ನಟ ಅನುಪಮ್ ಖೇರ್‌ಗೆ ಪಿತೃವಿಯೋಗ

7

ನಟ ಅನುಪಮ್ ಖೇರ್‌ಗೆ ಪಿತೃವಿಯೋಗ

Published:
Updated:

ಮುಂಬೈ: ಬಾಲಿವುಡ್‌ನ ಹಿರಿಯ ನಟ ಅನುಪಮ ಖೇರ್ ಅವರ ತಂದೆ ಪುಷ್ಕರ್‌ನಾಥ್ ಖೇರ್ (84) ಅವರು ಶುಕ್ರವಾರ ನಿಧನರಾದರು.~ನಾನು ಗೋವಾ ತಲುಪುತ್ತಿದ್ದಂತೆ ನನ್ನ ಸಹೋದರ ರಾಜು ಮುಂಬೈನಿಂದ ಕರೆ ಮಾಡಿ ~ಜಗತ್ತಿನಲ್ಲಿ ಅತ್ಯುತ್ತಮ ತಂದೆ~ (ನಮ್ಮ ತಂದೆ) ಇನ್ನಿಲ್ಲ ಎಂದು ತಿಳಿಸಿದ. ನಾನು ಮರಳಿ ಪ್ರಯಾಣಿಸುತ್ತಿದ್ದೇನೆ~ ಎಂದು ಅನುಪಮ್ ಅವರು ತಂದೆಯ ಸಾವಿನ ಸುದ್ದಿಯನ್ನು ತಮ್ಮ ಟ್ವಿಟರ್‌ನಲ್ಲಿ ಬಹಿರಂಗಪಡಿಸಿದ್ದಾರೆ.ನಿರ್ದೆಶಕ ಡೆವಿಡ್ ಧವನ್ಸ್ ಅವರ ಪುತ್ರನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಶುಕ್ರವಾರ ಗೋವಾಕ್ಕೆ ಆಗಮಿಸಿದ ಅನುಪಮ್ ಅವರು ತಂದೆ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮುಂಬೈಗೆ ಮರಳಿದರು.

 

ಹಿರಿಯ ನಟನ ಪಿತೃ ವಿಯೋಗದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗ ಗಣ್ಯರು ಹಾಗೂ ನಟ ನಟಿಯರು ಟ್ವಿಟರ್‌ನಲ್ಲಿ ತಮ್ಮ ಸಂತಾಪ ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry