ನದಿಯಲ್ಲಿ ಮುಳುಗಿ ಮಾಜಿ ಶಾಸಕ ಪುತ್ರ ಸೇರಿ ಇಬ್ಬರ ಸಾವು

7

ನದಿಯಲ್ಲಿ ಮುಳುಗಿ ಮಾಜಿ ಶಾಸಕ ಪುತ್ರ ಸೇರಿ ಇಬ್ಬರ ಸಾವು

Published:
Updated:

ತಿ.ನರಸೀಪುರ: ನದಿಯಲ್ಲಿ ಈಜಲು ಹೋದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಿರಮಕೂಡಲಿನ ತ್ರಿವೇಣಿ ಸಂಗಮದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಯ ಪ್ರಯೋಗಾಲಯ ಸಹಾಯಕ ದೇವರಾಜು (33) ಹಾಗೂ ಬೆಂಗಳೂರಿನಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದ  ಮಳ್ಳವಳ್ಳಿ ಸಿದ್ಧಾರ್ಥನಗರದ ನಿವಾಸಿ ಮದನ್‌ಲಾಲ್ (33) ಮೃತಪಟ್ಟವರು. ಮದನ್‌ಲಾಲ್ ಅವರು ಮಳವಳ್ಳಿಯ ಮಾಜಿ ಶಾಸಕ ಕೆ.ಎಲ್.ಮರಿಸ್ವಾಮಿ ಹಾಗೂ ಮಳವಳ್ಳಿ ಪುರಸಭೆ ಮಾಜಿ ಅಧ್ಯಕ್ಷೆ ಮಹಾದೇವಮ್ಮ ಅವರ ಪುತ್ರ.ತಿರಮಕೂಡಲಿನ ಚೌಡೇಶ್ವರಿ ದೇವಾಲಯಕ್ಕೆ ಹರಕೆ ತೀರಿಸಲು ಮಳವಳ್ಳಿಯಿಂದ ಭಕ್ತರೊಬ್ಬರು ಇಲ್ಲಿಗೆ ಬಂದಿದ್ದರು. ಅವರ ಹರಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಇವರು ಬಂದಿದ್ದಾಗ ಈ ಘಟನೆ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry