ಶನಿವಾರ, ಜೂನ್ 19, 2021
27 °C
ರಾಷ್ಟ್ರೀಯ ಹೆದ್ದಾರಿ ವಿರೋಧಿಸಿ 15ಕ್ಕೆ ಪ್ರತಿಭಟನೆ

ನಗರದ ಮಧ್ಯೆ ಹೆದ್ದಾರಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ‘ಆದಿ ಉಡುಪಿಯಿಂದ ತೀರ್ಥಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 169ರ ಜಂಕ್ಷನ್‌ ವರೆಗಿನ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಯಾಗಿ ಅಭಿವೃದ್ಧಿ ಮಾಡುವು ದನ್ನು ವಿರೋಧಿಸಿ ಇದೇ 15ರಂದು ಬೃಹತ್‌ ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್‌ ಹೇಳಿದರು.ಪರ್ಕಳದ ಹೈಸ್ಕೂಲ್‌ನಿಂದ ಬೆಳಿಗ್ಗೆ 9.30ಕ್ಕೆ ಪಾದಯಾತ್ರೆ ಆರಂಭಿಸಲಾ ಗುತ್ತದೆ. ಗಾಂಧಿ ಮೈದಾನದಲ್ಲಿ ಸಮಾ ವೇಶಗೊಂಡ ನಂತರ ಸಾರ್ವಜನಿಕ ಸಭೆ ನಡೆಯಲಿದೆ. ಆ ನಂತರ ಪರ್ಕಳದಿಂದ ಉಡುಪಿಯ ಕರಾವಳಿ ಜಂಕ್ಷನ್‌ವರೆಗೆ ಪಾದಯಾತ್ರೆ ಹೊರಟು ಅಲ್ಲಲ್ಲಿ ಸಭೆ ನಡೆಸಿ ಜನರಲ್ಲಿ ಜಾಗೃತಿ ಮೂಡಿ ಸಲಾಗುತ್ತದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ರಸ್ತೆಯ ಮಧ್ಯಭಾಗದಿಂದ ಎಡ ಮತ್ತು ಬಲಕ್ಕೆ ತಲಾ 40 ಮೀಟರ್‌ ಅಗಲ ವಾಗಲಿದ್ದು, ಸುಮಾರು ಮೂರು ಸಾವಿರ ಕಟ್ಟಡಗಳು ಉಡುಪಿ ನಗರ ವ್ಯಾಪ್ತಿಯಲ್ಲಿ ನೆಲಸಮ ಆಗಲಿವೆ. ರಾಷ್ಟ್ರೀಯ ಹೆದ್ದಾರಿ ಬರಲಿ, ಆದರೆ ಆದಿ ಉಡುಪಿ ಮಾರ್ಗದಿಂದ ಬೇಡ. ಬೇರೆ ಮಾರ್ಗದಿಂದ ಮಾಡಿದರೆ ನಮ್ಮದೇನೂ ವಿರೋಧವಿಲ್ಲ. ಕೇಂದ್ರ ಹೆದ್ದಾರಿ ಸಚಿವ ಆಸ್ಕರ್‌ ಫರ್ನಾಂಡಿಸ್‌ ಅವರು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು  ಆಗ್ರಹಿಸಿದರು.ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ ಅವರು ರಘುಪತಿ ಭಟ್‌ ಅಭಿವೃದ್ಧಿ ವಿರೋಧಿ ಎಂದು ಹೇಳಿದ್ದಾರೆ. ಆದರೆ ನಾನು ಅಭಿವೃದ್ಧಿ ವಿರೋಧಿಯಲ್ಲ. ನಗರದ ಮಧ್ಯೆ ರಾಷ್ಟ್ರೀಯ ಹೆದ್ದಾರಿಯನ್ನು ಮಾಡುವುದು ಸರಿಯಲ್ಲ ಎಂಬುದಷ್ಟೇ ಅಭಿಪ್ರಾಯ ಎಂದರು.ಬಿಜೆಪಿ ಯುವ ಮೋರ್ಚಾದ ರಾಜ್ಯ ಕಾರ್ಯದರ್ಶಿ ಯಶ್‌ಪಾಲ್‌ ಸುವ ರ್ಣ, ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಘವೇಂದ್ರ ಕಿಣಿ, ಪ್ರಧಾನ ಕಾರ್ಯ ದರ್ಶಿ ಗಿರೀಶ್‌ ಅಂಚನ್‌, ನಗರಸಭೆ ಸದಸ್ಯರಾದ ನರಸಿಂಹ ನಾಯಕ್‌, ದಿನಕರಶೆಟ್ಟಿ ಹೆರ್ಗ, ನಗರಸಭೆ ಮಾಜಿ ಅಧ್ಯಕ್ಷ ಕಿರಣ್‌ ಕುಮಾರ್‌ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.