ಶನಿವಾರ, ಜೂನ್ 12, 2021
22 °C

ನಗರದಲ್ಲಿ 10 ಹೊಸ ಪೊಲೀಸ್ ಠಾಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾದ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಜವಾಬ್ದಾರಿ ನಿಭಾಯಿಸುವ ಪೊಲೀಸ್ ಇಲಾಖೆಗೆ ಅಗತ್ಯ ಬೆಂಬಲ.ಬೆಂಗಳೂರು ನಗರದಲ್ಲಿ ಮೂರು ಸಂಚಾರ ಪೊಲೀಸ್ ಠಾಣೆಗಳು ಸೇರಿದಂತೆ ಒಟ್ಟು 10 ಹೊಸ ಠಾಣೆಗಳ ಆರಂಭ. ಸಂಚಾರ ಪೊಲೀಸರಿಗಾಗಿ 20 ಕೋಟಿ ರೂಪಾಯಿ ಅನುದಾನ.ಪೊಲೀಸ್ ವಸತಿ ಸಮುಚ್ಚಯಗಳ ನಿರ್ವಹಣೆ ಮತ್ತು ದುರಸ್ತಿಗೆ 50 ಕೋಟಿ ರೂಪಾಯಿ ನೀಡುವುದರ ಜತೆಗೆ ಸಿಬ್ಬಂದಿಗೆ ಹೆಚ್ಚಿನ ವಸತಿ ಸಮುಚ್ಚಯಗಳನ್ನು ನಿರ್ಮಿಸಲು 50 ಕೋಟಿ ಒದಗಿಸಲಾಗುತ್ತದೆ. ಪೊಲೀಸ್ ಸಿಬ್ಬಂದಿಗೆ ಪ್ರತಿ ವರ್ಷ ಎರಡು ಜತೆ ಸಮವಸ್ತ್ರ ನೀಡಲು ತೀರ್ಮಾನ.ನೂತನ ಅಗ್ನಿಶಾಮಕ ಠಾಣೆಗಳ ಕಟ್ಟಡ ನಿರ್ಮಾಣ ಮತ್ತು ಅಗತ್ಯ ಸಾಮಗ್ರಿಗಳ ಖರೀದಿಗೆ 25 ಕೋಟಿ. ಹೊಸದಾಗಿ ಮೂರು ಅಗ್ನಿಶಾಮಕ ಠಾಣೆಗಳ ಆರಂಭ. ಕಾರಾಗೃಹಗಳ ಆಧುನೀಕರಣಕ್ಕೆ ರೂ 10 ಕೋಟಿ ಅನುದಾನ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.