ನನಸಾದ ಅಂಧ ವ್ಯಕ್ತಿಯ ಐಎಎಸ್ ಕನಸು

7

ನನಸಾದ ಅಂಧ ವ್ಯಕ್ತಿಯ ಐಎಎಸ್ ಕನಸು

Published:
Updated:

ಚಂಡೀಗಡ (ಪಿಟಿಐ): ಸಾಧಿಸುವ ಛಲ ಮತ್ತು ಕಠಿಣ ಪರಿಶ್ರಮದ ಎದುರು ಅಡ್ಡಿ ಆತಂಕಗಳು ನಗಣ್ಯ ಎಂಬುದನ್ನು ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ 32 ವರ್ಷದ ಅಂಧ ವ್ಯಕ್ತಿ ಅಜಿತ್ ಕುಮಾರ್ ಸಾಧಿಸಿ ತೋರಿಸಿದ್ದಾರೆ. ಹರ್ಯಾಣದ ಮಹೇಂದ್ರಗಡ ಜಿಲ್ಲೆಯ ಖೇರಿ ಗ್ರಾಮದವರಾದ ಅವರು, ಮುಸ್ಸೋರಿಯಲ್ಲಿ ಇದೇ 27 ರಿಂದ ಆರಂಭವಾಗಲಿರುವ ತರಬೇತಿಗೆ ತೆರಳುತ್ತಿದ್ದಾರೆ.ದೇಶದಲ್ಲಿ ಸಂಪೂರ್ಣ ದೃಷ್ಟಿ ಕಳೆದುಕೊಂಡು ಐಎಎಸ್ ಅಧಿಕಾರಿ ಆಗುತ್ತಿರುವವರಲ್ಲಿ ಅಜಿತ್ ಕುಮಾರ್ ಎರಡನೆಯವರು. ಇದೇ ರಾಜ್ಯದ ಪಂಚಕುಲದ ನಿವಾಸಿ ಸುಖ್‌ಸೋಹಿತ್ ಸಿಂಗ್ 2008ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry