ಸೋಮವಾರ, ಜನವರಿ 20, 2020
20 °C

ನಗರದ ವಿವಿಧೆಡೆ ಸಂಭ್ರಮದ ಗಣರಾಜ್ಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ನಗರದ ವಿವಿಧೆಡೆ ಗುರುವಾರ ಗಣರಾಜ್ಯೋತ್ಸವನ್ನು ವಿವಿಧ ಸಂಘ-ಸಂಸ್ಥೆಗಳು, ಪಕ್ಷಗಳು ಸಂಭ್ರಮದಿಂದ ಆಚರಿಸಿದವು.ಬಿಜೆಪಿ  ಜಿಲ್ಲಾ ಕಾರ್ಯಾಲಯ: ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ ಧ್ವಜಾರೋಹಣ ಮಾಡುವ ಮೂಲಕ ಗಣರಾಜ್ಯೋತ್ಸವ ಆಚರಿಸಲಾಯಿತು. ಪ್ರಧಾನ ಕಾರ್ಯದರ್ಶಿ ಎಸ್. ದತಾತ್ರಿ, ರಾಜ್ಯ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಗಿರೀಶ್ ಪಟೇಲ್, ನಗರಸಭಾ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ, `ಸೂಡಾ~ ಅಧ್ಯಕ್ಷ ಎಸ್. ಜ್ಞಾನೇಶ್ವರ್, ಎಪಿಎಂಸಿ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ನಗರಸಭಾ ಸದಸ್ಯ ಎನ್.ಜೆ. ರಾಜಶೇಖರ್, ಮುಖಂಡರಾದ ಬಿಳಕಿ ಕೃಷ್ಣಮೂರ್ತಿ, ಹುಲ್ತಿಕೊಪ್ಪ ಶ್ರೀಧರ್, ಉದಯಕುಮಾರ್, ನಗರ ಪ್ರಧಾನ ಕಾರ್ಯದರ್ಶಿ ಎನ್.ಜಿ. ನಾಗರಾಜ್, ಯುವಮೋರ್ಚಾ ನಗರಾಧ್ಯಕ್ಷ ಕೆ.ಎಸ್. ಸುಕುಮಾರ್ ಮತ್ತಿತರರು ಉಪಸ್ಥಿತರಿದ್ದರು.ಜೆಡಿಎಸ್: ಜಿಲ್ಲಾ ಕಚೇರಿ ಆವರಣದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಜಿ. ಮಾದಪ್ಪ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪ್ರತಿಯೊಬ್ಬರು ಕನ್ನಡ ನಾಡಿನ ನೆಲ, ಜಲ ರಕ್ಷಣೆಗಾಗಿ ಕಟಿಬದ್ಧರಾಗಬೇಕು ಹಾಗೂ ದೇಶದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ಮಟ್ಟಹಾಕಬೇಕು ಎಂದರು.ಜಿಲ್ಲಾ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಎಂ. ಸಮಿವುಲ್ಲಾ, ರಾಜ್ಯ ಅಲ್ಪಸಂಖ್ಯಾತರ ಉಪಾಧ್ಯಕ್ಷ ಎಚ್.ಕೆ. ಅಬ್ದುಲ ವಾಜಿದ್,ಜಿಲ್ಲಾ ಮಹಿಳಾ ಅಧ್ಯಕ್ಷರಾದ ಎಸ್.ವಿ. ರಾಜಮ್ಮ, ಎ. ಶಿವಣ್ಣ, ಎಚ್. ರಾಚಯ್ಯ, ಡಿ. ಜಯರಾಮ್ ಮತ್ತಿತರರು ಉಪಸ್ಥಿತರಿದ್ದರು.ಜಿಲ್ಲಾ ವಾಹನ ಮಾಲೀಕರ ಹಾಗೂ ಮಾರಾಟಗಾರರ ಪ್ರತಿನಿಧಿಗಳ ಒಕ್ಕೂಟ: ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ `ಭಯೋತ್ಪಾದನೆ ಅಳಿಸಿ; ದೇಶ ಉಳಿಸಿ~ ಘೋಷಣೆಯೊಂದಿಗೆ ನಗರದಲ್ಲಿ ಮೋಟರ್ ಸೈಕಲ್ ಜಾಥಾ ನಡೆಸಲಾಯಿತು.ದುರ್ಗಿಗುಡಿ ಕೋ ಆಪರೇಟಿವ್ ಸೊಸೈಟಿ:  ಗಣರಾಜ್ಯೋತ್ಸವದ ಅಂಗವಾಗಿ ಸಂಘದ ಅಧ್ಯಕ್ಷ ಗೋವಿಂದಪ್ಪ ಧ್ವಜಾರೋಹಣ ನೆರವೇರಿಸಿದರು.

ನಿರ್ದೇಶಕರಾದ ಎನ್. ಉಮಾಪತಿ, ವಾಸುದೇವ್, ಎಸ್.ಎಂ. ವೆಂಕಟೇಶ್, ವಿ. ರಾಜು, ತೇಜ್‌ಕುಮಾರ್, ಈಶ್ವರಾಚಾರ್, ಎಸ್.ಡಿ. ಸೋಮಶೇಖರ್, ಮಮತಾ ಎನ್. ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.

ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ: ನಿರ್ದೇಶಕ ಎನ್. ಉಮಾಪತಿ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಸಿ. ಹೊನ್ನಪ್ಪ, ಹಿರಿಯ ನಿರ್ದೇಶಕ ಎಸ್.ಪಿ ಶೇಷಾದ್ರಿ, ಎಸ್. ಚಿಂತಾಮಣಿರಾವ್, ಕೆ. ರಂಗನಾಥ್ ಉಪಸ್ಥಿತರಿದ್ದರು.ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ: ಕಚೇರಿಯಲ್ಲಿ ಧ್ವಜಾರೋಹಣವನ್ನು ಅಧ್ಯಕ್ಷ ಎಸ್. ಜ್ಞಾನೇಶ್ವರ್ ನೆರವೇರಿಸಿದರು. ಆಯುಕ್ತ ಸದಾಶಿವಪ್ಪ ಹಾಗೂ ಪ್ರಾಧಿಕಾರದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ದಲಿತ ಸಂಘರ್ಷ ಸಮಿತಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿಎಸ್‌ಎಸ್ ರಾಜ್ಯ ಸಂಚಾಲಕ ಗುರುಮೂರ್ತಿ ಮಾತನಾಡಿ, ಆಧುನಿಕ ಚರಿತ್ರೆಯಲ್ಲಿ ಪೊಕ್ರಾನ್ ಸಿಡಿಸಿ ಬುದ್ಧನನ್ನು ಮರೆಸಿದ್ದು, ಬಾಬ್ರಿ ಮಸೀದಿ ಕೆಡವಿ ಅಂಬೇಡ್ಕರ್ ಪರಿನಿರ್ಮಾಣವನ್ನು ಮರೆಸಿದ್ದು ಅಕ್ಷಮ್ಯ. ಇಂತಹ ಕರಾಳ ರಾಜಕೀಯ ಚರಿತ್ರೆಯನ್ನು ಹರಿದೊಗೆದು ಸಾಂಸ್ಕೃತಿಕ ಮತ್ತು ಸಾಮಾಜಿಕ ಚರಿತ್ರೆ ನಿರ್ಮಾಣದ ಅಗತ್ಯವಿದೆ ಎಂದರು. ಮುಖ್ಯ ಅತಿಥಿಗಳಾಗಿ ಪತ್ರಕರ್ತ ಆರುಂಡಿ ಶ್ರೀನಿವಾಸ್‌ಮೂರ್ತಿ, ಸಾಗರದ ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅಧ್ಯಾಪಕ ಬಿ.ಎಲ್. ರಾಜು, ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಅಧ್ಯಾಪಕರಾದ ಮಹಾದೇವಸ್ವಾಮಿ, ಬಾಲಸ್ವಾಮಿ ಹಾಗೂ ಎಲ್‌ಐಸಿಯ ಲೋಕನಾಥ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಹಾಲೇಶ್ ಸ್ವಾಗತಿಸಿದರು. ಜಿಲ್ಲಾ ಸಂಘಟನಾ ಸಂಚಾಲಕ ಬಿ.ಕೆ. ಹನುಮಂತಪ್ಪ, ತಾಲ್ಲೂಕು ಸಂಚಾಲಕರಾದ ಶೇಷಪ್ಪ, ಅಬ್ಬರಘಟ್ಟೆ ಮಂಜುನಾಥ್, ಹರಿಗೆ ರವಿ, ಬೊಮ್ಮನಕಟ್ಟೆ ಆಂಜಿನಿ ಮತ್ತಿತರರು ಉಪಸ್ಥಿತರಿದ್ದರು.ಹೊಸ ಗುಂಡಪ್ಪಶೆಡ್ ಮತ್ತು ಮಲ್ಲೇಶ್ವರ ನಗರ ನಿವಾಸಿಗಳ ಸಂಘ: ನಗರಸಭೆ ಮತ್ತು ಬಡಾವಣೆ ನಿವಾಸಿಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ ಧ್ವಜಾರೋಹಣ ನೆರವೇರಿಸಿದರು.ಇದೇ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು.

ಜಾವಳ್ಳಿಯ ಜ್ಞಾನದೀಪ ಶಾಲೆ:  ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿದ ತಿರುವನಂತಪುರಂ ಇಸ್ರೋ ನಿರ್ದೇಶಕ ಡಾ.ಬಿ.ಎನ್. ಸುರೇಶ್, ಜ್ಞಾನ ಸಂಪತ್ತಿಗಿಂತ ಬೇರೆ ಸಂಪತ್ತು ಬೇರೊಂದಿಲ್ಲ. ಇದನ್ನು ವಿದ್ಯಾರ್ಜನೆಯಿಂದಲೇ ಗಳಿಸಬೇಕು. ದೇಶದ ಅಭಿವೃದ್ಧಿ ಇದರ ಮೂಲಕವೇ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಶಾಲಾ ವಿದ್ಯಾರ್ಥಿಗಳಿಂದ ಭಾಷಣ, ದೇಶಭಕ್ತಿಗೀತೆ ಹಾಗೂ ಹೊಯ್ಸಳ ಸಾಮ್ರೋಜ್ಯದ ಕುರಿತ ಕಿರುರೂಪಕ ಮುಂತಾದ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದಲ್ಲಿ ಜ್ಞಾನದೀಪ ವಿದ್ಯಾಸಂಸ್ಥೆ ಕಾರ್ಯದರ್ಶಿ ಹಾಗೂ ಶೈಕ್ಷಣಿಕ ನಿರ್ದೇಶಕ ವಿ. ದೇವೇಂದ್ರ, ಆಡಳಿತಾಧಿಕಾರಿ ಮಧು, ಶಾಲೆಯ ಪ್ರಾಂಶುಪಾಲ ಶ್ರೀಕಾಂತ್ ಎಂ ಹೆಗಡೆ, ಉಪಪ್ರಾಂಶುಪಾಲ ರಿಜಿ ಜೋಸೆಫ್, ಮುಖ್ಯೋಪಾಧ್ಯಾಯಿನಿ ವಾಣಿ ಕೃಷ್ಣಪ್ರಸಾದ್, ಜ್ಞಾನದೀಪ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಚಂದ್ರಶೇಖರಪ್ಪ ಮತ್ತು  ಅರಬಿಂದೋ ಕಾಲೇಜಿನ ಪ್ರಾಂಶುಪಾಲ ನಾಗರಾಜ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)