ಗುರುವಾರ , ನವೆಂಬರ್ 21, 2019
26 °C

ನಗರ ವಾರ್ತೆ

Published:
Updated:

25ಕ್ಕೆ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಆದಿಚುಂಚನಗಿರಿ ಶಾಖಾ ಮಠ ಸಂಯುಕ್ತವಾಗಿ ಏ. 25ರಂದು 6.30ಕ್ಕೆ ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ 92ನೇ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಏರ್ಪಡಿಸಲಾಗಿದೆ.ಪ್ರಸನ್ನನಾಥ ಸ್ವಾಮೀಜಿ ಉದ್ಘಾಟಿಸುವರು. ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಭಾಗವಹಿಸುವರು. ಶಿಕ್ಷಣ ಸಂಯೋಜಕ ಶಂಕರಶಾಸ್ತ್ರಿ `ದ.ರಾ. ಬೇಂದ್ರೆ ಸಾಹಿತ್ಯದಲ್ಲಿನ ರಸಸ್ವಾದ' ಕುರಿತು ಮಾತನಾಡುವರು. ದಕ್ಷಿಣ ಕನ್ನಡದ ಸುಳ್ಯದ ಹಾಸ್ಯ ಮತ್ತು ಮಿಮಿಕ್ರಿ ಕಲಾವಿದ ಪಟ್ಟಾಭಿರಾಮ ಸುಳ್ಯ ಭಾಗವಹಿಸುವರು.ಮಾಧ್ವ ಮಕ್ಕಳಿಗೆ ಉಚಿತ ಬೇಸಗೆ ಶಿಬಿರ

ವಿಶ್ವ ಮಧ್ವ ಮಹಾಪರಿಷತ್‌ನ ಜಿಲ್ಲಾ ಶಾಖೆ ವತಿಯಿಂದ ಮೇ 5ರಿಂದ 11ರ ವರೆಗೆ ಮಾಧ್ವ ಮಕ್ಕಳಿಗಾಗಿ ಬೇಸಗೆ ಶಿಬಿರವನ್ನು ನಗರದ ಕೆ.ಆರ್. ಪುರಂ ರಸ್ತೆಯ ಸಂಜೀವಾಂಜನೇಯ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.ಉಪನಯನವಾದ ಗಂಡು ಮಕ್ಕಳು ಹಾಗೂ 10 ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಬಹುದು.

ಶಿಬಿರವು ಸಂಪೂರ್ಣ ಉಚಿತವಾಗಿದ್ದು ದೇವಪೂಜಾ ಕಾರ್ಯ, ಹರಿಕಥಾಮೃತಸಾರ, ದೇವರ ನಾಮ, ಸ್ತೋತ್ರಗಳು ಸೇರಿದಂತೆ ಹಲವು ಧಾರ್ಮಿಕ ವಿಚಾರಗಳ ಕುರಿತು ಹೇಳಿಕೊಡಲಾಗುವುದು. ಶಿಬಿರದ ಸುಪಯೋಗಪಡಿಸಿಕೊಳ್ಳುವಂತೆ ಪರಿಷತ್ ಪ್ರಕಟಣೆಯಲ್ಲಿ ತಿಳಿಸಿದೆ. ಮಾಹಿತಿಗೆ ಕುಷ್ಟಗಿ ವಾಸುದೇವಮೂರ್ತಿ, ಮೊಬೈಲ್: 94802 56798, ಬಾಳಗಾರು ಜಯತೀರ್ಥಾಚಾರ್,

ಮೊಬೈಲ್: 94802 56798, ಮುರುಳೀಧರ್ ದೇಶಪಾಂಡೆ, ಮೊಬೈಲ್: 94810 63347 ಸಂಪರ್ಕಿಸಬಹುದು.ಆಲದಹಳ್ಳಿಯಲ್ಲಿ ವೀರಭದ್ರಸ್ವಾಮಿ ರಥೋತ್ಸವ

ತಾಲ್ಲೂಕಿನ ಹೊಳಲೂರು ಹೋಬಳಿಯ ಆಲದಹಳ್ಳಿಯ ವೀರಭದ್ರಸ್ವಾಮಿ ಹಾಲಸ್ವಾಮಿ ದೇವಸ್ಥಾನ ಸೇವಾ ಸಮಿತಿ, ಏ. 24ರವರೆಗೆ ವೀರಭದ್ರಸ್ವಾಮಿ ರಥೋತ್ಸವ ಮತ್ತು ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಂಡಿದೆ.21ಕ್ಕೆ ಕಂಕಣಧಾರಣೆ ಮತ್ತು ಧ್ವಜಾರೋಹಣ, 22ರಂದು ಅಭಿಷೇಕ, 23ಕ್ಕೆ ಕೆಂಡದ ಅರ್ಚನೆ, ಮಕ್ಕಳ ಜವುಳ, ಧಾರೆ ಮಹೋತ್ಸವ ಹಾಗೂ ರಥೋತ್ಸವ ನಡೆಯಲಿದೆ. 24ರಂದು ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ ಏರ್ಪಡಿಸಲಾಗಿದೆ.ಇಂದು `ಹಾಡು-ಮಾತು' ವಿನೂತನ ಕಾರ್ಯಕ್ರಮ

ಹೊಳೆಹೊನ್ನೂರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ `ಜನ ಬದುಕಲೆಂದು ಹಾಡು-ಬರಹ' ಎಂಬ ವಿನೂತನ ಹಾಡು-ಮಾತಿನ ಕಾರ್ಯಕ್ರಮವನ್ನು ಏ. 22ರಂದು ಬೆಳಿಗ್ಗೆ 10ಕ್ಕೆ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.ಪ್ರೊ. ಕೃಷ್ಣಮೂರ್ತಿ ಬಿಳಿಗೆರೆ, ಕೆ.ಎಚ್. ಜಯರಾಮ, ಡಾ.ಶುಭಾ ಮರವಂತೆ, ಡಾ.ಬಿದರಗೋಡು ನಾಗೇಶ್, ಡಾ.ರಾಜೇಂದ್ರ ಹಾಡು-ಮಾತಿನ ಮೂಲಕ ಕಾರ್ಯಕ್ರಮ ನಡೆಸಿಕೊಡುವರು. ಕಾರ್ಯಕ್ರಮವನ್ನು ಸಾಹಿತಿ ಡಾ.ಶ್ರೀಕಂಠ ಕೂಡಿಗೆ ಉದ್ಘಾಟಿಸುವರು. ಡಾ.ಮೇಟಿ ಮಲ್ಲಿಕಾರ್ಜುನ್ ಪ್ರಧಾನ ಭಾಷಣ ಮಾಡುವರು.ಮಂಗಳವಾರವೂ ಸಿಂಹಧಾಮ ವೀಕ್ಷಣೆಗೆ ಅವಕಾಶ    

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಆಡಳಿತಕ್ಕೊಳಪಡುವ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮವು ಪ್ರವಾಸಿಗರ ವೀಕ್ಷಣೆಯ ಅನುಕೂಲಕ್ಕಾಗಿ ಏ. 23, 30 ಹಾಗೂ ಮೇ ತಿಂಗಳ ಎಲ್ಲಾ ಮಂಗಳವಾರದಂದು ತೆರೆದಿರುತ್ತದೆ ಎಂದು ವನ್ಯಜೀವಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ಜೆ. ರವಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಬಸವರಾಜಪ್ಪ ನಿಧನಕ್ಕೆ ಸಂತಾಪ

ಲೋಕೋಪಯೋಗಿ ಇಲಾಖೆ ನಿವೃತ್ತ ಎಂಜಿನಿಯರ್ ಕೆ. ಬಸವರಾಜಪ್ಪ ನಿಧನಕ್ಕೆ ಶಿವಮೊಗ್ಗ ಜಿಲ್ಲಾ ಹಿಂದುಳಿದ ಜಾತಿ ಮತ್ತು ವರ್ಗಗಳ ಒಕ್ಕೂಟ ತೀವ್ರ ಸಂತಾಪ ವ್ಯಕ್ತಪಡಿಸಿದೆ.ಈ ಸಂಬಂಧ ಜಿಲ್ಲಾ ದೇವಾಂಗ ಹಾಸ್ಟೆಲ್‌ನಲ್ಲಿ ಒಕ್ಕೂಟದ ಅಧ್ಯಕ್ಷ ವಿ. ರಾಜು ನೇತೃತ್ವದಲ್ಲಿ ಭಾನುವಾರ ಸಭೆ ನಡೆಸಿ, ಸಂತಾಪ ಸೂಚಿಸಲಾಯಿತು.ಸಭೆಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಪಿ.ಆರ್. ಗಿರಿಯಪ್ಪ, ಎಸ್.ಬಿ. ಅಶೋಕ್‌ಕುಮಾರ್, ಟಿ. ರಾಜೇಶ್, ಪ್ರೊ.ಎಲ್.ಎನ್. ಮಹೇಂದ್ರಕರ್, ಎಸ್. ಚಿಂತಾಮಣಿರಾವ್, ಗುಣಸೆ ರಾಮಸ್ವಾಮಿ, ಅಶೋಕ್‌ಯಾದವ್, ಪ್ರೊ.ಎಚ್. ಕಲ್ಲನ, ಕೆ.ಟಿ. ಶ್ರೀನಿವಾಸ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)