ನನಗೂ ಕೋಪ ಬರುತ್ತದೆ: ಸಚಿನ್

7

ನನಗೂ ಕೋಪ ಬರುತ್ತದೆ: ಸಚಿನ್

Published:
Updated:
ನನಗೂ ಕೋಪ ಬರುತ್ತದೆ: ಸಚಿನ್

ಮುಂಬೈ (ಪಿಟಿಐ): ಸಚಿನ್ ತೆಂಡೂಲ್ಕರ್ ಅವರು ಅಂಗಳದಲ್ಲಿ ಕೋಪ ವ್ಯಕ್ತಪಡಿಸುವುದು ಕಡಿಮೆ. ಆದರೆ ಮನೆಯಲ್ಲಿ ಅವರದ್ದು ಭಿನ್ನ ವ್ಯಕ್ತಿತ್ವ. ಮಡದಿ ಹಾಗೂ ತಾಯಿ ಕೆಲವೊಮ್ಮೆ ಇವರ ಕೋಪಕ್ಕೆ ಗುರಿಯಾಗುವರಂತೆ!ಸ್ವತ: ಸಚಿನ್ ತೆಂಡೂಲ್ಕರ್ ಈ ವಿಷಯ ಬಹಿರಂಗಪಡಿಸಿದ್ದಾರೆ. ಶನಿವಾರ ರಾತ್ರಿ ನಡೆದ ಸಮಾರಂಭದಲ್ಲಿ ತಮ್ಮ ಸಹೋದರ ನಿತಿನ್ ತೆಂಡೂ ಲ್ಕರ್ ರಚಿಸಿದ ಕವಿತೆ ಹಾಗೂ ತಂದೆ ರಮೇಶ್ ತೆಂಡೂಲ್ಕರ್ ಅವರ ಮರಾಠಿ ಕವಿತೆಗಳನ್ನು ಒಳಗೊಂಡ ಸಿಡಿ ಬಿಡುಗಡೆ ಮಾಡಿ ಮಾತನಾಡಿದ ಸಚಿನ್, ‘ಕೋಪವನ್ನು ಅಂಗಳದಲ್ಲಿ ವ್ಯಕ್ತಪಡಿಸುವ ಬದಲು ಮನೆಯಲ್ಲಿ ತೋರಿಸುವೆ’ ಎಂದಿದ್ದಾರೆ. ‘ದೇಶವನ್ನು ಪ್ರತಿನಿಧಿಸುತ್ತಿರುವ ಕಾರಣ ಅಂಗಳದಲ್ಲಿ ಕೋಪ ವ್ಯಕ್ತಪಡಿಸುವುದು ಸರಿಯಲ್ಲ. ಅಂಪೈರ್‌ಗಳು ತಪ್ಪು ತೀರ್ಪು ನೀಡಿದಾಗ ಮತ್ತು ಪಂದ್ಯದಲ್ಲಿ ಸೋಲು ಅನುಭವಿಸಿದಾಗ ಕೋಪ, ಮಾನಸಿಕ ತೊಳಲಾಟ ಉಂಟಾಗುತ್ತದೆ. ಕೆಲವೊಮ್ಮೆ ಡ್ರೆಸ್ಸಿಂಗ್ ಕೊಠಡಿಯಲ್ಲಿ ಕೋಪ, ನಿರಾಸೆ ವ್ಯಕ್ತಪಡಿಸುವೆ.ಹಲವು ಸಲ ನನ್ನ ವಿರುದ್ಧ ತಪ್ಪು ತೀರ್ಪುಗಳು ಬಂದಿವೆ. ಆದರೆ ಆ ಅಂಪೈರ್‌ಗಳ ಹೆಸರನ್ನು ಬಹಿರಂಗ ಪಡಿಸುವುದಿಲ್ಲ’ ಎಂದು ಸಚಿನ್ ಹೇಳಿದರು.ಮನೆಯಲ್ಲಿ ಪತ್ನಿ ಅಥವಾ ತಾಯಿಯ ಕೋಪಕ್ಕೆ ಹೆದರುವಿರಾ ಎಂಬ ಪ್ರಶ್ನೆಗೆ ‘ನನ್ನ ಕೋಪಕ್ಕೆ ಅವರು ಹೆದರುವರು’ ಎಂದು ಉತ್ತರಿಸಿದರು. ‘ಕೋಪ ಬಂದರೆ ಅಂಗಳದಲ್ಲಿ ಅದನ್ನು ತೋರಿ ಸುವುದಿಲ್ಲ. ಮನೆಯಲ್ಲಿ ಪತ್ನಿ ಮತ್ತು ತಾಯಿಯ ಮೇಲೆ ತೋರಿಸುವೆ’ ಎಂಬುದನ್ನು ಬಹಿರಂಗಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry