ನನಸಾಗದ ಹಳೆಮನೆ ಕನಸು: ವೆಂಕಟರಾಜು

ಶನಿವಾರ, ಜೂಲೈ 20, 2019
28 °C

ನನಸಾಗದ ಹಳೆಮನೆ ಕನಸು: ವೆಂಕಟರಾಜು

Published:
Updated:

ಚಾಮರಾಜನಗರ: ಶಿವಮೊಗ್ಗದಲ್ಲಿ ರಂಗಾಯಣ ಸ್ಥಾಪಿಸಬೇಕು ಎಂಬ ರಂಗಾಯಣ ನಿರ್ದೇಶಕ ಪ್ರೊ. ಲಿಂಗದೇವರು ಹಳೆಮನೆ ಅವರ ಕನಸು ಕೊನೆಗೂ ಈಡೇರಲಿಲ್ಲ ಎಂದು ರಂಗಕರ್ಮಿ ಕೆ.ವೆಂಕಟರಾಜು ಹೇಳಿದರು.ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಶಾಂತಲಾ ಕಲಾತಂಡ, ರಂಗ ತರಂಗ, ರಂಗವಾಹಿನಿ ಏರ್ಪಡಿಸಿದ್ದ ಲಿಂಗದೇವರು ಹಳೆಮನೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಮೈಸೂರು ಇತಿಹಾಸದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದರು. ನೇರ ಹಾಗೂ ದಿಟ್ಟ ನಿರ್ದೇಶಕರ ಕೊರತೆ ರಂಗಾಯಣಕ್ಕೆ ಕಾಡಲಿದೆ. ವಿದ್ಯಾರ್ಥಿ ದಿಸೆಯಿಂದಲೇ ಭಾಷೆಯ ಮೇಲೆ ಹಿಡಿತ ಇಟ್ಟುಕೊಂಡಿದ್ದರು.ಭಾಷಣ ಪ್ರವೀಣರಾಗಿದ್ದರು. ಸಮು ದಾಯದ ಅಸ್ತಿತ್ವ ಕಟ್ಟಿಕೊಟ್ಟಿದ್ದರಲ್ಲಿ ಇವರ ಪಾತ್ರ ಪ್ರಮುಖವಾದ್ದದ್ದು~  ಎಂದು ಹೇಳಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಂ.ನಾಗಮಲ್ಲಪ್ಪ ಮಾತನಾಡಿ, `ಕನ್ನಡ ಶಾಸ್ತ್ರೀಯ ಭಾಷೆ ಸ್ಥಾನ ಮಾನದ ಕುರಿತ ಟಿಪ್ಟಣಿ ರೂಪದ ಪುಸ್ತಕ ಪ್ರಕಟಿಸುವ ಮೂಲಕ ಕನ್ನಡ ಲಿಪಿಯ ಬಗ್ಗೆ ಜನರಿಗೆ ಮನವರಿಗೆ ಮಾಡಿಕೊಟ್ಟಿದ್ದಾರೆ. ಇವರ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ~ ಎಂದು ವಿಷಾದಿಸಿದರು.ಉಪನ್ಯಾಸಕ ಬಸವರಾಜು ಹಾಡಿನ ಮೂಲಕ ನಮನ ಸಲ್ಲಿಸಿದರು. ಉಪನ್ಯಾಸಕ ರಾಜಶೇಖರ ಜಮದಂಡಿ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಪಣೀಶ್ ಮಾತನಾಡಿದರು. ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry