ಮಂಗಳವಾರ, ಮೇ 11, 2021
26 °C

ನಗರದಲ್ಲಿ ಹಳ್ಳಿಗಾಡಿನ ಸೊಗಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: `ಉಗಾದಿ ಉಡಿಗಿಕೊಂಡು ಹೋಯಿತು, ಕಾರ ಹುಣ್ಣಿಮೆ ಕರೆದುಕೊಂಡು ಬಂತು' ಎನ್ನುವ ಗಾದೆ ಮಾತಿದೆ. ಉಗಾದಿ ಹಬ್ಬದ ನಂತರ ಹಬ್ಬ ಹರಿದಿನಗಳಿಗೆ ಸ್ವಲ್ಪ ವಿರಾಮ ಇರುತ್ತದೆ. ಅಂತೆಯೇ ಕಾರ ಹುಣ್ಣಿಮೆ ಬಂತೆಂದರೆ ಜೊತೆಗೆ ಹಬ್ಬಗಳನ್ನು ಸಾಲಾಗಿ ಕರೆದುಕೊಂಡು ಬರುತ್ತದೆ. ಇದಕ್ಕಾಗಿಯೇ ಕಾರ ಹುಣ್ಣಿಮೆಗೆ ವಿಶೇಷ ಮಹತ್ವವಿದೆ.ಕಾರ ಹುಣ್ಣಿಮೆಯಂದು ರೈತರಲ್ಲಿ ವಿಶೇಷ ಸಂಭ್ರಮ ಮನೆ ಮಾಡುತ್ತದೆ. ರೋಹಿಣಿ ಹಾಗೂ ಮೃಗಶಿರಾ ಮಳೆಗಳು ಪೂರ್ಣಗೊಳ್ಳುವ ಈ ಅವಧಿಯಲ್ಲಿ ಕೃಷಿ ಚಟುವಟಿಕೆಗಳು ಬಹುತೇಕ ಪೂರ್ಣಗೊಂಡಿರುತ್ತವೆ. ಬಿತ್ತನೆ ಕಾರ್ಯ, ಗೊಬ್ಬರ ನೀಡುವುದು ಇತ್ಯಾದಿ ಕೆಲಸಗಳನ್ನು ಪೂರ್ಣಗೊಳಿಸುವ ರೈತರು, ವಿರಾಮದಲ್ಲಿ ಇರುತ್ತಾರೆ. ಬಿತ್ತಿದ ಬೆಳೆ ಮೊಳಕೆ ಒಡೆದು ರೈತರ ಕನಸುಗಳಿಗೆ ಬಣ್ಣ ತುಂಬುತ್ತಿದ್ದಂತೆಯೇ ಕಾರ ಹುಣ್ಣಿಮೆ ಹಬ್ಬವೂ ಬರುತ್ತದೆ.

ಹೀಗಾಗಿ ನಳನಳಿಸುವ ಬೆಳೆಯನ್ನು ನೋಡುವ ರೈತರು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.ನಗರದಲ್ಲಿ ಹಬ್ಬದ ಸಂಭ್ರಮ: ಕೇವಲ ಗ್ರಾಮೀಣ ಪ್ರದೇಶಕ್ಕೆ ಸೀಮಿತವಾದ ಹಬ್ಬ ಎನ್ನುವುದು ಬಹುತೇಕರ ಅಭಿಪ್ರಾಯ. ಆದರೆ ನಗರ ಪ್ರದೇಶದಲ್ಲೂ ಈ ಹಬ್ಬವನ್ನು ಅಷ್ಟೇ ಸಂತಸದಿಂದ ಆಚರಿಸಲಾಗುತ್ತಿದೆ.ಯಾದಗಿರಿಯಲ್ಲೂ ಕಾರ ಹುಣ್ಣಿಮೆಯನ್ನು ಭಾನುವಾರ ಆಚರಿಸಲಾಯಿತು. ರೈತರು ತಮ್ಮ ಎತ್ತುಗಳ ಮೈ ತೊಳೆದು, ವಿವಿಧ ಅಲಂಕಾರಿಕ ವಸ್ತುಗಳಿಂದ ಅಲಂಕರಿಸಿದ್ದರು. ಎತ್ತುಗಳ ಮೆರವಣಿಗೆಯಲ್ಲಿ ಅಲಂಕಾರಕ್ಕೆ ವಿಶೇಷ ಮಹತ್ವ ನೀಡಲಾಗಿತ್ತು. ತಮ್ಮ ಎತ್ತುಗಳೇ ಹೆಚ್ಚು ಅಂದವಾಗಿ ಕಾಣುವಂತೆ ಬೆಳಿಗ್ಗೆಯಿಂದಲೇ ಅಲಂಕಾರಕ್ಕೆ ರೈತರು ಮುಂದಾಗಿದ್ದರು.ಎತ್ತುಗಳ ಕೋಡುಗಳನ್ನು ವಿವಿಧ ಬಣ್ಣಗಳಿಂದ ಅಲಂಕರಿಸಿ, ಅವುಗಳಿಗೆ ಗೆಜ್ಜೆ, ಬಣ್ಣ ಬಣ್ಣದ ದಾರಗಳನ್ನು ಹಾಕಿದ್ದರು. ಅಲ್ಲದೇ ಎತ್ತುಗಳ ಕೊರಳಲ್ಲಿ ಗಂಟೆಗಳು, ಗೆಜ್ಜೆಗಳನ್ನು ಕಟ್ಟಿದ್ದರು. ಹೆಜ್ಜೆ ಹಾಕಿದರೆ ಘಲ್ ಘಲ್ ಎನ್ನುವ ಸದ್ದು ಬರುತ್ತಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.