ಶುಕ್ರವಾರ, ಆಗಸ್ಟ್ 14, 2020
21 °C

ನಗೆ ಹೊನಲಿನ ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗೆ ಹೊನಲಿನ ನಾಟಕ

ರಂಗಭೂಮಿ ಚಲನಶೀಲ. ಅದರಲ್ಲೂ ಹವ್ಯಾಸಿ ರಂಗಭೂಮಿ ನಿರಂತರ ಚಟುವಟಿಕೆಗಳ ಆಗರ. ಹೀಗಾಗಿಯೇ ರಂಗಾಸಕ್ತರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.

 

ಈ ನಿಟ್ಟಿನಲ್ಲಿ ಹಲವಾರು ರಂಗತಂಡಗಳು ರಂಗ ಪ್ರಯೋಗಗಳ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿವೆ. ಇವುಗಳಲ್ಲಿ ಸಂಜಯ ನಗರದ ರಂಗಾಭರಣ ಕಲಾಕೇಂದ್ರವು ಒಂದು.ಎರಡು ದಶಕಗಳಿಂದ ಅನೇಕ ರಂಗಚಟುವಟಿಕೆ ನಡೆಸಿಕೊಂಡು ಬರುತ್ತಿರುವ ಈ ಕೇಂದ್ರವು ನಡೆಸಿದ `ರಂಗಾಭರಣ ಹಾಸ್ಯ ನಾಟಕೋತ್ಸವ~ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಯಶಸ್ವಿಯಾಯಿತು.ಐದು ದಿನಗಳ ಈ ಉತ್ಸವದಲ್ಲಿ ಗೆಳೆಯರ ಬಳಗ ತಂಡದಿಂದ `ಗೋಕರ್ಣದ ಗೌಡಶಾನಿ (ನಿರ್ದೇಶನ: ಅಶೋಕ ಬಾದರದಿನ್ನಿ, ರಚನೆ: ಚಂದ್ರಶೇಖರ ಪಾಟೀಲ್), ರಂಗ ಮಿತ್ರರು ತಂಡದಿಂದ `ಮದ್ವೆ ಮದ್ವೆ~, ನಾಟ್ಯರಾಣಿ ಶಾಂತಲಾ ಕನ್ನಡ ಬಳಗ ತಂಡದಿಂದ ಪಳೆಂಕರರು, ರಂಗಾಭರಣ ತಂಡದದಿಂದ `ಸನ್ಮಾನ ಸುಖ~ ಹಾಗೂ ರೂಪಾಂತರ ತಂಡದಿಂದ `ಗಲ್ಬಸ್ಕಿ~ ನಾಟಕಗಳು ಪ್ರದರ್ಶನಗೊಂಡವು.ಇದೇ ಸಂದರ್ಭದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಕೆಂಪೇಗೌಡ ಪ್ರಶಸ್ತಿ ಪಡೆದ ಎ.ಎಸ್. ಮಹೇಶ್ವರಿ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.