ಸೋಮವಾರ, ಜೂನ್ 21, 2021
29 °C

ನನಗೆ ಸಿ.ಎಂ ಕುರ್ಚಿ ಬೇಕಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ (ಪಿಟಿಐ): `ನನಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವ ಆಸೆ ಇಲ್ಲ. ಇದಕ್ಕೆ ತಂದೆ ಮುಲಾಯಂ ಅವರೇ ಅರ್ಹರು~ ಎಂದು ಎಸ್‌ಪಿಯ ಹೊಸ ಮುಖ ಅಖಿಲೇಶ್ ಯಾದವ್ ಹೇಳಿದ್ದಾರೆ.`ರಾಜ್ಯದಲ್ಲಿ ಪಕ್ಷವು ಮುನ್ನಡೆ ಸಾಧಿಸಿರುವುದರ ಹೆಗ್ಗಳಿಕೆ ಪಡೆಯಲು ನಿರಾಕರಿಸಿರುವ ಅವರು, 2007ರ ಚುನಾವಣೆಯಲ್ಲಿ ಕಳಪೆ ಸಾಧನೆ ಮಾಡಿದ ಬಳಿಕ ಪಕ್ಷಕ್ಕೆ ಮರುಸ್ವರೂಪ ನೀಡಲು ಎಲ್ಲರೂ ಶ್ರಮಿಸಿದ್ದಾರೆ~ ಎಂದು ಪ್ರತಿಕ್ರಿಯಿಸಿದ್ದಾರೆ.ರಾಹುಲ್ ಗಾಂಧಿ ಅವರ ಬಗ್ಗೆ ಅಖಿಲೇಶ್ ಏನನ್ನೂ ಹೇಳಿಲ್ಲ. ಆದರೆ ಮಾಯಾವತಿ ಬಗ್ಗೆ ಟೀಕೆ ಮಾಡುತ್ತಾ, `ಐದು ವರ್ಷಗಳ ಹಿಂದೆ ಪಡೆದ ಜನಾದೇಶವನ್ನು ಅವರು ಹಾಳು ಮಾಡಿದ್ದಾರೆ~ ಎಂದಿದ್ದಾರೆ.

`ರಾಜ್ಯದೆಲ್ಲೆಡೆ ಪ್ರತಿವೆುಗಳನ್ನು ಕೆತ್ತಲು ಹಣ ಪೋಲು ಮಾಡಿದ್ದರ ಬದಲು ಅಭಿವೃದ್ಧಿಗೆ ಖರ್ಚು ಮಾಡಿದ್ದರೆ ಒಳಿತಾಗುತ್ತಿತ್ತು~ ಎಂದು ವ್ಯಂಗ್ಯವಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.