ಶುಕ್ರವಾರ, ಫೆಬ್ರವರಿ 26, 2021
20 °C
ಪರಿಸರ ದಿನದ ಅಂಗವಾಗಿ ಸೈಕಲ್‌ ರ್‍್ಯಾಲಿಆಯೋಜನೆ, ಉದ್ಯಾನಗಳಿಗೆ ಪುನರ್ಜೀವ

ನಗರದೆಲ್ಲೆಡೆ ಕೇಳಿತು ಹಸಿರುಳಿಸುವ ಮಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದೆಲ್ಲೆಡೆ ಕೇಳಿತು ಹಸಿರುಳಿಸುವ ಮಂತ್ರ

ಹುಬ್ಬಳ್ಳಿ: ಪರಿಸರ ನಾಶ, ಜಾಗತಿಕ ತಾಪ ಮಾನ ಹೆಚ್ಚಳ ಮುಂತಾದ ಸಮಸ್ಯೆಗಳ ನಡುವೆ ಮತ್ತೊಮ್ಮೆ ಬಂದ ವಿಶ್ವ ಪರಿಸರ ದಿನವನ್ನು ನಗರದ ವಿವಿಧ ಕಡೆಗಳಲ್ಲಿ ಆಚರಿಸಲಾಯಿತು.ಅರಣ್ಯ ಇಲಾಖೆ, ಶಾಲೆ, ಕಾಲೇಜು, ನ್ಯಾಯಾ ಲಯ ಹಾಗೂ ವಿವಿಧ ಸಂಘ ಸಂಸ್ಥೆಯವರು ಸಸಿಗಳನ್ನು ನೆಟ್ಟು, ಉದ್ಯಾನವನ್ನು ಶುಚಿಗೊಳಿಸಿ ಪರಿಸರ ಕಾಳಜಿ ವ್ಯಕ್ತಪಡಿಸಿದರು. ಸೈಕಲ್‌ ರ್‍್ಯಾಲಿ ನಡೆಸಿದ ಸಂಘಟನೆಯವರು ಪರಿಸರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.ಅರಣ್ಯ ಇಲಾಖೆಯ ಸಹಯೋಗದಲ್ಲಿ ಹುಬ್ಬಳ್ಳಿ ವಕೀಲರ ಸಂಘ ವಿದ್ಯಾ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ನ್ಯಾಯಾಲಯ ಸಂಕೀರ್ಣ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಸಿಗಳನ್ನು ನೆಡಲಾಯಿತು. ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಗೋಪಾಲಕೃಷ್ಣ ಕೊಳ್ಳಿ ಪ್ರಧಾನ ಸಿವಿಲ್‌ ನ್ಯಾಯಾಧೀಶ ಎಸ್‌.ಎನ್‌.ಕಲ್ಕಣಿ, ವಕೀಲರ ಸಂಘದ ಅಧ್ಯಕ್ಷ ಸಿ.ಆರ್. ಪಾಟೀಲ, ಪ್ರಧಾನ ಕಾರ್ಯದರ್ಶಿ ಪಿ.ಎಚ್‌.ತೋಟದ ಮತ್ತಿತರರು ಭಾಗ ವಹಿಸಿದ್ದರು.ಆವರಣದಲ್ಲೂ ಅರಣ್ಯ ಇಲಾಖೆ ಯವರು ಸಸಿ ನೆಟ್ಟರು. ಲಿಂಗರಾಜ ನಗರ ದಕ್ಷಿಣದಲ್ಲಿರುವ ನಗರಪಾಲಿಕೆ ಉದ್ಯಾನವನ್ನು ಗ್ಲೋಬಲ್‌ ಶೇಪರ್ಸ್‌ ಕಮ್ಯುನಿಟಿಯವರು ಸ್ವಚ್ಛ ಗೊಳಿಸಿ ಸಸಿಗಳನ್ನು ನೆಟ್ಟರು. ಮೇಯರ್‌ ಅಶ್ವಿನಿ ಮಜ್ಜಗಿ ಪಾಲ್ಗೊಂಡು ಉದ್ಯಾನದ ಅಭಿವೃದ್ಧಿಗೆ ಅವಶ್ಯ ನೆರವಿನ ಭರವಸೆ ನೀಡಿದರು.ಬಂಕಾಪುರ ಚೌಕದ ಬಸವ ಕಲಾ, ತಾಂತ್ರಿಕ ಮತ್ತು ಮರುಬಳಕೆ ಕುರಿತ ವಸ್ತು ಸಂಗ್ರಹಾಲಯದ ಪದಾಧಿಕಾರಿಗಳು ನಗರ ಮಧ್ಯದಲ್ಲಿ ಸೈಕಲ್‌ ರ್‍್ಯಾಲಿ ಹಮ್ಮಿ ಕೊಂಡಿದ್ದರು. ಚನ್ನಮ್ಮ ವೃತ್ತದಿಂದ ಆರಂಭಗೊಂಡ ರ್‍ಯಾಲಿ ಪಾಲಿಕೆ ಕಚೇರಿ ಆವರಣದಲ್ಲಿ ಕೊನೆಗೊಂಡಿತು.

ತ್ಯಾಜ್ಯ ವಿಂಗಡಣೆ ಮತ್ತು ಮರುಬಳಕೆಗೆ ಸೂಕ್ತ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎಂದು ಆಗ್ರಹಿಸಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಗೋಕುಲ ರಸ್ತೆಯ ಪದ್ಮರಾಜ ನಗರ ನಿವಾಸಿಗಳ ಸಂಘ ಬಡಾವಣೆಯ ಉದ್ಯಾನದಲ್ಲಿ ಸಂಪಿಗೆ ಮತ್ತಿತರ ಸಸಿಗಳನ್ನು ನೆಡಲಾಯಿತು. 

ಶಾಲೆ–ಕಾಲೇಜುಗಳಲ್ಲಿ...

ಹಳೇಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಪ್ರಭಾತಫೇರಿ ನಡೆಯಿತು. ವಿದ್ಯಾಸಮಿತಿ ಉಪಾಧ್ಯಕ್ಷ ಬಿ.ಎಸ್‌.ಚೌಹಾಣ ಹಸಿರು ನಿಶಾನೆ ತೋರಿದರು. ಸಂಸ್ಥೆಯ ಕಾರ್ಯದರ್ಶಿ ನಂದಕುಮಾರ ಘೋಡಕೆ, ಧರ್ಮದರ್ಶಿ ಜಿ.ಆರ್.ರಾಜೇಂದ್ರ ಮತ್ತಿ ತರರು ಇದ್ದರು.ಕೇಶ್ವಾಪುರ ಆಜಾದ್‌ ಕಾಲೊನಿಯ ರೇಶ್ಮಿ ಅಲ್‌ ಮಿಲಾದ್‌ ಉರ್ದು ಶಾಲೆ ಯಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್.ಎಸ್.ರೇಶ್ಮಿ ಸಸಿ ನೆಟ್ಟರು. ಅಬ್ದುಲ್‌ ಗಫಾರ್‌ ಜಮಾದಾರ, ಮಕ್ಬುಲ್‌ ಅಹಮ್ಮದ್ ರೇಶ್ಮಿ ಮತ್ತಿತರರು ಇದ್ದರು. ವಿದ್ಯಾನಗರದ ಶಾರದಾ ಆದರ್ಶ ಪದವಿಪೂರ್ವ ಮತ್ತು ಜೆ.ಕೆ. ವಾಣಿಜ್ಯ ಕಾಲೇಜಿನಲ್ಲಿ ಸಸಿ ನೆಟ್ಟು, ಮಾನವ ಸರಪಳಿ ನಿರ್ಮಿಸಿ, ವಿಚಾರ ಸಂಕಿರಣ ಹಮ್ಮಿಕೊಂಡು ಪರಿಸರ ದಿನ ಆಚರಿಸಲಾಯಿತು.ಅಕ್ಷಯ ಪಾರ್ಕ್‌ನ ಜೈಂಟ್ಸ್‌ ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಜಿ.ಎಸ್‌.ನಾಯಕ, ಕಾರ್ಯದರ್ಶಿ ವಿ.ಆರ್‌.ಮುತಾಲಿಕ್‌, ಸದಸ್ಯ ಶೀಲಾ ಮಿರ್ಜಿ ಮತ್ತಿತರರು ಭಾಗವಹಿಸಿದ್ದರು. ರಾಜೇಂದ್ರ ನಗರದ ಓರಿಯೆಂಟಲ್‌ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಕಾರ್ಯದರ್ಶಿ ಕೃಷ್ಣ ಜೆ.ಕೆ, ಪ್ರಾಚಾರ್ಯೆ ರಾಜೇಶ್ವರಿ, ಅಧ್ಯಕ್ಷೆ ಅನುಷಾ ವಿ, ನಿರ್ದೇಶಕ ವಿಶ್ವಜೀತ್‌ ಇದ್ದರು.ಮಂಜುನಾಥ ನಗರದಲ್ಲಿರುವ ಕೆ.ಎಲ್.ಇ.ಸೊಸೈಟಿಯ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಕೆ.ಎಲ್‌.ಇ. ತಾಂತ್ರಿಕ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ದೀಪಾ ಗರಗ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಾಚಾರ್ಯೆ ಅಡ್ರಿ ಉತ್ತಂಗಿ ಪ್ರತಿಜ್ಞಾ ವಿಧಿ ಬೋಧಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.