ಬುಧವಾರ, ನವೆಂಬರ್ 13, 2019
18 °C

ನಗರ ವಾರ್ತೆ

Published:
Updated:

ಮೇ 5ಕ್ಕೆ ಜಾತ್ರೆ, ಸಂತೆ ನಿಷೇಧ

ವಿಧಾನಸಭೆಗೆ ಚುನಾವಣೆ ಹಿನ್ನೆಲೆಯಲ್ಲಿ ಮೇ 5ರಂದು ಮತದಾನ ನಡೆಯುತ್ತಿರುವ ಜಿಲ್ಲೆಯಲ್ಲಿ ಅಂದು ನಡೆಯುವ ಸಂತೆ, ಉತ್ಸವ ಹಾಗೂ ಜಾತ್ರೆಗಳನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಎಸ್. ಶಶಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ.ಮೇ 5 ರಂದು ಮೊಳಕಾಲ್ಮುರು ಕಸಬಾ ನಾಗಸಮುದ್ರ ಸಂತೆ, ಚಳ್ಳಕೆರೆ ಪಟ್ಟಣದಲ್ಲಿನ ಸಂತೆ, ಹಿರಿಯೂರು ಧರ್ಮಪುರ ಹೋಬಳಿ ಹರಿಯಬ್ಬೆ ಸಂತೆ, ಹೊಳಲ್ಕೆರೆ ಪಟ್ಟಣದಲ್ಲಿನ ಸಂತೆ ಹಾಗೂ ಹೊಸದುರ್ಗ ತಾಲ್ಲೂಕಿನ ಬೆಲಗೂರಿನಲ್ಲಿ ನಡೆಯುವ ಪ್ರಸನ್ನ ರಾಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮತ್ತು ವಾರದ ಸಂತೆ ಹಾಗೂ ಗುಡ್ಡದನೇರಲಕರೆ ವಾರದ ಸಂತೆ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.ಮದ್ಯ ಮಾರಾಟ ನಿಷೇಧ

ವಿಧಾನಸಭೆಗೆ ಚುನಾವಣೆಗೆ ಮೇ 5ರಂದು ಮತದಾನ ಮತ್ತು ಮೇ 8ರಂದು ನಡೆಯುವ ಮತ ಎಣಿಕೆ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಎಸ್. ಶಶಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ.ಮೇ 3ರ ಸಂಜೆ 5ರಿಂದ ಮೇ 5ರ ಸಂಜೆ 5ರವರೆಗೆ ಮತ್ತು ಮೇ 8ರ ಬೆಳಿಗ್ಗೆ 6 ರಿಂದ ಮೇ 9ರ ಬೆಳಿಗ್ಗೆ 6ರ ವರೆಗೆ ಎಲ್ಲಾ ಮದ್ಯದಂಗಡಿ ಮುಚ್ಚಲು ಆದೇಶಿಸಿ ಮದ್ಯ ಮಾರಾಟ ನಿಷೇಧಿಸಲಾಗಿದೆ.ನವೀನ್‌ಕುಮಾರ್‌ಗೆ ಪಿಎಚ್‌ಡಿ

ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎನ್.ಪಿ. ನವೀನ್‌ಕುಮಾರ್ ಅವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಪಿಎಚ್‌ಡಿ ನೀಡಿದೆ.ಬೆಂಗಳೂರಿನ ಎಂ.ಎಸ್. ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿ. ರಾಮಚಂದ್ರಮೂರ್ತಿ ಮತ್ತು ಸಹ ಪ್ರಾಧ್ಯಾಪಕ ಡಾ.ಪಿ.ಎ. ದಿನೇಶ್ ಮಾರ್ಗದರ್ಶನದಲ್ಲಿ “ಸ್ಟ್ರೆಂಚಿಗ್ ಶೀಟ್ ಪ್ರಾಬ್ಲಮ್ಸ ಇನ್ ನ್ಯೂಟೋನಿಯನ್ ನಾನ್ ನ್ಯೂಟೋನಿಯನ್ ಲಿಕ್ವಿಡ್ಸ್‌” ಎನ್ನುವ ಪ್ರಬಂಧ ಮಂಡಿಸಿದ್ದಕ್ಕಾಗಿ ಪಿಎಚ್‌ಡಿ ನೀಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ರಮೇಶ್‌ಗೆ ಪಿಎಚ್‌ಡಿ

ದಾವಣಗೆರೆ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಜಿ.ಕೆ. ರಮೇಶ್ ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಪಿಎಚ್‌ಡಿ ಪ್ರಧಾನ ಮಾಡಿದೆ.ಕುವೆಂಪು ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಬಿ.ಜೆ. ಗಿರೀಶ್ ಅವರ ಮಾರ್ಗದರ್ಶನದಲ್ಲಿ `ಎ ಸ್ಟಡಿ ಆನ್ ಡಸ್ಟಿ ಫ್ಲೂಯಡ್ ಫ್ಲೋ ಓವರ್ ಎ ಫ್ಲಾಟ್ ಪ್ಲೇಟ್' ವಿಷಯದ ಪ್ರಬಂಧ ಮಂಡಿಸಿದ್ದಕ್ಕಾಗಿ ಪಿಎಚ್‌ಡಿ ನೀಡಿದೆ ಎಂದು ಪ್ರಕಟಣೆಯ್ಲ್ಲಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)