ಶುಕ್ರವಾರ, ನವೆಂಬರ್ 22, 2019
26 °C

ನಗರದ ವಾರ್ತೆ

Published:
Updated:

ಇಂದು ವೀರಭದ್ರಸ್ವಾಮಿ ರಥೋತ್ಸವ

ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ, ಗಾಂಧಿಬಜಾರಿನ ಬಸವೇಶ್ವರಸ್ವಾಮಿ ಹಾಗೂ ವೀರಭದ್ರಸ್ವಾಮಿ ರಥೋತ್ಸವ ಮತ್ತು ಕೆಂಡಾರ್ಚನೆ ಕಾರ್ಯಕ್ರಮವನ್ನು ಬೆಳಿಗ್ಗೆ 9ರಿಂದ 11.30ರವರೆಗೆ ಹಮ್ಮಿಕೊಂಡಿದೆ.ಅಲ್ಲದೇ, ಮಧ್ಯಾಹ್ನ 12.30ಕ್ಕೆ ಗುಗ್ಗಳ ಮತ್ತು ಕೆಂಡಾರ್ಚನೆ ಕಾರ್ಯಕ್ರಮ ಚೌಕಿಮಠ ಆವರಣದಲ್ಲಿ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಇಂದಿನಿಂದ ಸಂದಲ್, ಉರುಸ್ಹಜರತ್ ಸೈಯದ್ ಷಾಹ ಆಲೀಮ್ ದಿವಾನ್ ಅಲೈ ಬಾಬಾ ಅವರ ಸಂದಲ್ ಮತ್ತು ಉರುಸ್ ಸಮಾರಂಭ ನಗರದ ಮಹಾವೀರ ವೃತ್ತದಲ್ಲಿ ಏ. 25ರಿಂದ 27ರವರೆಗೆ ಹಮ್ಮಿಕೊಳ್ಳಲಾಗಿದೆ.25ರಂದು ಬೆಳಿಗ್ಗೆ ಗಂಧೋತ್ಸವ ಮೆರವಣಿಗೆ ತಿಲಕ್‌ನಗರದ ಮುಖ್ಯರಸ್ತೆಯಿಂದ ಹೊರಟು ಮಹಾವೀರ ವೃತ್ತ, ಟ್ಯಾಂಕ್ ಮೊಹಲ್ಲಾ, ಪೆನ್ಷನ್ ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಉರ್ದುಬಜಾರ್, ಕೆ.ಆರ್. ಪುರಂ, ಅಮೀರ್ ಅಹಮದ್ ಸರ್ಕಲ್, ನೆಹರೂ ರಸ್ತೆ, ಗೋಪಿವೃತ್ತ, ಬಾಲರಾಜ್ ರಸ್ತೆ ಮುಖಾಂತರ ದರ್ಗಾ ತಲುಪುತ್ತದೆ. ಸಂಜೆ 6ರಿಂದ ರಾತ್ರಿ 10ರವರೆಗೆ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಮಾಡಲಾಗುತ್ತದೆ.ಏ. 26ರಂದು ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ, 27ರಂದು ಮಗ್ರಿಬ್ ನಮಾಜ್ ನಂತರ ಪ್ರಸಾದ್ ವಿತರಣೆ ಮಾಡಲಾಗುತ್ತದೆ ಎಂದು ಸಮಿತಿಯ ಕಾರ್ಯದರ್ಶಿ ಬಿ. ನಫೀಜ್ ಅಹಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇಂದು ಸತ್ಯನಾರಾಯಣ ಪೂಜೆ

ರಾಜೇಂದ್ರನಗರದ ಶ್ರೀರಾಮ ಮತ್ತು ಅಯ್ಯಪ್ಪಸ್ವಾಮಿ ಸೇವಾ ಸಮಿತಿ, ದವನದ ಹುಣ್ಣಿಮೆ ಮತ್ತು ಹನುಮ ಜಯಂತಿ ಪ್ರಯುಕ್ತ ಏ. 25ರಂದು ಸಂಜೆ 5ಕ್ಕೆ ಸತ್ಯನಾರಾಯಣ ಪೂಜೆ ಹಮ್ಮಿಕೊಂಡಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಜಯಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಏರೋಬಿಕ್ಸ್ ಶಿಬಿರ ನಾಳೆ

ನಿರ್ಮಲಾಸ್ ಆ್ಯಂಟಿ ಒಬೆಸಿಟಿ ಸೆಂಟರ್, ಏ. 26ರಂದು ಒಂದು ತಿಂಗಳ ಕಾಲ ಏರೋಬಿಕ್ಸ್ ಶಿಬಿರ ಹಮ್ಮಿಕೊಂಡಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್: 98455 36702 ಸಂಪರ್ಕಿಸಬಹುದು.

ಪ್ರತಿಕ್ರಿಯಿಸಿ (+)