ನಟನೆಗೆ ಈಗಲೂ ಅಮಿತಾಭ್ ಸಿದ್ಧ

7

ನಟನೆಗೆ ಈಗಲೂ ಅಮಿತಾಭ್ ಸಿದ್ಧ

Published:
Updated:
ನಟನೆಗೆ ಈಗಲೂ ಅಮಿತಾಭ್ ಸಿದ್ಧ

ಮುಂಬೈ (ಪಿಟಿಐ):  ಕಳೆದ ನಾಲ್ಕು ದಶಕಗಳಿಂದ 180 ಚಿತ್ರಗಳಲ್ಲಿ  ಹಾಗೂ ಕಿರುತೆರೆಗಳಲ್ಲಿ ನಟಿಸಿರುವ ಅಮಿತಾಭ್ ಬಚ್ಚನ್ ಈ ತಿಂಗಳ 11ಕ್ಕೆ 70ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ.` ನಾನು ಆರೋಗ್ಯವಾಗಿರುವುದರಿಂದ ಈಗಲೂ  ಸಿನಿಮಾರಂಗದಲ್ಲಿ ಸಕ್ರಿಯವಾಗಿರಲು ಸಾಧ್ಯವಾಗಿದೆ~ ಎಂದು ಅವರು ಸುದ್ದಿಸಂಸ್ಥೆಗೆ ಹೇಳಿದ್ದಾರೆ. ಆದರೆ ಈಗ ಅತಿಯಾಗಿ ಕೆಲಸ ಮಾಡಿ ಆಯಾಸ ಮಾಡಿಕೊಳ್ಳುವುದಿಲ್ಲ ಎಂದು ತಮ್ಮ ಆರೋಗ್ಯದ ಬಗ್ಗೆ ಇರುವ  ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.  

1969ರಲ್ಲಿ `ಸಾತ್ ಹಿಂದುಸ್ತಾನಿ~ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ  ಅಮಿತಾಭ್  ಈ ವರ್ಷ ತೆರೆಕಂಡ `ಡಿಪಾರ್ಟ್‌ಮೆಂಟ್~ ಸಿನಿಮಾದಲ್ಲೂ  ನಟಿಸಿದ್ದಾರೆ.`ನಾನು ಏನನ್ನೂ ಬಯಸುವುದಿಲ್ಲ. ಆದರೆ ನನ್ನ ಪಾಲಿಗೆ ಬಂದ ಕೆಲಸವನ್ನು ಒಪ್ಪಿಕೊಳ್ಳುತ್ತೇನೆ. ವೀಕ್ಷಕರ ನಿರೀಕ್ಷೆಗಳಿಗೆ ಮತ್ತು ಆಶಯಗಳಿಗೆ ತಕ್ಕಂತೆ ಕಾರ್ಯ ನಿರ್ವಹಿಸುವುದನ್ನು ಮುಂದುವರಿಸುತ್ತೇನೆ.

ಆರೋಗ್ಯವಾಗಿರುವವರೆಗೂ ನಾನು ಚಟುವಟಿಕೆಯಾಗಿ ಇರಲು ಬಯಸುತ್ತೇನೆ~ ಎಂದಿದ್ದಾರೆ.  ವಯಸ್ಸಿಗೆ ತಕ್ಕಂತ ಪಾತ್ರಗಳಲ್ಲಿ ನಟಿಸಬಹುದೇ ಹೊರತು, ಮೂವತ್ತರ ವಯಸ್ಸಿನ ಪಾತ್ರಗಳನ್ನು ನಟಿಸಲು ಸಾಧ್ಯವಿಲ್ಲ ಎಂದು ಅಮಿತಾಭ್ ಹೇಳಿದರು.

ನನ್ನ ವಯಸ್ಸಿಗೆ ತಕ್ಕಂತ ಹಿರಿಯ ನಾಗರಿಕ, ವೈದ್ಯ, ವಕೀಲ , ನ್ಯಾಯಾಧೀಶರ ಪಾತ್ರಗಳಲ್ಲಿ ಮಾತ್ರ ಮಾಡಬೇಕು ಎಂಬ ನಿರ್ಬಂಧಗಳನ್ನು ನಾನೇ ಹಾಕಿಕೊಂಡಿರುವೆ~ ಎಂದು ಅವರು ಹೇಳಿದ್ದಾರೆ.  ಕಳೆದ ಫೆಬ್ರುವರಿಯಲ್ಲಿ ಅಮಿತಾಭ್ ಹೊಟ್ಟೆನೋವಿಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry