ನಗರಸಭೆ ಆಸ್ತಿ ಒತ್ತುವರಿ: ಸದಸ್ಯೆ ತರಾಟೆ

7

ನಗರಸಭೆ ಆಸ್ತಿ ಒತ್ತುವರಿ: ಸದಸ್ಯೆ ತರಾಟೆ

Published:
Updated:

ಶಿರಾ: `ನಮ್ಮನ್ನು ಜನ ಆಯ್ಕೆ ಮಾಡಿರು ವುದು ನಗರಸಭೆ ಆಸ್ತಿ ಹೊಡೆಯಿರಿ ಅಂತ ಅಲ್ಲ. ನಗರಸಭೆ ಆಸ್ತಿ ರಕ್ಷಣೆ ಮಾಡಲು. ಆದರೆ ನೀವು ನಗರಸಭೆ ಆಸ್ತಿ ಹೊಡೆಯುವರಿಗೆ ಬೆಂಬಲ ಕೊಡುತ್ತಿದ್ದೀರಿ~ ಎಂದು ಮಹಿಳಾ ಸದಸ್ಯರೊಬ್ಬರು ಅಧ್ಯಕ್ಷರು ಹಾಗೂ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಗುರುವಾರ ನಡೆಯಿತು.ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯೆ ಪಾರ್ವತಮ್ಮ ದಾಸಪ್ಪ ಮಾತ ನಾಡಿ, ಕಲ್ಲುಕೋಟೆ 70ನೇ ಸರ್ವೆ ನಂಬರ್‌ನಲ್ಲಿ 1993- 94ನೇ ಸಾಲಿ ನಲ್ಲಿ ಆಗಿನ ಪುರಸಭೆ 38 ಗುಂಟೆ ಆಸ್ತಿ ಖರೀದಿಸಿ ಕಲ್ಲು ಹಾಕಿಸಿತ್ತು. ಈಗ ಕೋಟ್ಯಂತರ ರೂಪಾಯಿ ಬೆಲೆ ಬಾಳು ತ್ತದೆ.

 

ಆದರೆ ಅದರ ಪಕ್ಕದ ಆಸ್ತಿ ಮಾಲೀಕ ಕಲ್ಲು ಕಿತ್ತು ನಗರಸಭೆ ಆಸ್ತಿ ಒತ್ತುವರಿ ಮಾಡಿದ್ದಾನೆ. ಆತನ ಮೇಲೆ ಕ್ರಮಕೈಗೊಳ್ಳುವ ಬದಲು ಈಗ ಆತನ ಆಸ್ತಿಯನ್ನು ಭೂಪರಿವರ್ತನೆ ಮಾಡಲು ಸಭೆಯಲ್ಲಿ ವಿಷಯ ಪ್ರಸ್ತಾಪಿಸುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಗರಸಭೆ ಅಧ್ಯಕ್ಷ ಟಿ.ರಘು, ಸದಸ್ಯ ರಾದ ಆರ್.ರಾಮು, ಆರ್.ಉಗ್ರೇಶ್, ಎಂ.ಎನ್. ರಾಜು ಮತ್ತಿತರರು ಮಾತನಾಡಿ, ಈಗ ಭೂ ಪರಿವರ್ತನೆಗೆ ಬಂದಿರುವುದು 70ನೇ ಸರ್ವೆ ನಂಬರ್ ಜಮೀನಲ್ಲ. 77ನೇ ಸರ್ವೆ ನಂಬರ್ ಜಮೀನು ಎಂದು ಸಮಜಾಯಿಸಿ ನೀಡಿ ದರು.ಇದಕ್ಕೆ ಒಪ್ಪದ ಪಾರ್ವತಮ್ಮ, ಅಧ್ಯಕ್ಷರೇ ನಿಮಗೂ ವಿವರ ತಿಳಿದಿಲ್ಲ. ಆತ ಭೂ ಪರಿವರ್ತನೆಗೆ ಕಳುಹಿಸಿರುವ ಜಮೀನಿನ ವಿವರದಲ್ಲಿ ತನ್ನ ಹೆಸರನ್ನೇ ನಮೂದಿಸಿಲ್ಲ ಏಕೆ ಎಂದು ಪ್ರಶ್ನಿಸಿದರು. ಇದಕ್ಕೆ ಸದಸ್ಯರಾದ ಅನ್ನಪೂರ್ಣಮ್ಮ, ಈರಣ್ಣ ಸಹಮತ ವ್ಯಕ್ತಪಡಿಸಿ ಭೂಪರಿ ವರ್ತನೆ ವಿವರದಲ್ಲಿ ಹೆಸರು ನಮೂದಿ ಸದ ಬಗ್ಗೆ ಅಕ್ಷೇಪ ವ್ಯಕ್ತಪಡಿಸಿದರು.ನಗರಸಭೆ ಆಸ್ತಿ ಕಬಳಿಸುವುದರಲ್ಲಿ ಒಳ ಸಂಚು ಇದೆ ಎಂದು ಸದಸ್ಯರ ವಿರುದ್ಧ ಗಂಭೀರ ಆರೋಪ ಮಾಡಿದ ಪಾರ್ವತಮ್ಮ, 70 ಮತ್ತು 77ನೇ ಸರ್ವೆ ನಂಬರ್ ಜಮೀನು ಒಬ್ಬನದೇ ಆಗಿದ್ದು, ಆತ 70ನೇ ಸರ್ವೆ ನಂಬರ್‌ನಲ್ಲಿ ನಗರಸಭೆ ಆಸ್ತಿ ಆಕ್ರಮಿಸಿದ್ದಾನೆ.

 

ಆದ್ದರಿಂದ ಆತನ ಬೇರೆ ಆಸ್ತಿ 77ನೇ ಸರ್ವೆ ನಂಬರ್‌ಗೆ ಭೂಪರಿವರ್ತನೆ ನೀಡುವುದಿಲ್ಲ ಎಂದು ಸಭಾ ನಡಾವಳಿಕೆಯಲ್ಲಿ ದಾಖಲಿಸಿ ಎಂದು ಪಟ್ಟು ಹಿಡಿದರು. ಅಲ್ಲದೆ ನಡಾವಳಿಕೆ ಪುಸ್ತಕದಲ್ಲಿ ತಮ್ಮದೇ ಅಭಿಪ್ರಾಯ ದಾಖಲಿಸುವಲ್ಲಿ ಯಶಸ್ವಿಯಾದರು.ಆಶ್ರಯ ಯೋಜನೆಯಡಿ ಅರ್ಜಿ ಕರೆದು ಇದುವರೆಗೂ ನಿವೇಶನ ನೀಡ ಲಿಲ್ಲ. ಶಾಸಕರು ಪ್ರತಿಯೊಬ್ಬ ಸದಸ್ಯ ರಿಗೂ ತಲಾ ಐದು ನಿವೇಶನ ನೀಡುವ ಅಧಿಕಾರ ನೀಡುವುದಾಗಿ ಹೇಳಿದ್ದರು. ಇದನ್ನು ನಂಬಿದ ನಾವು ವಾರ್ಡ್‌ನಲ್ಲಿ ನಿವೇಶನ ಕೊಡಿಸುವ ಭರವಸೆ ನೀಡಿದ್ದೇವು.ಆದರೆ ಈಗ ಶಾಸಕರು ರಸ್ತೆ ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಳ್ಳುವವರಿಗೆ ನಿವೇಶನ ನೀಡುವುದಾಗಿ ಹೇಳುತ್ತಿದ್ದಾರೆ. ಆಗಿದ್ದರೆ ಈಗಾಗಲೇ ಅರ್ಜಿ ಸಲ್ಲಿಸಿದವರು ಎನಾಗಬೇಕು?

 

ಅರ್ಜಿ ಸಲ್ಲಿಸದೆ ರಸ್ತೆ ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡವರಿಗೆ ಆಶ್ರಯ ಯೋಜನೆ ಯಡಿ ನಿವೇಶನ ನೀಡಲು ಬರುವುದಿಲ್ಲ ಎಂಬುದನ್ನು ಶಾಸಕರಿಗೆ ಮನವರಿಕೆ ಮಾಡಿಕೊಡಿ ಎಂದು ಸದಸ್ಯರಾದ ಆರ್.ರಾಮು, ಎಂ.ಎನ್.ರಾಜು ಮತ್ತಿತ ರರು ಪೌರಾಯುಕ್ತ ಬಿ.ಟಿ.ರಂಗಸ್ವಾ ಮಿಗೆ ಸಲಹೆ ಮಾಡಿದರು.ಉಪಾಧ್ಯಕ್ಷ ಅಮಾನುಲ್ಲಾ ಖಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.

ನಾಳೆ ಸಭೆಶಿರಾ: ತಾಲ್ಲೂಕಿನ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯನ್ನು ಫೆ. 25ರ ಬೆಳಿಗ್ಗೆ 11ಕ್ಕೆ ತಹಶೀಲ್ದಾರ್ ಕಚೇರಿಯಲ್ಲಿ ಕರೆಯಲಾಗಿದೆ. ಸಭೆಗೆ ದಲಿತ ಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ತಾಲ್ಲೂಕು ಮಟ್ಟದ ಎಲ್ಲ ಅಧಿಕಾರಿಗಳು ಖುದ್ದಾಗಿ ಭಾಗವಹಿಸುವಂತೆ ತಹಶೀಲ್ದಾರ್ ಜಿ.ಎಚ್. ನಾಗಹನುಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry