ನಟಿ ಲೈಲಾ ಖಾನ್ ಕೊಲೆ ?

ಗುರುವಾರ , ಜೂಲೈ 18, 2019
22 °C

ನಟಿ ಲೈಲಾ ಖಾನ್ ಕೊಲೆ ?

Published:
Updated:

ಜಮ್ಮು (ಪಿಟಿಐ/ಐಎಎನ್‌ಎಸ್): ಕಳೆದ ವರ್ಷದಿಂದ ನಾಪತ್ತೆಯಾಗಿದ್ದ ಬಾಲಿವುಡ್ ನಟಿ ಲೈಲಾ ಖಾನ್‌ಳನ್ನು ತಾಯಿ ಹಾಗೂ ಸಹೋದರಿ ಸೇರಿದಂತೆ ಐವರ ಜತೆ ಕೊಲೆ ಮಾಡಲಾಗಿದೆ ಎಂದು ಆಕೆಯ ಅಪಹರಣ ಪ್ರಕರಣದ ಆರೋಪಿ ಹಾಗೂ ಕುಟುಂಬ ಸ್ನೇಹಿತ ಪರ್ವೇಜ್ ಇಕ್ಬಾಲ್ ತಕ್ ಇಲ್ಲಿನ ಪೊಲೀಸರಿಗೆ ತಿಳಿಸಿದ್ದಾನೆ.ಲೈಲಾ ಕುಟುಂಬದ ಐವರನ್ನು ಗುಂಡು ಹಾರಿಸಿ ಹತ್ಯೆ ಮಾಡಿ ರಹಸ್ಯ ಸ್ಥಳದಲ್ಲಿ ಶವವನ್ನು ಸುಟ್ಟು ಹಾಕಲಾಗಿದೆ ಎಂದು ತಕ್ ಹೇಳಿದ್ದಾನೆ.ಆದರೆ, ಮೃತರ ಶವ ದೊರೆಯದ ಕಾರಣ ಇದನ್ನು ದೃಢಪಡಿಸಲಾಗದು ಎಂದು ದೋಡಾ ರಂಬನ್ ವಲಯದ ಡಿಐಜಿ ಗರೀಬ್ ದಾಸ್ ಹೇಳಿದ್ದಾರೆ.ಪಾಕಿಸ್ತಾನ ಮೂಲದ ಲೈಲಾ ಮೂಲ ಹೆಸರು ರೇಷ್ಮಾ ಪಟೇಲ್. 2008ರಲ್ಲಿ ಬಿಡುಗಡೆಯಾದ `ವಫಾ~ ಚಿತ್ರದಲ್ಲಿ ನಟ ರಾಜೇಶ್ ಖನ್ನಾ ಜತೆ ಆಕೆ ಕಾಣಿಸಿಕೊಂಡಿದ್ದಳು. ಲೈಲಾ ತಂದೆ ನಾದೀರ್ ಪಟೇಲ್ ನೀಡಿದ ದೂರಿನ ಮೇಲೆ ಮುಂಬೈ ಪೊಲೀಸರು ಬುಧವಾರ ಪರ್ವೇಜ್ ತಕ್ ಹಾಗೂ ಆಸೀಫ್ ಶೇಖ್ ಎಂಬುವವರ ವಿರುದ್ಧ ಅಪಹರಣದ ಪ್ರಕರಣ ದಾಖಲಿಸಿಕೊಂಡಿದ್ದರು.ಲೈಲಾಳನ್ನು ಆಕೆಯ ತಾಯಿ ಶೆಲಿನಾ ಪಟೇಲ್ (50), ಹಿರಿಯ ಸಹೋದರಿ ಹಾಜ್ಮಿನಾ, ಅವಳಿ ಸಹೋದರ, ಸಹೋದರಿಯರಾದ ಜಾರಾ, ಇಮ್ರಾನ್ ಹಾಗೂ ಸಂಬಂಧಿಯೊಬ್ಬರ ಜತೆ ಮುಂಬೈನ ಒಶಿವಾರಾ ಪ್ರದೇಶದ ಫ್ಲ್ಯಾಟ್‌ನಿಂದ ಕಳೆದ ವರ್ಷದ ಫೆಬ್ರುವರಿಯಲ್ಲಿ ಅಪಹರಿಸಲಾಗಿತ್ತು ಎಂದು ದೂರು ದಾಖಲಿಸಲಾಗಿತ್ತು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry