ನಗರದಲ್ಲಿ ನಾಳೆ ಮೌತ್ ಆರ್ಗನ್‌ ನಿನಾದ

7

ನಗರದಲ್ಲಿ ನಾಳೆ ಮೌತ್ ಆರ್ಗನ್‌ ನಿನಾದ

Published:
Updated:

ನಗರದಲ್ಲಿ ಇದೇ ಮೊದಲ ಬಾರಿಗೆ ‘ಬೆಂಗಳೂರು ಹಾರ್ಮೋನಿಕಾ ಉತ್ಸವ 2013’ ನಡೆಯುತ್ತಿದೆ. ಈ ಸಂಗೀತೋತ್ಸವವನ್ನು ‘ಫಾದರ್‌ ಆಫ್‌ ಇಂಡಿಯನ್‌ ಹಾರ್ಮೋನಿಕಾ’ ಎಂದು ಖ್ಯಾತರಾಗಿದ್ದ ಮಿಲನ್‌ ಗುಪ್ತಾ ಅವರ ನೆನಪಿನಲ್ಲಿ ಆಚರಿಸಲಾಗುತ್ತಿದೆ. ಈ ಉತ್ಸವದ ಹೊಣೆ ಹೊತ್ತಿರುವುದು ಸೊನಿಡೊ ಮ್ಯೂಸಿಕ್ಸ್. ಇದಕ್ಕೆ ಬೆಂಗಳೂರಿನ ಹಾರ್ಮೋನಿಕಾ ಕ್ಲಬ್‌ನ ಸಹಕಾರವಿದೆ.ಭಾನುವಾರ ದಿನಪೂರ್ತಿ ನಡೆಯುವ ಈ ಉತ್ಸವದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೌತ್‌ಆರ್ಗನ್‌ನ ಇತಿಹಾಸ, ವಿವಿಧ ಬಗೆಯ ಮೌತ್‌ ಆರ್ಗನ್‌ಗಳ ಪರಿಚಯ, ಕಾರ್ಯಾಗಾರ ಹಾಗೂ ಸಂಗೀತ ಕಾರ್ಯಕ್ರಮಗಳು ಜನರನ್ನು ರಂಜಿಸಲಿವೆ.ಸ್ಥಳ: ಜೈನ್‌ ಕಾಲೇಜು ಸಭಾಂಗಣ, ಜಯನಗರ 9ನೇ ಬ್ಲಾಕ್‌. ಬೆಳಿಗ್ಗೆ 10ರಿಂದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry