ಮಂಗಳವಾರ, ಜನವರಿ 28, 2020
21 °C

ನನಸಾಗದ ವಸತಿ ಗೃಹ: ಜಮೀನು ಅನಾಥ

ಪ್ರಜಾವಾಣಿ ವಾರ್ತೆ / –ಜಗನ್ನಾಥ ಡಿ. ಶೇರಿಕಾರ Updated:

ಅಕ್ಷರ ಗಾತ್ರ : | |

ಚಿಂಚೋಳಿ: ಪಟ್ಟಣದ ಬಸ್‌ ನಿಲ್ದಾಣದ ಎದುರು ಇರುವ ಈಶಾನ್ಯ ಸಾರಿಗೆ ಸಂಸ್ಥೆಯ ಬಸ್‌ ಘಟಕದ ಎದುರು ಸಿಬ್ಬಂದಿ ವಸತಿ ಗೃಹಕ್ಕೆ ಮೀಸ­ಲಾದ ಜಾಗ ಬಯಲು ಮಲ ವಿಸರ್ಜ­ನೆಯ ತಾಣವಾಗಿ ಪರಿಣಮಿಸಿದೆ.1987ರಲ್ಲಿ ಮಂಜೂರಾದ ಬಸ್‌ ಘಟಕದ ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣ ಕಾಮಗಾರಿಯನ್ನು ಇದು­ವರೆಗೂ ಕೈಗೊಂಡಿಲ್ಲ. ಯಾದಗಿರ, ರಾಯಚೂರು ಮತ್ತು ಹುಮ್ನಾಬಾದ­ಗಳಲ್ಲಿ ಮಾತ್ರ ಸಿಬ್ಬಂದಿಗೆ ವಸತಿ ಗೃಹ ಸೌಲಭ್ಯವಿದೆ.ಚಿಂಚೋಳಿಯಲ್ಲಿ ಬಸ್‌ ಘಟಕ ತಲೆ ಎತ್ತಿ 3 ದಶಕ ಕಳೆಯುತ್ತಿದ್ದರೂ ಇಲ್ಲಿನ ಸಿಬ್ಬಂದಿಗೆ  ವಸತಿ ಸೌಲಭ್ಯ ಮರಿಚೀಕೆಯಾಗಿದೆ.

ಗುಜರಿಗೆ ಹಾಕುವ ಹಳೆಯ ಬಸ್‌­ಗಳು, ಹರಿದು ಹೋದ ಆಸನಗಳು, ಒಡೆದು ಹೋದ ಕಿಟಕಿಯ ಗಾಜುಗಳು ನಿರ್ವಹಣೆ ಇಲ್ಲದೇ ಬಳಲುತ್ತಿರುವ ಬಸ್‌­ಗಳಿಂದ ತಾಲ್ಲೂಕಿನ ಪ್ರಯಾಣಿ­ಕರು ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಬಿಟ್ಟು ಖಾಸಗಿ ವಾಹನಗಳನ್ನು ಆಶ್ರಯಿಸುವಂತಾಗಿದೆ.‘ಅಸಮರ್ಪಕ ಸಾರಿಗೆ ಸೇವೆಯಿಂದ ತೊಂದರೆ ಪಡುತ್ತಿರುವ ಇಲ್ಲಿನ ಜನರಿಗೆ ಖಾಸಗಿ ವಾಹನಗಳ ಟಾಪ್‌ ಪ್ರಯಾ­ಣವೇ ಗತಿಯಾಗಿದೆ. ಎಲ್ಲೆಂದರಲ್ಲಿ ಬಸ್‌­ಗಳು ಕೆಟ್ಟು ನಿಲ್ಲುವುದರಿಂದ ಸಾರಿಗೆ ಸಂಸ್ಥೆಯ ಮೇಲಿನ ಭರವಸೆಯನ್ನೇ ಇಲ್ಲಿನ ಜನ ಕಳೆದುಕೊಂಡಿದ್ದಾರೆ’ ಬಿಜೆಪಿ ಮುಖಂಡ ಮಹೇಶ ಬೇಮಳಗಿ ದೂರುತ್ತಾರೆ.‘ಚಿಂಚೋಳಿಯಿಂದ ಗುಲ್ಬರ್ಗಕ್ಕೆ 86 ಕಿ.ಮೀ ದೂರ ಕ್ರಮಿಸಲು ಸಾರಿಗೆ ಸಂಸ್ಥೆಯ ವೇಗದೂತ ಬಸ್‌ಗಳು ತೆಗೆ­ದು­ಕೊಳ್ಳುವ ಸಮಯ 3ತಾಸು. ಆದರೆ ಸಾಮಾನ್ಯ ಬಸ್‌­ಗಳೂ ಇಷ್ಟೇ ಸಮಯ ತೆಗೆದುಕೊಳ್ಳುತ್ತಿವೆ’. ಪ್ರಯಾಣಿಕರ ಸಾಮಾನ್ಯ ಬಸ್‌ ದರ ರೂ 62  ಆದರೆ ವೇಗದೂತ ಬಸ್‌ ರೂ 82 ಆಗಿದೆ. ಎರಡೂ ಬಸ್‌ಗಳು ಗುಲ್ಬರ್ಗ ತಲುಪಲು ಅಷ್ಟೇ ಸಮಯ ತೆಗೆದು ಕೊಳ್ಳುತ್ತಿರುವುದು ವೇಗದೂತ ಬಸ್‌ಗಳ ಪ್ರಯಾಣ ದರ ಕಡಿಮೆ ಮಾಡ­ಬೇಕೆಂಬ ಬೇಡಿಕೆಯನ್ನು ಸಾಮಾ­ಜಿಕ ಕಾರ್ಯಕರ್ತ ಭೀಮಶೆಟ್ಟಿ ಮುಕ್ಕಾ ಇಡುತ್ತಾರೆ. ಸ್ಥಳೀಯ ಸಾರಿಗೆ ಘಟಕ ಚಾಲಕ ಸಂಖ್ಯೆ–76, ನಿರ್ವಾಹಕರು– 38 ಮಂದಿ­­ಯನ್ನು ಹೊಂದಿದೆ. 55 –ಮಾರ್ಗ­ಗಳಿದ್ದು, ಮೆಕ್ಯಾನಿಕ್‌ –30, ಇತರೆ– 22 ಮಂದಿ ಇದ್ದಾರೆ.‘ಒಟ್ಟು 65 ಬಸ್‌ಗಳನ್ನು ಹೊಂದಿ­ರುವ ಘಟಕದಲ್ಲಿ 7.5 ಲಕ್ಷ ಕಿ.ಮೀ.­ಗಿಂತಲೂ ಅಧಿಕ ಕ್ರಮಿಸಿದ 5 ಬಸ್‌­ಗಳು ಇಲ್ಲಿ ಇನ್ನೂ ರಸ್ತೆಯ ಮೇಲೆ ಓಡಾ­ಡುತ್ತಿವೆ. ತಾವು ಘಟಕ ವ್ಯವ­ಸ್ಥಾಪ­ಕರಾಗಿ ಅಧಿಕಾರ ವಹಿಸಿಕೊಂಡ ಮೇಲೆ  3 ಹೊಸ ಬಸ್‌ಗಳು ತರಿಸಿ­ಕೊಂಡಿ­ದ್ದೇನೆ. ಈಗ ಇನ್ನೂ 3 ಬಸ್‌­ಗಳು ಬರುತ್ತಿವೆ’ ಎಂದು ವ್ಯವಸ್ಥಾಪಕ ಧೂಳಪ್ಪ ತಿಳಿಸಿದ್ದಾರೆ.

ಸಭೆ ಇಂದು

ಸಾರಿಗೆ ಇಲಾಖೆಯ ಪ್ರಧಾನ ಕಾರ್ಯ­ದರ್ಶಿ ಪಿ. ರವಿಕುಮಾರ ಅವರು ಶನಿವಾರ ಗುಲ್ಬರ್ಗಕ್ಕೆ ಆಗಮಿಸಲಿದ್ದಾರೆ.

ಅವರು ಚಿಂಚೋಳಿ ತಾಲ್ಲೂಕಿನ ಸಾರಿಗೆ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ನಿರ್ದೇಶನದ ಮೇರೆಗೆ ಬರು­ತ್ತಿದ್ದು, ಸಂಜೆ 5 ಗಂಟೆಗೆ ಗುಲ್ಬರ್ಗದ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಕರೆದಿದ್ದಾರೆ ಎಂದು ಶಾಸಕ ಡಾ. ಉಮೇಶ ಜಾಧವ್‌ ಅವರರ ಕಚೇರಿಯ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)