ನಟಿ ಸುಚಿತ್ರಾ ಸೇನ್ ಸ್ಥಿತಿ ಗಂಭೀರ

7

ನಟಿ ಸುಚಿತ್ರಾ ಸೇನ್ ಸ್ಥಿತಿ ಗಂಭೀರ

Published:
Updated:

ಕೋಲ್ಕತ್ತ (ಪಿಟಿಐ): ಹಿರಿಯ ನಟಿ ಸುಚಿತ್ರಾ ಸೇನ್‌ ಅವರ ಹೃದಯ ಬಡಿತದಲ್ಲಿ ಏರುಪೇರು ಉಂಟಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಇಲ್ಲಿನ ಖಾಸಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.ಶ್ವಾಸಕೋಶದ ಸೋಂಕಿನಿಂದ ಬಳಲು­ತ್ತಿರುವ ಸುಚಿತ್ರಾ ಅವರಿಗೆ ರೋಗ­ನಿರೋಧಕ ಸೇರಿ­ದಂತೆ ಇತರ ಚಿಕಿತ್ಸೆ ನೀಡಲಾಗುತ್ತಿದೆ. ಆದರೂ ಹೃದಯ ಬಡಿತ­ದಲ್ಲಿ ಏರು­ಪೇರು ಉಂಟಾ­ಗುತ್ತಿದ್ದು, ತೀವ್ರ ನಿಗಾ ವಹಿಸ­ಲಾಗಿದೆ.ಮಂಗಳವಾರ ರಾತ್ರಿ ಸುಚಿತ್ರಾ ಅವರು ಆಹಾರ ಸೇವಿಸಿ ಚೆನ್ನಾಗಿ ನಿದ್ದೆ ಮಾಡಿದ್ದಾರೆ. ಅವರ ದೇಹದ ಜೈವಿಕ ಚಟುವಟಿಕೆಗಳು ಸಮರ್ಪಕವಾಗಿ ಕಾರ್ಯ­­ನಿರ್ವಹಿಸುತ್ತಿವೆ. ಆದರೆ, ಅವರ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ­ಯನ್ನು ಮುಂದೂಡಲಾಗಿದೆ  ಎಂದು ವೈದ್ಯರು  ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry