ನಡಾಲ್-ನೊವಾಕ್ ಫೈನಲ್ ಇಂದು
ಪ್ಯಾರಿಸ್ (ಐಎಎನ್ಎಸ್): ವಿಶ್ವ ಮೊದಲ ಕ್ರಮಾಂಕದ ಆಟಗಾರ ನೊವಾಕ್ ಜೊಕೊವಿಕ್ ಹಾಗೂ ರಫೆಲ್ ನಡಾಲ್ ನಡುವೆ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯವು ಭಾನುವಾರ ನಡೆಯಲಿದೆ.
ಮತ್ತೊಮ್ಮೆ ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿರುವ ಎರಡನೇ ಶ್ರೇಯಾಂಕದ ಸ್ಪೇನ್ ಟೆನಿಸ್ ತಾರೆ ನಡಾಲ್ಗೆ ಸವಾಲಾಗಿ ನಿಲ್ಲುವ ಸಾಮರ್ಥ್ಯವನ್ನು ಸರ್ಬಿಯಾದ ನೊವಾಕ್ ಹೊಂದಿದ್ದಾರೆ. ಆದರೂ ಟೆನಿಸ್ ಪ್ರಿಯರಿಗೆ ನಡಾಲ್ ಸತ್ವಯುತ ಆಟದ ಮೇಲೆ ಭಾರಿ ವಿಶ್ವಾಸ.
ಗ್ರ್ಯಾನ್ ಸ್ಲಾಮ್ ಪಂದ್ಯಗಳಲ್ಲಿ ಇವರಿಬ್ಬರೂ ಮುಖಾಮುಖಿ ಆಗಿದ್ದಾಗ ಹೆಚ್ಚಿನ ಯಶಸ್ಸು ಸಿಕ್ಕಿದ್ದು ರಫೆಲ್ಗೆ ಎನ್ನುವುದೂ ಈ ಭರವಸೆಗೆ ಕಾರಣ.ನಡಾಲ್ 18-14 ಗೆಲುವಿನಿಂದ ನೊವಾಕ್ಗಿಂತ ಮುಂದಿದ್ದಾರೆ. ಆದ್ದರಿಂದಲೇ ಭಾನುವಾರದ ಪಂದ್ಯದಲ್ಲಿ ನೊವಾಕ್ಗೆ ಸ್ಪೇನ್ ಆಟಗಾರ `ಸುಲಭದ ಎದುರಾಳಿ ಅಲ್ಲ~ ಎನ್ನುವ ನಿರ್ಧಾರಕ್ಕೆ ಬಂದಿದ್ದು. ಈ ಅಂಶವನ್ನು ಸ್ವತಃ ನೊವಾಕ್ ಕೂಡ ಒಪ್ಪಿಕೊಂಡಿದ್ದಾರೆ. `ಇದೊಂದು ದೊಡ್ಡ ಸವಾಲು~ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.