ನಗ್ನ ಶಿವ

7

ನಗ್ನ ಶಿವ

Published:
Updated:

ಮೈಸೂರು ಜಿಲ್ಲೆಯ ಟಿ. ನರಸೀಪುರ ತಾ. ಆಲಗೂಡಿನ ಸಿದ್ದೇಶ್ವರ ದೇವಸ್ಥಾನದಲ್ಲಿರುವ ಶಿವನ  ಮೂರ್ತಿ ಅತ್ಯಂತ ವಿಶಿಷ್ಟವಾದದು. ಇದು ತಲಕಾಡಿನ ಗಂಗರ ಕಾಲಕ್ಕೆ ಸಂಬಂಧಿಸಿದ್ದು. ಮೂರು ಅಡಿ ಎತ್ತರದ, ಒಂದೂವರೆ ಅಡಿ ಅಗಲವಿರುವ ಈ ಶಿವನಿಗೆ ನಿತ್ಯ ಪೂಜೆ ಸಲ್ಲುತ್ತಿದೆ.ಶಿಲ್ಪದಲ್ಲಿರುವ ಶಿವ ಸಮ ಭಂಗಿಯಲ್ಲಿ ನಿಂತಿದ್ದಾನೆ. ನಗ್ನ ರೂಪದಲ್ಲಿರುವುದು ಈ ಶಿಲ್ಪದ ವೈಶಿಷ್ಟ್ಯ. ಚತುರ್ಭುಜದ ಶಿವ ಹಸ್ತಗಳಲ್ಲಿ ತ್ರಿಶೂಲ, ಢಮರು, ಫಲ ಹಿಡಿದಿದ್ದಾನೆ. ಇನ್ನೊಂದು ಹಸ್ತ ಭಕ್ತರಿಗೆ ಅಭಯ ನೀಡುತ್ತಿದೆ.ಪ್ರಸನ್ನ ಮುಖ ಮುದ್ರೆಯ ಮುಖದಲ್ಲಿ ಶಿವನ ಮೂಗು ನೀಳವಾಗಿದೆ. ಕಣ್ಣುಗಳು ಸುಂದರವಾಗಿವೆ.ತಲೆಯ ಮೇಲ್ಭಾಗದಲ್ಲಿ  ಕಟ್ಟಿದ ಜಡೆ ಸೊಗಸಾಗಿ ಮೂಡಿಬಂದಿದೆ. ಶಿವನ ದೇಹದ ಮೇಲೆ ಸರ್ಪ ಸುತ್ತಿಕೊಂಡಿದೆ.ಈ ಶಿಲ್ಪದ ಇನ್ನೊಂದು ವಿಶೇಷವೆಂದರೆ ಶಿವನ ಒಂದು ಪಾದ ಪೂರ್ವಾಭಿಮುಖವಾಗಿದೆ. ಇನ್ನೊಂದು ಪಾದ ಸ್ವಲ್ಪ ದಕ್ಷಿಣಾಭಿಮುಖವಾಗಿದೆ. ಅದಕ್ಕೆ ಏನು ಕಾರಣ ಎನ್ನುವುದು ಯಾರಿಗೂ ಗೊತ್ತಿಲ್ಲ. ಶಿವನ ಪಕ್ಕದಲ್ಲಿ ನಾಯಿಯ ಉಬ್ಬು ಶಿಲ್ಪವೂ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry