ನಟ ಶಮ್ಮಿ ಕಪೂರ್‌ಗೆ ಭಾವಪೂರ್ಣ ವಿದಾಯ

7

ನಟ ಶಮ್ಮಿ ಕಪೂರ್‌ಗೆ ಭಾವಪೂರ್ಣ ವಿದಾಯ

Published:
Updated:
ನಟ ಶಮ್ಮಿ ಕಪೂರ್‌ಗೆ ಭಾವಪೂರ್ಣ ವಿದಾಯ

 ಮುಂಬೈ (ಪಿಟಿಐ): ಭಾನುವಾರ ನಿಧನರಾದ ಹಿಂದಿ  ಸಿನಿಮಾ ರಂಗದ ಮೇರು ನಟ ಶಮ್ಮಿ ಕಪೂರ್ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಲ್ಲಿನ ಬಾನ್‌ಗಂಗಾ ರುದ್ರಭೂಮಿಯಲ್ಲಿ ಸೋಮವಾರ ನಡೆಯಿತು.

ಕಪೂರ್ ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಬಾಲಿವುಡ್‌ನ ಖ್ಯಾತನಾಮರು ಶಮ್ಮಿ ಅವರಿಗೆ ಭಾವಪೂರ್ಣ ವಿದಾಯ ಹೇಳಿದರು.ಶಮ್ಮಿ ಅವರ ಪುತ್ರ ಆದಿತ್ಯರಾಜ್ ಕಪೂರ್ ಅಂತ್ಯಕ್ರಿಯೆಯ ವಿಧಿ- ವಿಧಾನಗಳನ್ನು ನೆರವೇರಿಸಿದರು.  ಅಮೆರಿಕದಿಂದ ಆಗಮಿಸಿದ ಆದಿತ್ಯರಾಜ್‌ರ ಪುತ್ರ ಕುನಾಲ್ ಅಂತ್ಯಕ್ರಿಯೆ ನಡೆಸಲು ತಮ್ಮ ತಂದೆಗೆ ನೆರವು ನೀಡಿದರು.ಪೃಥ್ವಿರಾಜ್ ಕಪೂರ್ ಅವರ ಕುಟುಂಬದ ಸದಸ್ಯರೆಲ್ಲರೂ ಶಮ್ಮಿ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಶಶಿ ಕಪೂರ್ ಗಾಲಿ ಕುರ್ಚಿಯಲ್ಲಿ ಬಂದು ತಮ್ಮ ಅಣ್ಣನ ಅಂತಿಮ ದರ್ಶನ ಪಡೆದರು. ಶಮ್ಮಿ ಅವರ ಹಿರಿಯಣ್ಣ ರಾಜ್ ಕಪೂರ್ ಅವರ ಪುತ್ರರಾದ ರಣಧೀರ್, ರಿಷಿ, ರಾಜೀವ್, ಮೊಮ್ಮಗ ರಣಬೀರ್ ಕೂಡ ನಮಿಸಿದರು.ಬಾಲಿವುಡ್ ಖ್ಯಾತನಾಮರಾದ ಅಮಿತಾಭ್ ಬಚ್ಚನ್, ಅಮೀರ್ ಖಾನ್, ಅಶೋಕ್ ಛೋಪ್ರಾ ಮತ್ತು ಅವರ ಪುತ್ರಿ ಪ್ರಿಯಾಂಕಾ ಛೋಪ್ರಾ, ಮಾಧುರಿ ದೀಕ್ಷಿತ್, ಅನಿಲ್ ಕಪೂರ್, ವಿನೋದ್ ಖನ್ನಾ, ಡ್ಯಾನಿ, ಶತ್ರುಘ್ನ ಸಿನ್ಹಾ, ಫರ್ದೀನ್ ಖಾನ್, ಟಾಮ್ ಆಲ್ಟರ್, ಟೀನೂ ಆನಂದ್ ಮತ್ತು ಉದ್ಯಮಿ ಅನಿಲ್ ಅಂಬಾನಿ ಸೇರಿದಂತೆ ಹಲವರು ಶಮ್ಮಿ ಕಪೂರ್ ಪಾರ್ಥಿವ ಶರೀರದ ದರ್ಶನ ಪಡೆದರು.ನಿರ್ಮಾಪಕರಾದ ಸತೀಶ್ ಕೌಶಿಕ್, ಸುಧೀರ್ ಮಿಶ್ರಾ, ಸಂಜಯ್ ಲೀಲಾ ಬನ್ಸಾಲಿ, ಪ್ರಕಾಶ್ ಝಾ, ರಾಕೇಶ್ ಓಂಪ್ರಕಾಶ್ ಮೆಹ್ರಾ, ಅಶುತೋಷ್ ಗೋವಾರಿಕರ್, ರಮೇಶ್ ಸಿಪ್ಪಿ ಮತ್ತು ಅವರ ಮಗ ರೋಹನ್, ಸುಭಾಷ್ ಘಾಯ್ ಮತ್ತು ನಿಖಿಲ್ ಅಡ್ವಾಣಿ ಶಮ್ಮಿ ಅವರಿಗೆ ಅಂತಿಮ ನಮನ ಸಲ್ಲಿಸಿದರು.

79 ವರ್ಷದ ಶಮ್ಮಿ ಕಪೂರ್ ಮೂತ್ರಪಿಂಡ ವೈಫಲ್ಯದಿಂದ ಭಾನುವಾರ ಮುಂಜಾನೆ ನಿಧನರಾದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry