ನಟ ಶಾರುಖ್ ಖಾನ್ ಗೆ 5 ವರ್ಷ ವಾಂಖೇಡೆ ಕ್ರೀಡಾಂಗಣ ಪ್ರವೇಶ ನಿಷೇಧ

7

ನಟ ಶಾರುಖ್ ಖಾನ್ ಗೆ 5 ವರ್ಷ ವಾಂಖೇಡೆ ಕ್ರೀಡಾಂಗಣ ಪ್ರವೇಶ ನಿಷೇಧ

Published:
Updated:
ನಟ ಶಾರುಖ್ ಖಾನ್ ಗೆ 5 ವರ್ಷ ವಾಂಖೇಡೆ ಕ್ರೀಡಾಂಗಣ ಪ್ರವೇಶ ನಿಷೇಧ

ಮುಂಬೈ, (ಪಿಟಿಐ): ಅಧಿಕಾರಿಗಳೊಂದಿಗೆ ದುರ್ವರ್ತನೆ ತೋರಿದ್ದು ಹಾಗೂ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಐದು ವರ್ಷಗಳ ಕಾಲ ವಾಂಖೇಡೆ ಕ್ರೀಡಾಂಗಣವನ್ನು ಪ್ರವೇಶಿಸದಂತೆ ಕೋಲ್ಕೊತ್ತ ನೈಟ್ ರೈಡರ್ಸ್ ಸಹ ಮಾಲೀಕ ಹಾಗೂ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ವಿರುದ್ಧ ಮುಂಬೈ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ) ಶುಕ್ರವಾರ ನಿಷೇಧ ವಿಧಿಸಿದೆ.

ಖಾನ್ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ನಡೆದ ಅಸೋಸಿಯೇಶನ್ ಆಡಳಿತ ಮಂಡಳಿಯ ಸಭೆಯು ಈ ವಿಚಾರದಲ್ಲಿ ಸರ್ವಾನುಮತದ ನಿರ್ಧಾರ ಕೈಗೊಂಡಿತು.

ಶಾರುಖ್ ಖಾನ್ ಅವರು ತಮ್ಮ ತಂಡ ಐಪಿಎಲ್ ನ ಬುಧವಾರದ ಪಂದ್ಯ ಕಾಲದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ  ಗೆದ್ದ ನಂತರ ಮುಂಬೈ ಕ್ರಿಕೆಟ್ ಸಂಸ್ಥೆ ಅಧಿಕಾರಿ ಮತ್ತು ಸಿಬ್ಬಂದಿ ಜತೆಗೆ ಅನುಚಿತವಾಗಿ ವರ್ತಿಸಿದರೆಂದು ಆರೋಪಿಸಲಾಗಿದೆ.

ಯಾವುದೇ ರೀತಿಯ ದುರ್ವರ್ತನೆಯನ್ನೂ ಸಹಿಸಲಾಗುವುದಿಲ್ಲ ಎಂಬ ಸಂದೇಶವನ್ನು ಅಸೋಸಿಯೇಶನ್ ಈ ಮೂಲಕ ನೀಡುತ್ತಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಎಂಸಿಎ ಅಧ್ಯಕ್ಷ ವಿಲಾಸರಾವ್ ದೇಶಮುಖ್ ಹೇಳಿದರು.

ನಿಯಮಗಳನ್ನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ. ವ್ಯಕ್ತಿ ಯಾರು? ಅವರು ಎಷ್ಟು ದೊಡ್ಡವರು ಎಂಬ ಪ್ರಶ್ನೆಯನ್ನು ಅದು ಅವಲಂಬಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನಾವು ನೀಡುತ್ತಿದ್ದೇವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 

 ಏನಿದ್ದರೂ ದುರ್ವರ್ತನೆ ಆರೋಪವನ್ನು ನಿರಾಕರಿಸಿರುವ ಖಾನ್ ಅವರು ~ಭದ್ರತಾ ಸಿಬ್ಬಂದಿ ನನ್ನ ಮಕ್ಕಳನ್ನೂ ಸೇರಿದಂತೆ ಕೈ ಮಾಡಿದಾಗ ಪ್ರತಿಕ್ರಿಯಿಸಿದ್ದೇನಷ್ಟೇ~ ಎಂದು ಹೇಳಿದ್ದಾರೆ.

 

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry