ನಡೆಯದ ಪಾಠ: ವಿದ್ಯಾರ್ಥಿಗಳ ಆಕ್ರೋಶ

ಮಂಗಳವಾರ, ಜೂಲೈ 23, 2019
20 °C

ನಡೆಯದ ಪಾಠ: ವಿದ್ಯಾರ್ಥಿಗಳ ಆಕ್ರೋಶ

Published:
Updated:

ಗುಡಿಬಂಡೆ: ಶಾಲೆ ಆರಂಭವಾಗಿ 40 ದಿನಗಳಾದರೂ ಶಿಕ್ಷಕರ ಕೊರತೆಯಿಂದ ತರಗತಿ ನಡೆಯುತ್ತಿಲ್ಲ ಎಂದು ಪಟ್ಟಣದ ಬಾಲಕ ಮತ್ತು ಬಾಲಕಿಯರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.ಈಚೆಗೆ ಶಾಲೆಗಾಗಿ ನಾವು-ನೀವು ಕಾರ್ಯಕ್ರಮವನ್ನು ನಡೆಸಬಾರದು ಎಂದು ಪೋಷಕರು ಹಾಗೂ ವಿದ್ಯಾರ್ಥಿಗಳು ಒತ್ತಾಯಿಸಿದ್ದರು.ಶಿಕ್ಷಕರ ಕೊರತೆಯನ್ನು ನಿಗಿಸಿ ಎಂದು ಮನವಿ ಮಾಡಿದ್ದರೂ ಸ್ಪಂದಿಸಲು ಇಲ್ಲ ಎಂದು ಖಂಡಿಸಿ ಪೋಷಕರು ಆಕ್ರೋಶದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದರು.ಈ ಶಾಲೆಗೆ ಶಿಕ್ಷಕರ ಹುದ್ದೆಯನ್ನು ಕಾಯಂಗೊಳಿಸಬೇಕು.ಶಾಲೆಗೆ ಆಟದ ಮೈದಾನ ಒದಗಿಸುವುದು, ಅತಿಥಿ ಶಿಕ್ಷಕರನ್ನು ನೇಮಿಸದೇ ಇರುವುದು ಮೊದಲಾದ ಬೇಡಿಕೆಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದರು.`ಶಾಲೆಗಾಗಿ ನಾವು ನೀವು~ ಕಾರ್ಯಕ್ರಮ ನಡೆಸುವುದಿಲ್ಲ.

ಜುಲೈ 10ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಮುಂಚಿತವಾಗಿ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಪ್ರತಿಭಟನೆ ನಡೆಸಲಾಯಿತು ಎಂದರು.  ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣ ಅಧಿಕಾರಿ ರವಿಕುಮಾರ್ ಸಮಾಧಾನ ಪಡಿಸಲು ಯತ್ನಿಸಿದರೂ ಸಫಲವಾಗಲಿಲ್ಲ.  ಆಗ ಪೋಷಕರು ಕ್ರಮ ಕೈಗೊ ಳ್ಳದಿದ್ದರೆ ಉಗ್ರ ಪ್ರತಿಭಟನೆ ನಡೆಸ ಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry