ಭಾನುವಾರ, ಜೂನ್ 20, 2021
23 °C
ಬಾರ್‌, ರೆಸ್ಟೋ­ರೆಂಟ್‌ ಅವಧಿ ವಿಸ್ತರಣೆ

ನಗರದಲ್ಲಿ ಮದ್ಯ ವಹಿವಾಟು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಬಾರ್‌ ಮತ್ತು ರೆಸ್ಟೋ­ರೆಂಟ್‌ಗಳ ವಾರಾಂತ್ಯದ (ಶುಕ್ರವಾರ ಮತ್ತು ಶನಿವಾರ) ವಹಿವಾಟಿನ ಅವಧಿಯನ್ನು ಸರ್ಕಾರ ರಾತ್ರಿ ಒಂದು ಗಂಟೆಯವರೆಗೆ ವಿಸ್ತರಣೆ ಮಾಡಿರುವುದರಿಂದ ಮದ್ಯ ವಹಿವಾಟು ಹೆಚ್ಚಾಗಿದೆ.‘ಅವಧಿ ವಿಸ್ತರಣೆಯಿಂದ ವಹಿ­ವಾಟು ಸಾಕಷ್ಟು ಹೆಚ್ಚಾಗಿದೆ. ಆದರೆ, ಭಾರೀ ಪ್ರಮಾಣದಲ್ಲಿ ಹೆಚ್ಚಳವೇನೂ ಕಂಡುಬಂದಿಲ್ಲ. ಈಗಲೇ ಅದನ್ನು ನಿರೀಕ್ಷಿಸಲೂ ಸಾಧ್ಯವಿಲ್ಲ’ ಎಂದು ಹೆಬ್ಬಾಳದ ಗ್ರೀನ್‌ ಲ್ಯಾಂಡ್‌ ಬಾರ್‌ ಅಂಡ್‌ ರೆಸ್ಟೋರೆಂಟ್‌ನ ಕ್ಯಾಷಿಯರ್‌ ಮಂಜುನಾಥ್‌ ಹೇಳಿದರು.‘ರಾತ್ರಿ ಒಂದು ಗಂಟೆಯವರೆಗೆ ಬಾರ್‌ ಮತ್ತು ರೆಸ್ಟೋ­ರೆಂಟ್‌ಗಳ ವಹಿ­ವಾಟಿಗೆ ಇನ್ನೂ ನಗರ ಸಜ್ಜಾಗಿಲ್ಲ. ಇದಕ್ಕಾಗಿ ಬಾರ್‌ ಮತ್ತು ರೆಸ್ಟೋ­ರೆಂಟ್‌­ಗಳಲ್ಲಿ

ಅಗತ್ಯ ಸಿದ್ಧತೆ ಮಾಡಿ­ಕೊಳ್ಳಬೇಕಾಗಿದೆ. ಸಿಬ್ಬಂದಿಯ ಕೆಲಸದ ಅವಧಿ ಹೆಚ್ಚುವ ಬಗ್ಗೆಯೂ ಮಾಲೀ­ಕರು ಗಮನ ನೀಡಬೇಕಾಗುತ್ತದೆ’ ಎಂದು ಫ್ರೇಜರ್‌ ಟೌನ್‌ನ ರೆಸ್ಟೋ­ರೆಂಟ್‌ ವೊಂದರ ವ್ಯವಸ್ಥಾಪಕ ಸಿದ್ದಿಕಿ ಹೇಳಿದರು.‘ಅವಧಿ ವಿಸ್ತರಣೆಯಿಂದ ಶೇಕಡಾ 2­ರಿಂದ 3ರಷ್ಟು ವಹಿವಾಟು

ಹೆಚ್ಚಳ­ವಾಗಿದೆ. ಆದರೆ, ವಹಿವಾಟಿನ ಜತೆಗೆ ಭದ್ರತೆಯ ಕಡೆಗೂ ಗಮನ ನೀಡ­ಬೇಕಾ­ಗುತ್ತದೆ. ಇದಕ್ಕಾಗಿ ನಗರ-­ದಲ್ಲಿ ರಾತ್ರಿ 12 ಗಂಟೆಯ ನಂತರವೂ ಪೊಲೀಸ್‌ ಗಸ್ತು ಹೆಚ್ಚಿಸಬೇಕಾದ್ದು ಅಗತ್ಯ’ ಎಂದು ಮಾಲೀಕ ­‌ ಅಭಿಪ್ರಾಯಪಟ್ಟರು.‘ಮದ್ಯಪಾನ ಮಾಡಿ ವಾಹನ ಚಲಾಯಿಸುವವರನ್ನು ನಿಯಂತ್ರಿಸುವ ಜತೆಗೆ ರಾತ್ರಿ ವೇಳೆ ಭದ್ರತೆಯ ಜವಾಬ್ದಾರಿಯೂ ಹೆಚ್ಚಾಗಿದೆ. ಬಾರ್‌ ಮತ್ತು ರೆಸ್ಟೋ­ರೆಂಟ್‌ಗಳ ಅವಧಿ ಹೆಚ್ಚಳದಿಂದ ಭದ್ರತೆಯ ಕಡೆಗೆ ಹೆಚ್ಚು ಗಮನ ನೀಡಬೇಕಾಗುತ್ತದೆ’ ಎಂದು ಮಾಗಡಿ ರಸ್ತೆ ಠಾಣೆಯ ಪೊಲೀಸ್‌ ಸಿಬ್ಬಂದಿಯೊಬ್ಬರು ಹೇಳಿದರು.‘ಪ್ರಕರಣ ಹೆಚ್ಚಳವಾಗಿಲ್ಲ’

‘ಬಾರ್‌ ಮತ್ತು ರೆಸ್ಟೋರೆಂಟ್‌­ಗಳ ವಾರಾಂತ್ಯದ ವಹಿವಾಟಿನ ಅವಧಿ ವಿಸ್ತರಣೆ ಮಾಡಿರುವು­ದ­ರಿಂದ ಪಾನಮತ್ತ ಚಾಲನೆ ಪ್ರಕರಣ­ಗಳ ಸಂಖ್ಯೆ­ಯಲ್ಲಿ ಹೆಚ್ಚಳವೇನು ಆಗಿಲ್ಲ. ಪಾನಮತ್ತ ಚಾಲನೆ ಸಂಬಂಧ ಶನಿವಾರ ರಾತ್ರಿ ಸುಮಾರು 960 ಪ್ರಕರಣ­ಗಳನ್ನು ದಾಖ­ಲಿಸಲಾಗಿದೆ. ಕಳೆದ ವಾರ ಸಹ ಇಷ್ಟೇ ಪ್ರಮಾಣದಲ್ಲಿ ಪ್ರಕರ­ಣ­ಗಳನ್ನು ದಾಖಲಿಸಲಾಗಿತ್ತು’ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಬಿ.­ದಯಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಾರ್‌ ಮತ್ತು ರೆಸ್ಟೋ­ರೆಂಟ್‌­­ಗಳ ವಹಿವಾಟಿನ ಅವಧಿ ವಿಸ್ತರ­ಣೆ­ಯಾಗಿರುವು­ದರಿಂದ ಪಾನಮತ್ತ ಚಾಲನೆ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ ಎಂದು ಈಗಲೇ ಹೇಳಲಾಗು­ವುದಿಲ್ಲ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.