ನಟ ವಿಜಯ್ ಕಾಲಿಗೆ ಗಾಯ

ಮಂಗಳವಾರ, ಜೂಲೈ 23, 2019
20 °C

ನಟ ವಿಜಯ್ ಕಾಲಿಗೆ ಗಾಯ

Published:
Updated:

ಬಾಗಲಕೋಟೆ: ನಗರದಲ್ಲಿ  ನಡೆಯುತ್ತಿರುವ `ಭೀಮಾ ತೀರದಲ್ಲಿ~ ಚಲನಚಿತ್ರದ  ಚಿತ್ರೀಕರಣದ ಸಂದರ್ಭದಲ್ಲಿ ನಾಯಕ ನಟ `ದುನಿಯಾ~ ವಿಜಯ್ ಕಾಲಿಗೆ ಏಟು ಬಿದ್ದಿದೆ.

ಭಾನುವಾರ ಮಧ್ಯಾಹ್ನ ನಗರದ ಸರ್ವೋದಯ ಕ್ಲಬ್ ಆವರಣದಲ್ಲಿ ನಡೆಯುತ್ತಿದ್ದ ಚಿತ್ರೀಕರಣ ವೇಳೆ ಸ್ಟಂಟ್ ಮಾಡುವ ಸಂದರ್ಭ ಆಯತಪ್ಪಿ ಬಿದ್ದಾಗ ಅವರ ಕಾಲಿನ ಹಿಮ್ಮಡಿಗೆ ಕಲ್ಲೇಟಿನಿಂದ ಗಾಯವಾಗಿದೆ. 

ತಕ್ಷಣ ಅವರಿಗೆ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಯಿತು. ಬಳಿಕ ಸುಧಾರಿಸಿಕೊಂಡು ಮತ್ತೆ ಚಿತ್ರೀಕರಣದಲ್ಲಿ ಅವರು ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಟ ವಿಜಯ್, `ಕಾಲಿಗೆ ಚಿಕ್ಕ ಏಟು ಬಿದ್ದಿದೆ. ದೇವರ ಕೃಪೆಯಂದ ಭಯಪಡುವಂತ ಯಾವುದೇ ತೊಂದರೆ ಇಲ್ಲ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry