ಗುರುವಾರ , ಅಕ್ಟೋಬರ್ 24, 2019
21 °C

ನದಿಯಲ್ಲಿ ಮುಳುಗಿ ನಾಲ್ವರು ಬಾಲಕರ ಸಾವು

Published:
Updated:

ಬೆಳ್ತಂಗಡಿ: ಇಲ್ಲಿನ ತಾಲ್ಲೂಕು ಕ್ರೀಡಾಂಗಣದ ಬಳಿ ಹೊಳೆಯಲ್ಲಿ ಭಾನುವಾರ ಸ್ನಾನಕ್ಕೆಂದು ಇಳಿದ ನಾಲ್ವರು ಬಾಲಕರು ಆಯ ತಪ್ಪಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಸ್ಥಳೀಯ ಸಂಜಯ ನಗರದ ನಿವಾಸಿಗಳಾದ ಜಾವೀದ್ (12), ಜಂಶೀರ್ (7), ಸೈಯದ್ ಸಾಸೀರ್ (12) ಮತ್ತು ಮೊಹಮ್ಮದ್ ಅಫೀರ್ (12) ಮೃತಪಟ್ಟವರು. ಎಲ್ಲರ ಮೃತದೇಹಗಳನ್ನು ನೀರಿನಿಂದ ಹೊರತೆಗೆಯಲಾಗಿದೆ.

ಬಂಧುಗಳ ಆಕ್ರಂದನ ಮುಗಿಲುಮುಟ್ಟಿತ್ತು. ಮಹಮ್ಮದ್ ಶರೀಫ್ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)