ನಟ ಶಿವರಾಜ್ ಕುಮಾರ್‌ಗೆ ಅಭಿನಂದನೆ

7

ನಟ ಶಿವರಾಜ್ ಕುಮಾರ್‌ಗೆ ಅಭಿನಂದನೆ

Published:
Updated:

ದೇವನಹಳ್ಳಿ : ಕಕಇಲ್ಲಿನ ವೆಂಕಟೇಶ್ವರ ಚಿತ್ರ ಮಂದಿರದಲ್ಲಿ ಮೈಲಾರಿ ಚಲನಚಿತ್ರ 3ನೇ ವಾರ ಪ್ರದರ್ಶನಗೊಂಡ ಹಿನ್ನೆಲೆಯಲ್ಲಿ ಮಾತೃಭೂಮಿ ಯುವ ಸಂಘ ನಟ ಶಿವರಾಜ್ ಕುಮಾರ್ ಅವರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವರಾಜ್ ಕುಮಾರ್ ಕನ್ನಡ ಚಲನಚಿತ್ರ ನೋಡುವುದರ ಮೂಲಕ ಚಿತ್ರರಂಗವನ್ನು ಹೆಚ್ಚು ಬೆಳೆಸಬೇಕಿದೆ. ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದ ಏಳು ಬೀಳು ಕಂಡಿದ್ದೇನೆ, ಕಷ್ಟಕಾಲದಲ್ಲಿಯೂ ಕನ್ನಡ ಜನತೆ ಚಿತ್ರರಂಗವನ್ನು ಉಳಿಸಿ ಬೆಳೆಸಿದೆ ಎಂದರು. ಸನ್ಮಾನಕ್ಕೂ ಮೊದಲು ಆನಂದ್ ಮತ್ತು ಮೈಲಾರಿ ಚಿತ್ರದ ಗೀತೆಯನ್ನು ಹಾಡಿ ಅಭಿಮಾನಿಗಳನ್ನು ರಂಜಿಸಿದರು.ಲಘು ಲಾಠಿ ಪ್ರಹಾರ : ಶಿವರಾಜ್ ಕುಮಾರ್ ಚಿತ್ರ ಮಂದಿರಕ್ಕೆ ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದರು. ಸಾವಿರಾರು ಸಂಖ್ಯೆಯಲ್ಲಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಪ್ರಯಾಸ ಪಡಬೇಕಾಯಿತು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ ನಂತರ ಪರಿಸ್ಥಿತಿ ತಹಬಂದಿಗೆ ಬಂದಿತು.ಅಭಿಮಾನಿಗಳ ತಳ್ಳಾಟದಲ್ಲಿ ರಂಗಪ್ಪ ಎಂಬುವವರ ತಲೆಗೆ ಪೆಟ್ಟುಬಿದ್ದು ತೀವ್ರ ರಕ್ತ ಸ್ರಾವ ಉಂಟಾಯಿತು. ಮೈಲಾರಿ ಚಿತ್ರ ನಿರ್ದೇಶಕ ಚಂದ್ರು, ಹಾಸ್ಯ ನಟ ಬುಲೆಟ್ ಪ್ರಕಾಶ್, ಮಾತೃ ಭೂಮಿ ಯುವ ಸಂಘದ ಗೌರವಾಧ್ಯಕ್ಷ ಕಾಳಪ್ಪ ವೆಂಕಟೇಶ್, ಚಿತ್ರಮಂದಿರದ ಮಾಲೀಕ ಕೃಷ್ಣಮೂರ್ತಿ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್.ರಾಮಯ್ಯ, ಪುರಸಭೆ ಸದಸ್ಯ ಜಿ.ಎ.ರವೀಂದ್ರ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry