ಶುಕ್ರವಾರ, ಮೇ 7, 2021
19 °C

ನಗರಸಭೆ ಸದಸ್ಯನ ವಿರುದ್ಧ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ನಗರಸಭೆ ಆಸ್ತಿಗೆ ಹಾನಿ ಮಾಡಿರುವುದು ಮತ್ತು ನಗರಸಭೆ ಸಿಬ್ಬಂದಿಯ ಕಾರ್ಯನಿರ್ವಹಣೆಗೆ ತಡೆಯೊಡ್ಡಿದ ಆರೋಪದ ಮೇಲೆ ನಗರಸಭೆ ಸದಸ್ಯ ಕೆ.ಪಿ.ಮಹೇಶ್ ವಿರುದ್ಧ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಗರಸಭೆ ಆಯುಕ್ತೆ ರೋಹಿಣಿ ಸಿಂಧೂರಿ ದೂರು ದಾಖಲಿಸಿದ್ದಾರೆ.ಕುಡಿಯುವ ನೀರಿನ ಪೈಪುಗಳಿಗೆ ಎಂಡ್ ಕ್ಯಾಪ್ ಹಾಕಿರುವುದು, ಕೊಳವೆ ಬಾವಿಯ ಪಂಪ್, ಕೇಬಲ್, ಜಿಐ ಪೈಪ್ ಹೊತ್ತೊಯ್ದಿರುವುದು, ನಗರಸಭೆಯ ವಾಲ್‌ಮೆನ್‌ಗಳಾದ ನಾಗರಾಜು, ಶಿವಣ್ಣ ನೀರು ಬಿಡಲು ತೆರಳಿದ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿರುವ ಆರೋಪದ ಮೇಲೆ ದೂರು ನೀಡಲಾಗಿದೆ.ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಸಾರ್ವಜನಿಕರು, ನಗರಸಭೆ ಸಿಬ್ಬಂದಿ ನೀಡಿದ ದೂರನ್ನು ಆಧರಿಸಿ ಸದಸ್ಯ ಕೆ.ಪಿ.ಮಹೇಶ್ ಮೇಲೆ ಪ್ರಕರಣ ದಾಖಲಿಸಿ, ಕ್ರಮ ಜರುಗಿಸಬೇಕು ಎಂದು ಕೋರಿದ್ದಾರೆ.ಸಾರ್ವಜನಿಕರು ತಮ್ಮ ಹೆಸರನ್ನು ಗೌಪ್ಯವಾಗಿಡಬೇಕೆಂದು ಕೋರಿರುವ ಕಾರಣ ವಿಚಾರಣೆ ಸಂದರ್ಭದಲ್ಲಿ ದೂರಿಗೆ ಸಾಕ್ಷ್ಯ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.ಸಾರ್ವಜನಿಕರಿಗೆ ಮೂಲ ಸೌಕರ್ಯ ಒದಗಿಸಲು ವಿಫಲವಾಗಿರುವ ಅಧಿಕಾರಿಗಳು ದುರುದ್ದೇಶದಿಂದ ದೂರು ದಾಖಲಿಸಿದ್ದಾರೆ. ಆಯುಕ್ತರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಸದಸ್ಯ ಕೆ.ಪಿ.ಮಹೇಶ್ ಪ್ರತಿಕ್ರಿಯಿಸಿದರು.ಚುನಾಯಿತ ಪ್ರತಿನಿಧಿಗಳನ್ನು ನಿರ್ಲಕ್ಷಿಸಿ ಏಕಾಏಕಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು ತಪ್ಪು. ಈ ಪ್ರಕರಣ ನಮ್ಮ ವ್ಯಾಪ್ತಿಯಲ್ಲಿ ಚರ್ಚೆಯಾಗಿ ನಮ್ಮ ವ್ಯಾಪ್ತಿಯಲ್ಲಿಯೇ ಮುಗಿಯಬೇಕಾಗಿತ್ತು. ಸಾರ್ವಜನಿ ಕರು ನೀಡಿರುವ ದೂರಿನ ಕುರಿತು ಚರ್ಚಿಸಬೇಕಿತ್ತು. ಆಯುಕ್ತರು ತಪ್ಪು ಮಾಡಿದ್ದಾರೆ ಎಂದು ನಗರಸಭೆ ಅಧ್ಯಕ್ಷೆ ದೇವಿಕಾ ಸಿದ್ದಲಿಂಗೇಗೌಡ ಅಭಿಪ್ರಾಯಪಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.