ಬುಧವಾರ, ಏಪ್ರಿಲ್ 14, 2021
25 °C

ನಗರೀಕರಣದ ಪರಿಣಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾನಗರಗಳು ಅಭಿವೃದ್ಧಿಯ ದ್ಯೋತಕ ಎಂಬಂತೆ ಕಂಡುಬಂದರೂ ಅವುಗಳು ಅನೇಕ ಸಮಸ್ಯೆಗಳಿಗೆ ಎಡೆಮಾಡಿಕೊಟ್ಟಿವೆ. ನಗರೀಕರಣದಿಂದ ಸಾಮಾಜಿಕ ಅಸಮತೋಲನ ಉಂಟಾಗಿ ಹಲವು ಸಮಸ್ಯೆಗಳು ಸೃಷ್ಟಿಯಾಗಿರುವುದನ್ನು ಕಲಾವಿದ ಮಂಜು ಹಾಸನ್ ಅವರು ತಮ್ಮ ಕಲಾಕೃತಿಗಳಲ್ಲಿ ಎತ್ತಿ ತೋರಿಸಿದ್ದಾರೆ.ಕೈಗಾರಿಕೆಗಳು ಹೆಚ್ಚಾಗಿ ನಗರ ಕೇಂದ್ರಿತವಾಗಿರುವುದು ಮತ್ತು ಮಹಾನಗರಗಳಲ್ಲಿ ಸದಾ ಒಂದಿಲ್ಲೊಂದು ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವುದರಿಂದ ಸಹಜವಾಗಿಯೇ ಉದ್ಯೋಗಾವಕಾಶಗಳು ಲಭಿಸುತ್ತವೆ. ಇದರಿಂದಾಗಿ  ಗ್ರಾಮೀಣ ಪ್ರದೇಶದ ಜನ ಉದ್ಯೋಗ ಅರಸಿಕೊಂಡು ವಲಸೆ ಹೋಗುತ್ತಿರುವುದರಿಂದ ನಗರ ಮತ್ತು ಹಳ್ಳಿಗಳ ನಡುವಿನ ಅಂತರ ಹೆಚ್ಚಾಗಿ ಸಾಮಾಜಿಕ ಅಸಮತೋಲನಕ್ಕೆ ಕಾರಣವಾಗುತ್ತಿದೆ. ಮಹಾನಗರಗಳಲ್ಲಿ ಮಿತಿಮೀರಿದ ಜನಸಂಖ್ಯೆಯಿಂದ ಅನೇಕ ಹೊಸ ಹೊಸ ಸಮಸ್ಯೆಗಳು ಸೃಷ್ಟಿಯಾಗಿ ಜನರ ಬದುಕು ಅಸಹನಿಯವಾಗುತ್ತಿದೆ ಎಂಬುದನ್ನು ಆ್ಯಕ್ರಿಲಿಕ್ ಕಲಾಕೃತಿಗಳಲ್ಲಿ ತೋರಿಸಿದ್ದಾರೆ.ಮಹಿಳೆಯೊಬ್ಬರು ರಸ್ತೆಯ ಡಿವೈಡರ್‌ಗಳಿಗೆ ಬಣ್ಣ ಬಳಿಯುತ್ತಿರುವುದು, ಕಸದ ರಾಶಿ ಹೊತ್ತೊಯ್ಯುತ್ತಿರುವುದು, ಹಲವು ಸಿಗ್ನಲ್‌ಗಳಿರುವ ಕಂಬದ ಮೇಲೆ ಹಕ್ಕಿ ಕುಳಿತಿರುವ ಕಲಾಕೃತಿಗಳು ವಿಡಂಬನೆಯಿಂದ ಕೂಡಿವೆ. ಒಟ್ಟಿನಲ್ಲಿ ಬೆಳೆಯುತ್ತಿರುವ ಮಹಾನಗರಗಳಿಂದ ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಮೇಲೆ ನಕರಾತ್ಮಕ ಪರಿಣಾಮ ಉಂಟಾಗಿದ್ದು, ಮನುಷ್ಯನ ಬದುಕು ಸಂಕೀರ್ಣಮಯವಾಗಿದೆ ಎಂದು ಮಂಜು ಅವರು ತಮ್ಮ ಆರು ಕಲಾಕೃತಿಗಳ ಮೂಲಕ ಹೇಳಲು ಪ್ರಯತ್ನಿಸಿದ್ದಾರೆ. ಭಾನುವಾರ ಆರಂಭಗೊಂಡಿರುವ ’ನಗರ ದುರಂತ’ ಹೆಸರಿನ ಚಿತ್ರಕಲಾ ಪ್ರದರ್ಶನ ಶುಕ್ರವಾರದ ವರೆಗೆ ನಡೆಯಲಿದೆ.ಸ್ಥಳ: ಶಾಂತಿರೋಡ್ ಸ್ಟುಡಿಯೋ, ಶಾಂತಿನಗರ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.