ಗುರುವಾರ , ಜೂನ್ 17, 2021
21 °C

ನಗರ ಸಾರಿಗೆ ಓಡಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ದಿನೇ ದಿನೆ ಬೆಳೆಯುವ ಹೊಸಪೇಟೆಗೆ ಮೂಲ ಸೌಕರ್ಯಗಳು ಹೆಚ್ಚಾಗಿ ಬೇಕಾಗಿದ್ದು ಈ ಹಿನ್ನೆಲೆಯಲ್ಲಿ ನಗರಸಾರಿಗೆ ಆರಂಭಿಸುವಂತೆ ಜಯ ಕರ್ನಾಟಕ ಸಂಘಟನೆ ಹೊಸಪೇಟೆ ರಸ್ತೆ ಸಾರಿಗೆ ವಿಭಾಗೀಯ ನಿಯಂತ್ರಕರನ್ನು ಆಗ್ರಹಿಸಿದೆ.ಈ ಕುರಿತು ಗುರುವಾರ ಮನವಿ ಸಲ್ಲಿಸಿದ ಕಾರ್ಯಕರ್ತರು ಹೊಸಪೇಟೆ ನಗರಕ್ಕೆ ಬರುತ್ತಿರುವ ರೈಲುಗಳ ಸಂಖ್ಯೆಯು ಅಧಿಕವಾಗುತ್ತಿದೆ, ಬೇರೆ ಬೇರೆ ವೇಳೆಯಲ್ಲಿ ಬರುವ ರೈಲುಗಳಿಗೆ ಬಂದ ಪ್ರಯಾಣಿಕರು ತಮ್ಮ ವಿಳಾಸಗಳಿಗೆ ತೆರಳಬೇಕಾದರೆ ತುಂಬಾ ತೊಂದರೆ ಪಡುವಂತಾಗಿದೆ. ಒಂದು ವೇಳೆ ಆಟೋ ಚಾಲಕರು ಬರುವು ದಾದರೂ ತುಂಬಾ ಬೆಲೆ ನೀಡ ಬೇಕಾಗುತ್ತದೆ.ಸಾಮಾನ್ಯ ಜನತೆಗೆ ಇದು ತುಂಬಾ ತೊಂದರೆ ಆಗಲಿದ್ದು `ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣ, ಕಾರಿಗನೂರು, ಕೊಂಡ ನಾಯಕನಹಳ್ಳಿ, ಟಿ.ಬಿ.ಡ್ಯಾಂ, ವಾಲ್ಮೀಕಿ ವೃತ್ತ ಮತ್ತು ಸಾರಿಗೆ ಕಚೇರಿ ಇರುವ ವಿವೇಕಾನಂದ ನಗರ ಸೇರಿದಂತೆ ಪ್ರಮುಖ ಪ್ರದೇಶ ಗಳಿಗೆ ಅನುಕೂಲ ಆಗುವಂತೆ ಬಸ್ ಸಂಚಾರ ಆರಂಭಿಸಬೇಕು~ ಎಂದು ಆಗ್ರಹಿಸಿದ್ದಾರೆ.ನಗರಸಭೆಗೂ ಮನವಿ: ಈ ಮಧ್ಯೆ ಹೊಸಪೇಟೆ ನಗರಸಭೆಯ ಅಧ್ಯಕ್ಷರು ಹಾಗೂ ಪೌರಾಯುಕ್ತರಿಗೂ ಮನವಿ ಸಲ್ಲಿಸಿದ ಸಂಘಟನೆಯ ಪದಾಧಿಕಾರಿ ಗಳು ನಗರದ ಪ್ರಮುಖ ರಸ್ತೆಗಳ ಎರಡು ಬದಿಗಳಲ್ಲಿ ದೂಳು ತುಂಬಿದ್ದು ತೆರವು ಮಾಡುವಂತೆ ಆಗ್ರಹಿಸಿದ್ದಾರೆ.ಕೆ.ರಾಮಪ್ಪ, ರಜಿಯಾಬೇಗಂ, ಗೌರಮ್ಮ, ರುದ್ರಪ್ಪ, ಯೂನೂಸ್, ಜಂಬಯ್ಯ ನಾಯಕ, ಪರಶುರಾಮ್ ಸೋಮಶೇಖರ್, ನಾಗರಾಜ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.