸಲಾಡ್‌ಗಳು, ಕರಿದ ಮಾಂಸಗಳು ಹಾಗೂ ಬಾಯಲ್ಲಿ ನೀರೂರಿಸುವ ಡೆಸೆರ್ಟ್‌ಗಳ ಜತೆಗೆ ಮಿತಿ ಇಲ್ಲದೆ ವೈನ್ ಹಾಗೂ ಬೀರ್ ಅನ್ನು ಹೀರಬಹುದಾಗಿದೆ.

 

ಈ ಬಾರಿಯ ಕ್ರಿಸ್‌ಮಸ್ (ಡಿ. 25) ಅನ್ನು ಮನೆಮಂದಿಯೆಲ್ಲಾ ಸಂಭ್ರಮದಿಂದ ಕಳೆಯಲು ಹೋಟೆಲ್ ಲಲಿತ್ ಅಶೋಕ ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ. ಸಂಗೀತ, ಮಕ್ಕಳಿಗೆ ಆಟೋಟದ ಜತೆಗೆ ಊಟವನ್ನೂ ಸವಿಯಬಹುದು. ಒಬ್ಬರಿಗೆ ರೂ. 2090 ರೂಪಾಯಿ. ಸ್ಥಳ: ಕ್ರಿಸ್‌ಮಸ್ ಬ್ರಂಚ್, 24/7, ದಿ ಲಲಿತ್ ಅಶೋಕ್. ಸಮಯ: ಮಧ್ಯಾಹ್ನ 12.30ರಿಂದ 3ರವರೆಗೆ. 

 

ಅಲಿಲಾ ಬೆಂಗಳೂರು ಹೋಟೆಲ್ ಹಾಗೂ ರೆಸಿಡೆನ್ಸ್: ಕ್ರಿಸ್‌ಮಸ್ ಹಬ್ಬವನ್ನು ಸಿಹಿಯೊಂದಿಗೆ ಆಚರಿಸಲು ಅಲಿಲಾ ತಯಾರಿ ನಡೆಸಿದೆ. ನಾಲಿಗೆಗೆ ಹಿತವೆನಿಸುವ ಸಿಹಿಯ ಬೃಹತ್ ಪಟ್ಟಿಯೇ ಇಲ್ಲಿ ಸಿದ್ಧಗೊಂಡಿದೆ. ಹೋಮ್‌ಮೇಡ್ ಬ್ರೆಡ್ ಹಾಗೂ ಕುಕ್ಕೀಗಳು ದೊಡ್ಡ ಸಂಗ್ರಹ ಎಂಥವರ ಬಾಯಲ್ಲೂ ನೀರೂರಿಸುತ್ತದೆ. 

 

ಇವುಗಳೊಂದಿಗೆ ಕಪ್ ಕೇಕ್, ಕ್ಯಾಂಡೀ ಹಾಗೂ ಗೇಟಾಕ್ಸ್‌ಗಳು ಹಬ್ಬದ ಸವಿಯನ್ನು ಮತ್ತಷ್ಟು ಹೆಚ್ಚಿಸಲಿದೆ. 500 ರೂಪಾಯಿಗಿಂತಲೂ ಹೆಚ್ಚಿನ ಮೌಲ್ಯದ ಆರ್ಡರ್‌ಗಳಿಗೆ ಉಚಿತವಾಗಿ ಮನೆ ಬಾಗಿಲಿಗೇ ತಲುಪಿಸುವ ವ್ಯವಸ್ಥೆಯೂ ಇಲ್ಲಿದೆ. ಸ್ಥಳ: ಅಲಿಲಾ ಬೆಂಗಳೂರು ಹೋಟೆಲ್ ಹಾಗೂ ರೆಸಿಡೆನ್ಸ್, ನಂ. 100/6, ಎಚ್‌ಎಎಲ್ ವರ್ತೂರು ಮುಖ್ಯರಸ್ತೆ, ವೈಟ್‌ಫೀಲ್ಡ್. ದೂ: 7760961715.

 

ಲೀಕ್ರಸ್ಟಾಲ್ ಊಟ

ವಿಠಲ ಮಲ್ಯ ರಸ್ತೆಯಲ್ಲಿರುವ ಲಿ ಕ್ರಸ್ಟಾಲ್ ಹೋಟೆಲ್ ಈ ಕ್ರಿಸ್‌ಮಸ್‌ಗಾಗಿ ಮೂರು ಕೋರ್ಸ್‌ಗಳುಳ್ಳ ಮಧ್ಯಾಹ್ನ ಹಾಗೂ ರಾತ್ರಿಯ ವಿಶೇಷ ಭೋಜನ ಸಿದ್ಧಪಡಿಸಿದೆ. ಡಿ. 24 ಹಾಗು 25ರಂದು ಸವಿಯಬಹುದಾದ ಈ ಊಟದಲ್ಲಿ ಸಲಾಡ್‌ಗಳು, ಸ್ಟಾರ್ಟರ್, ಎಂಟ್ರೀಗಳು ಹಾಗೂ ಬಾಯಲ್ಲಿ ನೀರೂರಿಸುವ ಡೆಸರ್ಟ್‌ಗಳಿವೆ. ಊಟದಲ್ಲಿ ಸಲಾಟ ಹೊರಿಯಾಟಿಕಿ, ಚಿಲ್ಲಿ ಅಂಡ್ ಎಲಿಫೆಂಟ್ ಗಾರ್ಲಿಕ್ ಟೈಗರ್ ಪ್ರಾನ್, ನಾರ್ವೆ ಸಾಲ್ಮನ್ ಸ್ಟೀಕ್, ಸ್ಲೋ ರೋಸ್ಟೆಡ್ ಮ್ಯಾಪ್ಲ್ ಗ್ಲೇಜ್ಡ್ ಟರ್ಕಿ ಜತೆಗೆ ರೆಡ್ ವೆಲ್ವೆಟ್ ಕೇಕ್ ಸವಿಯಬಹುದಾಗಿದೆ. ಇದರೊಂದಿಗೆ ಒಂದು ಲೋಟ ಮುಲ್ಡ್ ವೈನ್ ಕೂಡ ಹೀರಬಹುದು. ಈ ಸವಿಯಾದ ಊಟಕ್ಕೆ ಒಬ್ಬರಿಗೆ 1200 ರೂಪಾಯಿ. 

ಸ್ಥಳ: ನಂ. 36, ವಿಠಲ ಮಲ್ಯ ರಸ್ತೆ. ಬೆಳಿಗ್ಗೆ 9.30ರಿಂದ ರಾತ್ರಿ 11ರವರೆಗೆ.

 

ಲ್ಯಾಂಡ್‌ಮಾರ್ಕ್: ಮಕ್ಕಳಿಗಾಗಿ ಆ

ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆಗೆಂದು ಲ್ಯಾಂಡ್‌ಮಾರ್ಕ್ ಮಕ್ಕಳಿಗಾಗಿ ವಿಶೇಷ ಹಬ್ಬವನ್ನು ಏರ್ಪಡಿಸಲಿದೆ. ಬಗೆಬಗೆಯ ಆಟಗಳು, ಸವಾಲು, ಕಲೆ, ಕಸೂತಿ ಸೇರಿದಂತೆ ವಿವಿಧ ಬಗೆಯ ಆಟೋಟಗಳನ್ನು ಆಯೋಜಿಸಿದೆ. 

 

ಈ ಕಾರ್ಯಕ್ರಮಗಳಲ್ಲಿ ಸ್ಪೆಲ್ಲಿಂಗ್ ಬಿ, ದಿ ಪಿಕ್ಷನರಿ-ಲ್ಯಾಂಡ್‌ಮಾರ್ಕ್ ಟೂರ್ನಿಮೆಂಟ್, ಡಿಸ್ನಿ ಕ್ರಿಸ್‌ಮಸ್ ಪಾರ್ಟಿ, `ದಿ ಈಯರ್ ದಟ್ಸ್ ವಾಸ್ ಕ್ವಿಜ್', ಛೋಟ ಭೀಮ ಟೂರ್, ದಿ ಅಮರ ಚಿತ್ರ ಕಥಾ- ಟ್ರಸರ್ ಹಂಟ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇವುಗಳೊಂದಿಗೆ ಇಷ್ಟವಾದ ಪಾತ್ರಗಳ ಪುಸ್ತಕಗಳ ಮೇಲೆ ಶೇ 15ರಷ್ಟು, ಅಮರ್ ಚಿತ್ರಕಥಾ ಪುಸ್ತಕಗಳಿಗೆ ಶೇ 10ರಷ್ಟು, ಡಿವಿಡಿಗಳ ಮೇಲೆ ಶೇ 25ರಷ್ಟು, ಬಿಲ್ಡ್ ಎನ್ ಗ್ರೊ ಲೆಗೊ ಬ್ಲಾಕ್ಸ್ ಮೇಲೆ ರೂ. 999 ನಿತ್ಯದ ಸ್ಕ್ರೆಬಲ್ ಮೇಲೆ ಶೇ 20ರಷ್ಟು, ಫಬರ್ ಕ್ಯಾಸ್ಟಲ್ ಉತ್ಪನ್ನಕ್ಕೆ ಶೇ 10, ಟೆಕ್ ಮತ್ತು ಗೇಮಿಂಗ್ ಪಿಎಸ್3/ ಎಕ್ಸ್‌ಬಾಕ್ಸ್ ಅಥವಾ ಪಿಎಸ್ ವಿಟ ಖರೀದಗೆ ಸಾವಿರ ವೋಚರ್‌ಗಳು, ಟ್ವಿಂಕಲ್ ಡಬ್ಬಲ್ ಡೈಜೆಸ್ಟ್ ಮೇಲೆ ಶೇ 20ರಷ್ಟು. ಬಾಕ್ಸ್ ಸೆಟ್ 5ಕ್ಕೆ 400 ರೂ, ಅಡ್ವೆಂಚರ್ ಬಾಕ್ಸ್ ಸೆಟ್ 5ರ ಮೇಲೆ ಶೇ 20ರಷ್ಟು ರಿಯಾಯಿತಿಯನ್ನು ಲ್ಯಾಂಡ್‌ಮಾರ್ಕ್ ಘೋಷಿಸಿದೆ.

 

ಆಟಿಕೆಗಳನ್ನು ದಾನ ಮಾಡಿ

ಕ್ರಿಸ್‌ಮಸ್ ಹಬ್ಬ ಕೇವಲ ಉಳ್ಳವರ ಪಾಲಾಗಬಾರದು ಎಂಬ ನಿಟ್ಟಿನಲ್ಲಿ ಅವಕಾಶ ವಂಚಿತ ಮಕ್ಕಳೂ ಕ್ರಿಸ್‌ಮಸ್ ಸಂಭ್ರಮವನ್ನು ಮತ್ತಷ್ಟು ಸಂಭ್ರಮದಿಂದ ಆಚರಿಸುವಂತೆ ಮಾಡುವ ಸಲುವಾಗಿ ಉತ್ತಮ ಸ್ಥಿತಿಯಲ್ಲಿರುವ ಆಟಿಕೆಗಳನ್ನು `ಫುಲ್ ಆಫ್ ಟಾಯ್ಸ' ಎಂಬ ಆನ್‌ಲೈನ್ ಆಟಿಕೆ ತಾಣಕ್ಕೆ ನೀಡಿದರೆ ಸಾಕು. ಅವರು ಆ ಆಟಿಕೆಗಳನ್ನು ಹೋಪ್ ಚಿರ್ಲ್ಡ್‌ನ್ ಹಾಗೂ ಫೈಥ್ ಟ್ರಸ್ಟ್ ಎಂಬ ಸಂಘಟನೆಗಳ ಮೂಲಕ ಅನಾಥಾಶ್ರಮದಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ನೀಡಲಿದ್ದಾರೆ. ಈ ಮೂಲಕ ಮಕ್ಕಳಿಗೂ ತಮ್ಮ ಆಟಿಕೆಗಳನ್ನು ಮತ್ತೊಬ್ಬರಿಗೆ ನೀಡಿದ ಧನ್ಯತಾಭಾವ ಸಿಗುವುದಲ್ಲದೇ ಅವಕಾಶ ವಂಚಿತ ಮಕ್ಕಳು ಹಬ್ಬವನ್ನು ಮತ್ತಷ್ಟು ಸಂತಸದಿಂದ ಆಚರಿಸಿಕೊಳ್ಳುವಂತಾಗಲಿದೆ. ಸಂಪರ್ಕ ಸಂಖ್ಯೆ: 9243560606. ಇಮೇಲ್: care@fulloftoys.com

 ಲಷ್ ಸೌಂದರ್ಯವರ್ಧಕ

ಕ್ರಿಸ್‌ಮಸ್ ಸಂದರ್ಭಕ್ಕೆಂದೇ ಲಷ್ ಸಂಸ್ಥೆಯು ವಿವಿಧ ಶ್ರೇಣಿಯ ಸೌಂದರ್ಯವರ್ಧಕ ಸಾಮಾಗ್ರಿಗಳನ್ನು ಪರಿಚಯಿಸುತ್ತಿದೆ. ಮಿಸ್ಟರ್ ಪಂಚ್, ದಿ ನಾರ್ತ್ ಪೋಲ್, ಸ್ನೋ ಗ್ಲೋಬ್‌ನಂತ ಬಗೆಬಗೆಯ ಸಾಬೂನುಗಳು. ಬ್ಲೌಸಿ ಶಾಂಪೂ, ಹ್ಯಾಪಿ ಹ್ಯಾಪಿ ಜಾಯ್ ಜಾಯ್ ಕಂಡೀಷನರ್ ಹಾಗೂ ಸುಗಂಧದ್ರವ್ಯ, ರೂಟ್ ಸ್ಕಾಲ್ಪ್ ಕ್ರೀಂ, ಸೂಪರ್ ಬಾಮ್ ಫಾರ್ ಸ್ಕಾಲ್ಪ್ ಎಂಬ ಉತ್ಪನ್ನಗಳು ಇಲ್ಲಿ ಲಭ್ಯ. ಈ ಉತ್ಪನ್ನಗಳಲ್ಲಿ ತಮ್ಮ ಪ್ರೀತಿ ಪಾತ್ರರಿಗೆ ಸೂಕ್ತವಾದುವುಗಳನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ಉಡುಗೊರೆಯಾಗಿ ನೀಡಲು ಲಷ್ ಸಹಕರಿಸಲಿದೆ. http://www.lushindia.com/

 

ಹೂಪೊಸ್.ಕಾಮ್ ಮೂಲಕ ಸಾಂತಾ ಕ್ಲಾಸ್ ಕರೆ

ಈ ಬಾರಿಯ ಕ್ರಿಸ್ಮಸ್ ದಿನದಂದು ಸಾಂತಾ ಕ್ಲಾಸ್ ನಿಮಗೆ ಕರೆ ಮಾಡಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಮಕ್ಕಳು ಹಾಗೂ ಅಮ್ಮಂದಿರ ಆನ್‌ಲೈನ್ ಶಾಪಿಂಗ್ ತಾಣ ಹೂಪೊಸ್.ಕಾಮ್(hoopos.com) ಮೂಲಕ ಅಮ್ಮಂದಿರು ತಮ್ಮ ಮಕ್ಕಳ ಮುದ್ದು ಮೊಗದ ಮೇಲೆ ನಗು ಕಾಣಬೇಕೆಂದರೆ ಹೂಪೊಸ್.ಕಾಮ್‌ನಲ್ಲಿ ಹೆಸರು ನೋಂದಾಯಿಸಿದಲ್ಲಿ ಸಾಂತಾ ಕ್ಲಾಸ್ ಕರೆ ಮಾಡಿ ಮಕ್ಕಳೊಂದಿಗೆ ಮಾತನಾಡಲಿದ್ದಾರೆ.

 

ಹೂಪೊಸ್.ಕಾಮ್‌ನಲ್ಲಿರುವ ನೋಂದಣಿ ಅರ್ಜಿಯನ್ನು ಭರ್ತಿ ಮಾಡಿದರೆ ಸಾಕು, ಡಿ. 24 ಹಾಗೂ 25ರಂದು ಸಾಂತಾ ಕ್ಲಾಸ್ ಕರೆ ಮಾಡಿ ಮಕ್ಕಳೊಂದಿಗೆ ಮಾತನಾಡಲಿದ್ದಾರೆ. ಜತೆಗೆ ತಮಗೆ ಅನುಕೂಲವಾಗುವ ಸಮಯವನ್ನು ನಮೂದಿಸಬಹುದಾದ ಸವಲತ್ತು ಸಹ ಇದೆ. ಕೇವಲ ಇಷ್ಟು ಮಾತ್ರವಲ್ಲದೆ ನೋಂದಾಯಿಸಿದ ಮೊದಲ 25 ಮಕ್ಕಳಿಗೆ ಅನಿರೀಕ್ಷಿತ ಉಡುಗೊರೆಯೂ ದೊರೆಯಲಿದೆ.

 

ಕ್ರಿಸ್‌ಮಸ್‌ಗಾಗಿ ಡಿ ಬೀರ್ಸ್ ವಜ್ರ

ಕ್ರಿಸ್‌ಮಸ್ ಹಬ್ಬವನ್ನು ಮತ್ತಷ್ಟು ಸಂಭ್ರಮದಿಂದ ಆಚರಿಸಲು ಡಿ ಬೀರ್ಸ್‌ ನವೀನ ವಿನ್ಯಾಸದ ವಜ್ರದ ಆಭರಣಗಳನ್ನು ಪರಿಚಯಿಸಿದೆ. ಈ ಸಂಗ್ರಹದಲ್ಲಿ ವಜ್ರದ ಬಳೆಗಳು, ಕಡಗ ಹಾಗೂ ವಿಶೇಷ ವಿನ್ಯಾಸದ ಬಗೆಬಗೆಯ ಆಭರಣಗಳು ಒಳಗೊಂಡಿದೆ. 

 

ಡಿ ಬೀರ್ಸ್ ವಜ್ರದ ಆಭರಣಗಳು ಬೆಂಗಳೂರು ಸೇರಿದಂತೆ ಮುಂಬೈ, ಚೆನ್ನೈ, ಹೈದರಾಬಾದ್, ದೆಹಲಿ, ಕೊಲ್ಕತ್ತ ಹಾಗೂ ಅಹಮದಾಬಾದ್‌ನಲ್ಲಿರುವ ಮಳಿಗೆಗಳಲ್ಲಿ ಲಭ್ಯ. 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry