ಭಾನುವಾರ, ಡಿಸೆಂಬರ್ 8, 2019
21 °C

ನಜಾಕತ್ ಇಲ್ಲದ ಹಾಡು

Published:
Updated:
ನಜಾಕತ್ ಇಲ್ಲದ ಹಾಡು

ಸಾವರಿಯಾ ಚಿತ್ರದಲ್ಲಿ ನಗೆಮಿಂಚಿನೊಂದಿಗೆ ಚಲನಚಿತ್ರ ರಂಗ ಪ್ರವೇಶಿಸಿದ ಸೋನಂ ಕಪೂರ್‌ಗೆ ಈ ಕಾಲದ ಹಾಡುಗಳೆಂದರೆ ಇಷ್ಟವೇ ಆಗದು ಎಂದು ಮಾಧ್ಯಮದವರ ಮುಂದೆ ಉಲಿದಿದ್ದಾಳೆ.ಸಾಹಿತಿ ಕೈಫಿ ಆಜ್ಮಿ ಅವರ ಅಭಿಮಾನಿ ಎಂದು ಹೇಳಿಕೊಂಡಿರುವ ಸೋನಂ ಈಗಿನ ಹಾಡುಗಳಲ್ಲಿ ಅಂದಿನಂತೆ ಮಾಧುರ್ಯವಾಗಲೀ, ಲಾಲಿತ್ಯವಾಗಲೀ ಇಲ್ಲ. ಹಾಗಾಗಿ ಬಹುಕಾಲ ಬಾಳಿಕೆಯ ಹಾಡುಗಳು ಹೊರಬರುತ್ತಿಲ್ಲ ಎಂದೂ ವಿಮರ್ಶಿಸಿದ್ದಾಳೆ ಅನಿಲ್ ಕಪೂರ್‌ನ ಮುದ್ದಿನ ಮಗಳು ಸೋನಂ.ನಮ್ಮ ತಲೆಮಾರಿನವರಲ್ಲಿ ಸಂಯಮವೇ ಕಾಣೆಯಾಗಿದೆ. ಇದೇ ಕಾರಣದಿಂದಾಗಿ ಪ್ರೀತಿ ಪ್ರೇಮದಲ್ಲಿ ಕೋಮಲ ಭಾವಗಳೇ ಕಾಣೆಯಾಗಿವೆ ಎನ್ನುತ್ತಾಳೆ `ಐ ಲವ್ ಹೇಟ್ ಸ್ಟೋರೀಸ್~ ಚಿತ್ರದ ಈ ಸುಂದರಿ. ರಿಮೇಕ್ ಚಿತ್ರಗಳ ಬಗ್ಗೆಯೂ ಮಾತನಾಡಿರುವ ಸೋನಂಗೆ `ಗೈಡ್~ ಚಿತ್ರದಲ್ಲಿನ ವಹಿದಾ ರೆಹಮಾನ್ ಅವರ ರೋಸಿ ಪಾತ್ರ ನಿರ್ವಹಿಸುವ ಬಯಕೆ ಇದೆ. `ದೆಹಲಿ 6~ ಚಿತ್ರದಲ್ಲಿ ವಹಿದಾ ರೆಹಮಾನ್ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಯಾವತ್ತೂ ಮರೆಯಲಾರೆ ಎಂದಿರುವ ಸೋನಂಗೆ ರೋಸಿ ಪಾತ್ರ ತಮ್ಮ ಕನಸಿನ ಪಾತ್ರ ಎಂದೂ ಹೇಳಿದ್ದಾರೆ. 

ಪ್ರತಿಕ್ರಿಯಿಸಿ (+)