ನಗರದಲ್ಲಿ 29ರಿಂದ ಶರಣ ಸಂಸ್ಕೃತಿ ಉತ್ಸವ

ಶುಕ್ರವಾರ, ಮೇ 24, 2019
29 °C

ನಗರದಲ್ಲಿ 29ರಿಂದ ಶರಣ ಸಂಸ್ಕೃತಿ ಉತ್ಸವ

Published:
Updated:

ಚಿತ್ರದುರ್ಗ: ಶರಣ ಸಂಸ್ಕತಿ ಉತ್ಸವ ಸೆ. 29ರಿಂದಅ. 8ರವರೆಗೆ ಮುರುಘಾಮಠದ ಆವರಣದಲ್ಲಿ ನಡೆಯಲಿದೆ ಎಂದು ಮಠದ ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ಸೆ. 29ರಿಂದ ಅ. 1ರವರೆಗೆ ಜಮುರಾ ಕಪ್ ಕ್ರೀಡೋತ್ಸವ ಹಾಗೂ ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷ, ಮಹಿಳೆಯರ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು.ಮಹಿಳೆಯರಿಗೆ ಹಗ್ಗ ಜಗ್ಗಾಟ, ಮ್ಯೂಸಿಕಲ್ ಛೇರ್, ಮೆಮೊರಿ ಟೆಸ್ಟ್, ಗುಂಡು ಎಸೆತ, ಲೆಮನ್ ಅಂಡ್ ಸ್ಪೂನ್ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಕ್ರೀಡೆಗಳು ನಗರದ ಎಸ್‌ಜೆಎಂಐಟಿ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದರು. 29ರಂದು ಬೆಳಿಗ್ಗೆ 9ಕ್ಕೆ 1 ಸಾವಿರ ವಿದ್ಯಾರ್ಥಿಗಳು ಸೈಕಲ್ ಜಾಥಾ ನಡೆಸುವ ಮೂಲಕ ಕ್ರೀಡಾಕೂಟ ಆರಂಭಗೊಳ್ಳಲಿದೆ ಹಾಗೂ ಖಾಲಿ ಜಾಗದಲ್ಲಿ ಸಾವಿರಾರು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅ. 2ರಿಂದ 8ರವರೆಗೆ ವಿವಿಧ ವಿಷಯ ಕುರಿತಂತೆ ಚಿಂತನಾ ಗೋಷ್ಠಿಗಳು ನಡೆಯಲಿವೆ ಎಂದು ತಿಳಿಸಿದರು.ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಂ. ಜಯಣ್ಣ, ವಿದ್ಯಾಪೀಠದ ಎಸ್.ಎಚ್. ಪಟೇಲ್, ಮೃತ್ಯುಂಜಯ,ಆರ್. ಶೇಷಣ್ಣಕುಮಾರ್, ಮುರುಘರಾಜೇಂದ್ರ ಒಡೆಯರ್, ಕೆ.ಎಂ. ವೀರೇಶ್, ಎಸ್. ಷಣ್ಮುಖಪ್ಪ, ಮಲ್ಲಿಕಾರ್ಜುನಯ್ಯ, ಎ. ವಿಜಯಕುಮಾರ್, ಶ್ಯಾಮಲಾ ಶಿವಪ್ರಕಾಶ್, ಮಹಂತಮ್ಮ, ಪಾರ್ವತಮ್ಮ, ಆರತಿ ಮಹಡಿ ಶಿವಮೂರ್ತಿ, ಮೋಕ್ಷ ರುದ್ರಸ್ವಾಮಿ, ಸುಮನಾ ಅಂಗಡಿ ಇತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry