ಶನಿವಾರ, ಆಗಸ್ಟ್ 17, 2019
27 °C

`ನಟೋರಿಯಸ್' ಮುಕ್ತಾಯ

Published:
Updated:

ಬಿ.ಎನ್. ಗುರುರಾಜ್ ನಿರ್ಮಾಣದ `ನಟೋರಿಯಸ್' ಚಿತ್ರಕ್ಕೆ `ಕನ್ನಡದ ಶೃಂಗಾರಿಯೆ ಕಂಗಳಲ್ಲೆ ಸೆಳೆದವಳೆ, ನಗೆಯ ಹವಳ ಸುರಿದವಳೆ... ಎಂಬ ಹಾಡಿನೊಂದಿಗೆ ಚಿತ್ರೀಕರಣ ಪೂರ್ಣಗೊಂಡಿತು. ಜೀ.ಜೀ. ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಧನುಶ್ ಛಾಯಾಗ್ರಹಣ ಮಾಡಿದ್ದಾರೆ.ಪ್ರಭು ಎಸ್. ಆರ್. ಸಂಗೀತ, ವೆಂಕಟ್ ಸಾಹ ನಿರ್ದೇಶನ, ಮುರಳಿ, ಚಂದ್ರಶೇಖರ ರೆಡ್ಡಿ, ಮದನ್-ಹರಿಣಿ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ರಾಕೇಶ್, ರಮ್ಯಾ ಬಾರ್ನಾ, ಸಾಧು ಕೋಕಿಲ, ರಾಜು ತಾಳಿಕೋಟೆ, ಓಂ ಪ್ರಕಾಶ್‌ರಾವ್, ನಾಗೇಂದ್ರ ಅರಸ್, ರವಿ ಚೇತನ್, ಸುಚೇಂದ್ರ ಪ್ರಸಾದ್, ಅಪೂರ್ವ, ವಾಣಿಶ್ರೀ, ಶರವಣ, ರವಿ, ನವೀನ್ ಮಾರುತಿ, ವಿನೋದ್, ರಶ್ಮಿತ ಹಾಗೂ ಸಿಮ್ರೋನ್ ಖಾನ್ ಅಭಿನಯಿಸಿದ್ದಾರೆ.ಹಾಡು ಮುಗಿಸಿದ `ರಾಜ ಹುಲಿ'

ಕೆ.ಮಂಜು ನಿರ್ಮಾಣದ `ರಾಜಹುಲಿ' ಚಿತ್ರದ ಮೂರು ಹಾಡುಗಳ ಚಿತ್ರೀಕರಣ ಪೂರ್ಣಗೊಂಡಿದೆ. ಶ್ರೀರಂಗಪಟ್ಟಣ ಮತ್ತು ಮೇಲುಕೋಟೆಗಳಲ್ಲಿ ಚಿತ್ರೀಕರಣ ನಡೆಸಲಾಯಿತು.ಯಶ್ ಮತ್ತು ಮೇಘನಾರಾಜ್ ಮುಖ್ಯಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ಗುರು ದೇಶಪಾಂಡೆ ನಿರ್ದೇಶಿಸುತ್ತಿದ್ದಾರೆ. ಹಂಸಲೇಖ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವಿಷ್ಣುವರ್ಧನ ಛಾಯಾಗ್ರಹಣ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ಕೆ.ಎಂ. ಪ್ರಕಾಶ್ ಸಂಕಲನ ಚಿತ್ರಕ್ಕಿದೆ.

Post Comments (+)