ನಗರ ಸಾರಿಗೆ: ನಾಲ್ಕು ಮಾರ್ಗಗಳಲ್ಲಿ ಸಂಚಾರ

7
ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ

ನಗರ ಸಾರಿಗೆ: ನಾಲ್ಕು ಮಾರ್ಗಗಳಲ್ಲಿ ಸಂಚಾರ

Published:
Updated:

ಚಿತ್ರದುರ್ಗ: ನಗರ ಸಾರಿಗೆಗೆ ಸೋಮವಾರ ಜಿಲ್ಲಾ ಪಂಚಾಯ್ತಿ ಮುಂಭಾಗದಿಂದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಹಸಿರು ನಿಶಾನೆ ತೋರಿಸಿ ನಗರಸಭೆ ಕಚೇರಿವರೆಗೆ ಬಸ್‌ನಲ್ಲಿ ಸಂಚರಿಸುವ ಮೂಲಕ ಚಾಲನೆ ನೀಡಿದರು.ನಗರದ ನಾಲ್ಕು ಮಾರ್ಗಗಳಲ್ಲಿ ನಗರ ಸಾರಿಗೆ ಬಸ್‌ಗಳು ಸಂಚರಿಸಲಿದ್ದು, ಯೂನಿಯನ್ ಪಾರ್ಕ್‌ನಿಂದ ಲಿಂಗದಹಳ್ಳಿಗೆ  ಬೆಳಿಗ್ಗೆ ೭ ರಿಂದ ರಾತ್ರಿ ೭.೪೫ ರವರೆಗೆ ೧೦ ಮತ್ತು ೧೨ ಸಿಂಗಲ್ಸ್‌ನಲ್ಲಿ ಸಂಚರಿಸಲಿದೆ. ಇನ್ನೊಂದು ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಿಂದ ಜೋಗಿಮಟ್ಟಿ ರಸ್ತೆ, ಜೋಗಿಮಟ್ಟಿ ಕ್ರಾಸ್‌ನಿಂದ ಜಿ.ಆರ್.ಹಳ್ಳಿಗೆ ಬೆಳಿಗ್ಗೆ ೭.೧೫ರಿಂದ ರಾತ್ರಿ ೮.೩೫ ರವರೆಗೆ ೧೦ ಬಾರಿ (ಸುತ್ತುವಳಿ) ಸಂಚರಿಸಲಿದೆ.  ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಿಂದ ಜಿಲ್ಲಾ ಪಂಚಾಯ್ತಿ ಕಚೇರಿ ಮತ್ತು ಜಿಲ್ಲಾ ಪಂಚಾಯ್ತಿ ಕಚೇರಿಯಿಂದ ಗೋನೂರು ಮಾರ್ಗದಲ್ಲಿ ಬೆಳಿಗ್ಗೆ ೭.೩೦ ರಿಂದ ಸಂಜೆ ೬.೨೦ರವರೆಗೆ ೧೬ ಬಾರಿ ಸಂಚರಿಸಲಿವೆ.ಮಾರ್ಗ ಒಂದು ಮತ್ತು ಎರಡರಲ್ಲಿ ಯೂನಿಯನ್ ಪಾರ್ಕ್‌ನಿಂದ ಲಿಂಗದಹಳ್ಳಿ ಮಾರ್ಗದಲ್ಲಿ ಎರಡು ನಗರ ಸಾರಿಗೆ ಬಸ್‌ಗಳು ಸಂಚರಿಸಲಿದ್ದು, ಯೂನಿಯನ್ ಪಾರ್ಕ್‌ನಿಂದ ಬೆಳಿಗ್ಗೆ ೭ಕ್ಕೆ ಹೊರಟು ೭.೪೫ಕ್ಕೆ ಲಿಂಗದಹಳ್ಳಿಗೆ ಸೇರಿಲದೆ. ಮತ್ತೊಂದು ಬೆಳಿಗ್ಗೆ ೭.೩೦ಕ್ಕೆ ಹೊರಟು ಲಿಂಗದಹಳ್ಳಿಗೆ ೮.೧೫ಕ್ಕೆ ಸೇರಲಿದೆ. ಇನ್ನೊಂದು ಲಿಂಗದಹಳ್ಳಿಯಿಂದ ೮ಕ್ಕೆ ಹೊರಟು ೮.೪೫ಕ್ಕೆ ಯೂನಿಯನ್ ಪಾರ್ಕ್ ತಲುಪಲಿದೆ.

ಮತ್ತೊಂದು ಲಿಂಗದಹಳ್ಳಿಯಿಂದ ೮.೩೦ಕ್ಕೆ ಹೊರಟು ೯.೧೫ಕ್ಕೆ ಯೂನಿಯನ್ ಪಾರ್ಕ್ ಸೇರಲಿದೆ. ಹೀಗೆ ಮಾರ್ಗದಲ್ಲಿ ಪ್ರತಿ ೩೦ ನಿಮಿಷಕ್ಕೆ ಒಂದರಂತೆ ಬಸ್ ಸಂಚರಿಸಲಿದೆ. ಯೂನಿಯನ್ ಪಾರ್ಕ್‌ನಿಂದ ಹೊರಟು ಗಾಂಧಿ ವೃತ್ತ, ಖಾಸಗಿ ಬಸ್ ನಿಲ್ದಾಣ, ಎಪಿಎಂಸಿ, ವಿದ್ಯಾನಗರ, ತರಳಬಾಳುನಗರ, ಎಂಎಸ್ಎಆರ್  ಬಡಾವಣೆ, ಮಾರಿಕಾಂಬ ದೇವಸ್ಥಾನ, ತಮಟಕಲ್ಲು, ಗೋವಿಂದ ಟೆಂಪಲ್, ಪಾಪೇನಹಳ್ಳಿ, ರಾಯನಹಳ್ಳಿ, ಲಿಂಗದಹಳ್ಳಿ ಕ್ರಾಸ್, ರುಮ್‌ಘಟ್ಟ, ಲಿಂಗದಹಳ್ಳಿ ಮಾರ್ಗವಾಗಿ ಬಸ್‌ ಸಂಚರಿಸಲಿದೆ.ಮಾರ್ಗ ಮೂರರಲ್ಲಿ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಿಂದ ಬೆಳಿಗ್ಗೆ ೭.೧೫ಕ್ಕೆ ಹೊರಟು ಪ್ರಶಾಂತ್ ನಗರ, ರಂಗಯ್ಯನಬಾಗಿಲು ಕ್ರಾಸ್, ಮದಕರಿ ವೃತ್ತ, ಲೈಬ್ರರಿ, ತಾಲ್ಲೂಕು ಕಚೇರಿ, ಡಿಡಿಪಿಐ ಕಚೇರಿ, ಉದಯ ನರ್ಸಿಂಗ್ ಹೋಂ, ಜೆಸಿಆರ್, ಗ್ರಾಮಾಂತರ ಪೊಲೀಸ್ ಠಾಣೆ, ಪಿಳ್ಳೆಕೇರನಹಳ್ಳಿ, ಎಸ್ಆರ್ಎಸ್ ಕಾಲೇಜು, ಮಲ್ಲಾಪುರ, ಗೊಲ್ಲರಹಟ್ಟಿ, ಬಸವೇಶ್ವರ ಮಿಲ್, ಗುಡ್ಡದ ರಂಗವ್ವನಹಳ್ಳಿಗೆ ೮.೦೫ಕ್ಕೆ ತಲುಪಲಿದೆ. ಜಿ.ಆರ್.ಹಳ್ಳಿಯಿಂದ ೮.೧೫ಕ್ಕೆ ಹೊರಟು ೮.೪೫ಕ್ಕೆ ಜೋಗಿಮಟ್ಟಿ ರಸ್ತೆಗೆ ಸೇರಲಿದೆ. ಮತ್ತೆ ೯ಕ್ಕೆ ಹೊರಟು ೯.೩೦ಕ್ಕೆ ಜಿ.ಆರ್.ಹಳ್ಳಿ ತಲುಪಲಿದೆ. ಬೆಳಿಗ್ಗೆ ೭.೧೫ರಿಂದ ರಾತ್ರಿ ೮.೩೫ರ ವರೆಗೆ ಪ್ರತಿ ೪೫ ನಿಮಿಷಕ್ಕೆ ಒಂದು ಬಾರಿ ಸಂಚರಿಸಲಿದ್ದು, ೧೪ ಬಾರಿ ನಗರ ಸಾರಿಗೆ ಬಸ್ ಸಂಚರಿಸಲಿದೆ.ಮಾರ್ಗ ನಾಲ್ಕರಲ್ಲಿ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಿಂದ ಬೆಳಿಗ್ಗೆ ೭.೩೦ಕ್ಕೆ ಹೊರಟು ಜಿಲ್ಲಾ ಪಂಚಾಯ್ತಿ, ವೀರಸೌಧ, ಸಿ.ಕೆ. ಪುರ ಕ್ರಾಸ್, ಜಿಲ್ಲಾ ಆಸ್ಪತ್ರೆ, ಜಿಲ್ಲಾ ನ್ಯಾಯಾಲಯ ಕ್ರಾಸ್, ಎಸ್‌ಪಿ ಕಚೇರಿ, ಆರ್‌ಟಿಒ ಕಚೇರಿ, ಬ್ಯಾಂಕ್ ಕಾಲೊನಿ, ವೈಭವ್ ಲೇಔಟ್, ಮುತ್ತಯ್ಯನಹಟ್ಟಿ ಮಾರ್ಗವಾಗಿ ಗೋನೂರಿಗೆ ೮.೧೫ಕ್ಕೆ ತಲುಪಲಿದೆ.

ಗೋನೂರಿನಿಂದ ೮.೩೦ಕ್ಕೆ ಹೊರಟು ಇದೇ ಮಾರ್ಗದಲ್ಲಿ ೮.೫೫ಕ್ಕೆ ಜಿಲ್ಲಾ ಪಂಚಾಯ್ತಿ ಕಚೇರಿಗೆ ತಲುಪಲಿದೆ. ಜಿಲ್ಲಾ ಪಂಚಾಯ್ತಿ ಕಚೇರಿಯಿಂದ ೯.೦೫ಕ್ಕೆ ಹೊರಟು ೯.೩೦ಕ್ಕೆ ಗೋನೂರು ತಲುಪಲಿದೆ. ಬೆಳಿಗ್ಗೆ ೭.೩೦ ರಿಂದ ಸಂಜೆ ೬.೨೦ರವರೆಗೆ ಪ್ರತಿ ೩೫ ನಿಮಿಷಕ್ಕೊಂದು ಬಾರಿ ಈ ಮಾರ್ಗದಲ್ಲಿ ೧೮ ಸಿಂಗಲ್ಸ್‌ನಲ್ಲಿ ನಗರ ಸಾರಿಗೆ ಬಸ್ ಸಂಚರಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry