ನದಿಗೆ ಕಾರು: ಚಾಲಕ ಪಾರು

7

ನದಿಗೆ ಕಾರು: ಚಾಲಕ ಪಾರು

Published:
Updated:

ಸಿದ್ದಾಪುರ:  ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಇಲ್ಲಿನ ಸೇತುವೆಯ ಬದಿಯಿಂದ ಕಾವೇರಿ ನದಿಗೆ ಬಿದ್ದಿರುವ ಘಟನೆ ನಡೆದಿದ್ದು, ಸವಾರರು ಪ್ರಣಾಪಾಯದಿಂದ ಪಾರಾಗಿದ್ದಾರೆ.ನೆಲ್ಯಹುದಿಕೇರಿಯ ನಿವಾಸಿ ಜೋಯ್ ಹಾಗೂ ಸುನಿಲ್ ಬೆಳಿಗ್ಗೆ 8 ಗಂಟೆ ಹೊತ್ತಿಗೆ ನೆಲ್ಯಹುದಿಕೇರಿಯಿಂದ ಸಿದ್ದಾಪುರದ ಕಡೆಗೆ ಕೆಲಸದ ನಿಮಿತ್ತ ತೆರಳುತ್ತಿದರು.ಈ ಸಂದರ್ಭ ಸಿದ್ದಾಪುರ ಸೇತುವೆ ತಲುಪುತಿದ್ದಂತೆ ಆಯತಪ್ಪಿ ಸೇತುವೆಯ ಬದಿಯಿಂದ ಕಾರು ಕಾವೇರಿ ನದಿಗೆ ಉರುಳಿದೆ. ನದಿಯ ಬದಿಯಲ್ಲಿ ಬಿದ್ದ ಕಾರಿನಲ್ಲಿದ್ದ ಸವಾರರಿಬ್ಬರು ಸಣ್ಣ ಪುಟ್ಟ ಗಾಯವಾಗಿ ಪ್ರಾಣಾಪಾಯದಿಂದ ಪಾರಾಗ್ದ್ದಿದಾರೆ. ಕಾರು ಸಂಪೂರ್ಣ ಜಖಂಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry