ನಟನೆ ನನಗಲ್ಲ

7

ನಟನೆ ನನಗಲ್ಲ

Published:
Updated:
ನಟನೆ ನನಗಲ್ಲ

`ನಟನೆ ಇದೇ ಮೊದಲು, ಇದೇ ಕೊನೆ. ಇನ್ನೆಂದೂ ನಟನೆಯ ಗೋಜಿಗೇ ಹೋಗುವುದಿಲ್ಲ~ ಅಂತ ನೃತ್ಯ ಸಂಯೋಜಕಿ, ನಿರ್ದೇಶಕಿ ಫರ‌್ಹಾ ಖಾನ್ ಹೇಳುತ್ತಿದ್ದಾರೆ.

`ಶಿರಿನ್ ಫರ‌್ಹಾದ್ ಕಿ ನಿಕಲ್‌ಪಡಿ~ ಚಿತ್ರದಲ್ಲಿ ನಟಿಸಿರುವ ಫರ‌್ಹಾ ಖಾನ್‌ಗೆ ಇದೊಂದು ವಿಭಿನ್ನ ಅನುಭವ ನೀಡಿತಂತೆ. ಬೇಲಾ ಸೆಹಗಲ್ ನಿರ್ದೇಶನದಲ್ಲಿ ಕ್ಯಾಮೆರಾ ಎದುರಿಸಿದ ಅವರು ಇನ್ನು ಮುಂದೆ ಯಾವುದೇ ನಟನೆಯ ಅಸೈನ್‌ಮೆಂಟ್‌ಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಗಟ್ಟಿ ನಿರ್ಧಾರದ ಧ್ವನಿಯಲ್ಲಿ ಹೇಳಿದ್ದಾರೆ.

`ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಒತ್ತಾಯದ ಮೇರೆಗೆ ಈ ಚಿತ್ರದಲ್ಲಿ ನಟಿಸಿದೆ. ಕೊನೆಗೆ ಇಬ್ಬರೂ ಒಟ್ಟಿಗೆ ಕುಳಿತು ಈ ಚಿತ್ರವನ್ನು ವೀಕ್ಷಿಸಿದೆವು. ಚಿತ್ರ ಮುಗಿಯುವವರೆಗೂ ಮನಸಾರೆ ನಕ್ಕೆವು. ಬನ್ಸಾಲಿ ನಟನೆಯನ್ನು ಮೆಚ್ಚಿದರು. ಆದರೆ ಈ ತೀರ್ಮಾನವನ್ನು ನಾನೇ ತೆಗೆದುಕೊಂಡಿದ್ದೇನೆ~ ಎಂದೂ ಫರ‌್ಹಾ ಮಾತು ಸೇರಿಸಿದ್ದಾರೆ.

ಹಲವಾರು ಹಾಡುಗಳಿಗೆ ನೃತ್ಯ ಸಂಯೋಜಿಸಿರುವ ಫರ‌್ಹಾನ್ ಖಾನ್ `ಮೈ ಹೂಂ ನಾ~ ಚಿತ್ರದ ಮೂಲಕ ನಿರ್ದೇಶಕಿಯ ಕ್ಯಾಪ್ ಧರಿಸಿದ್ದರು. ನಂತರ `ಓಂ ಶಾಂತಿ ಓಂ~, `ತೀಸ್ ಮಾರ್ ಖಾನ್~ ಚಿತ್ರಗಳನ್ನು ನಿರ್ದೇಶಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry