ನಗರ, ಹುಬ್ಬಳ್ಳಿ ಗ್ರಾಮೀಣ ತಂಡಕ್ಕೆ ಪ್ರಶಸ್ತಿ

7

ನಗರ, ಹುಬ್ಬಳ್ಳಿ ಗ್ರಾಮೀಣ ತಂಡಕ್ಕೆ ಪ್ರಶಸ್ತಿ

Published:
Updated:

ಹುಬ್ಬಳ್ಳಿ: ಧಾರವಾಡ ನಗರ ತಂಡ ಮತ್ತು ಹುಬ್ಬಳ್ಳಿ ತಾಲ್ಲೂಕು ತಂಡ ವರೂರಿನ ಆಚಾರ್ಯ ಶ್ರೀ ಗುಣಧರ ನಂದಿ ಪಿಯು ಕಾಲೇಜು ಆವರಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಪಿಯು ವಿದ್ಯಾರ್ಥಿಗಳ ಅಂತರ ಕಾಲೇಜು ವಾಲಿಬಾಲ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿಯನ್ನು ಗೆದ್ದುಕೊಂಡರುಅಂಜುಮನ್‌ ಕಾಲೇಜು ಪ್ರತಿನಿಧಿಸಿದ ಧಾರವಾಡ ನಗರ ಬಾಲಕರು ಕಲಘಟಗಿ ಕಾಲೇಜು ತಂಡವನ್ನು 25–18, 25–19ರಿಂದ ಮಣಿಸಿದರು. ಇಬ್ರಾಹಿಂ ಖಾಜಿ, ಸೈಯದ್‌ ಬೆಳಗಾವಿ ಹಾಗೂ ಮಹಮ್ಮದ್‌ ಜಾಫರ್‌ ಗುರಾಣಿ ಉತ್ತಮ ಆಟ ಪ್ರದರ್ಶಿಸಿದರು.ಬ್ಯಾಹಟ್ಟಿಯ ಲಕ್ಷ್ಮಿ ಬೇವಿನಕಟ್ಟಿ, ವಿದ್ಯಾ ಪೂಜಾರ ಮತ್ತು ಕಾವೇರಿ ಬಿ ಅವರ ಚುರುಕಿನ ಆಟದ ನೆರವಿನಿಂದ ಬಾಲಕಿಯರ ವಿಭಾಗದಲ್ಲಿ ಹುಬ್ಬಳ್ಳಿ ಗ್ರಾಮೀಣ ತಂಡದವರು ಧಾರವಾಡ

ನಗರ ತಂಡವನ್ನು 15–11, 15–5ರಿಂದ ಸೋಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry