ನಡೆದು ಬಂದ ನ್ಯಾಯಮೂರ್ತಿ!

7

ನಡೆದು ಬಂದ ನ್ಯಾಯಮೂರ್ತಿ!

Published:
Updated:

ಬೆಂಗಳೂರು: ಬಜೆಟ್ ಮಂಡನೆಗಾಗಿ ಗುರುವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಾಲ್ನಡಿಗೆಯಲ್ಲಿ ರೈತರೊಂದಿಗೆ ಆಗಮಿಸಿದರೆ, ನ್ಯಾಯಮೂರ್ತಿ ಡಿ.ವಿ. ಶೈಲೇಂದ್ರಕುಮಾರ್ ಅವರು ಹೈಕೋರ್ಟ್‌ಗೆ ಕಾಲ್ನಡಿಗೆಯಲ್ಲಿಯೇ ಆಗಮಿಸಿ ಅಚ್ಚರಿ ಮೂಡಿಸಿದರು!ಸಂಚಾರ ದಟ್ಟಣೆಯ  ಕಿರಿಕಿರಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ನ್ಯಾಯಮೂರ್ತಿಗಳು ಸ್ಯಾಂಕಿ ರಸ್ತೆಯಲ್ಲಿರುವ ತಮ್ಮ ನಿವಾಸದಿಂದ ಸುಮಾರು 2 ಕಿ.ಮೀ ದೂರ ಕಾಲ್ನಡಿಗೆಯಲ್ಲಿಯೇ ಆಗಮಿಸಿದರು.ಕಳೆದ ಜೂನ್‌ನಲ್ಲಿ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ ಅವರು ಹೈಕೋರ್ಟ್ ಅವಧಿ ಮುಗಿದ ಮೇಲೆ ಸಂಜೆ ಬಾಲಬ್ರೂಯಿ ಅತಿಥಿ ಗೃಹದ ಬಳಿ ಇರುವ ಮನೆಗೆ ನಡೆದು ಹೋಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry