ಮಂಗಳವಾರ, ಜೂನ್ 15, 2021
24 °C

ನನಗೆ ಸುಳ್ಳು ಹೇಳಲು ಬರುವುದಿಲ್ಲ: ಮೊಯಿಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ:  ನಾನು ಸುಳ್ಳು ಹೇಳುತ್ತಲೇ ಕಾಲ­ಕಳೆದಿದ್ದರೆ ಈ ರಾಜ್ಯದ ಮುಖ್ಯ­ಮಂತ್ರಿಯಾಗಿ, ಕೇಂದ್ರ ಸಚಿವ­ನಾಗಲು ಸಾಧ್ಯ ಇರಲಿಲ್ಲ ಎಂದು ಕೇಂದ್ರ ಸಚಿವ ಹಾಗೂ ಚಿಕ್ಕ­ಬಳ್ಳಾಪುರ ಸಂಸದ ಎಂ.ವೀರಪ್ಪ ಮೊಯಿಲಿ ಹೇಳಿದರು.ನಗರದ ಪ್ರವಾಸಿ ಮಂದಿ­ರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸುಳ್ಳು ಹೇಳಿ ಅಧಿಕಾರಕ್ಕೆ ಬರಲು ಪ್ರಯತ್ನಿಸಿದವರೆಲ್ಲ ಇವತ್ತು ಮೂಲೆಗುಂಪಾಗಿರುವುದು ಇತಿಹಾಸ. ಬಿಜೆಪಿಯವರಂತೆ ನನಗೆ ಭಾಷಣ ಮಾಡಲು ಬರುವುದಿಲ್ಲ. ಕೆಲಸ ಮಾಡಿತೋರಿಸುವುದಷ್ಟೇ ಬರುತ್ತದೆ’ ಎಂದರು.‘ನಾನು ಈ ಕ್ಷೇತ್ರಕ್ಕೆ ವಲಸೆ ಬಂದ ಹಕ್ಕಿ ಅಲ್ಲ. ಕನ್ನಡ ನಾಡಿನ ಮನುಷ್ಯ. ನನ್ನ ಬಗ್ಗೆ ಟೀಕೆ ಮಾಡುವ ಅನಂತ್‌ಕುಮಾರ್‌ ಸಹ ಹುಬ್ಬಳ್ಳಿಯಿಂದ ಬೆಂಗಳೂರಿಗೆ ವಲಸೆ ಬಂದವರೆ’ ಎಂದರು.‘ಕುಡಿಯುವ ನೀರಿನ ವಿಷಯದಲ್ಲಿ ರಾಜಕಾರಣವನ್ನು ಹಿಂದಕ್ಕೆ ಇಡಬೇಕು, ನೀರಿನ ಯೋಜನೆ ಮುಂದಿಡಬೇಕು, ಕರಾಳ ದಿನ, ಬಂದ್‌ ಆಚರಣೆ ಮಾಡುವದರಲ್ಲಿ ಅರ್ಥ ಇಲ್ಲ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.