ಗುರುವಾರ , ಫೆಬ್ರವರಿ 25, 2021
29 °C

ನನ್ನ ಎಮ್ಮೆಗಳು ರಾಣಿ ವಿಕ್ಟೋರಿಯಾಗಿಂತಲೂ ಖ್ಯಾತ: ಆಜಂ ಖಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನನ್ನ ಎಮ್ಮೆಗಳು ರಾಣಿ ವಿಕ್ಟೋರಿಯಾಗಿಂತಲೂ ಖ್ಯಾತ: ಆಜಂ ಖಾನ್

ಲಖನೌ (ಪಿಟಿಐ): ಕಳುವಾದ ತಮ್ಮ ಎಮ್ಮೆಗಳಿಗೆ ಸಂಬಂಧಿಸಿದಂತೆ ಮತ್ತು ಈ ಸಂಬಂಧ ಮೂವರು ಪೊಲೀಸರು ಅಮಾನತುಗೊಂಡ ಬಗ್ಗೆ ಮಾಧ್ಯಮಗಳಲ್ಲಿ ಬಂದ ಪ್ರಚಾರದಿಂದ ಇರುಸುಮುರುಸಿಗೆ ಒಳಗಾದ ಉತ್ತರ ಪ್ರದೇಶ ಸಚಿವ ಮೊಹಮ್ಮದ್ ಆಜಂ ಖಾನ್ ಅವರು 'ನನ್ನ ಜಾನುವಾರುಗಳು ಬ್ರಿಟನ್ನಿನ ವಿಕ್ಟೋರಿಯಾ ರಾಣಿಗಿಂತಲೂ ಹೆಚ್ಚು ಖ್ಯಾತವಾಗಿವೆ' ಎಂದು ಹೇಳಿದ್ದಾರೆ.'ಈಗ ನನ್ನ ಎಮ್ಮೆಗಳು ರಾಣಿ ವಿಕ್ಟೋರಿಯಾಗಿಂತಲೂ ಹೆಚ್ಚು ಖ್ಯಾತಿ ಪಡೆದಿವೆ' ಎಂದು ಖಾನ್ ಹೇಳಿದರು.'ನೀವು ಯಾವುದೇ ಸುದ್ದಿ ವಾಹಿನಿಯ ಗುಂಡಿ ಒತ್ತಿದರೆ ನಾನು ಸಗಣಿಯನ್ನು ತಲೆಯಲ್ಲಿ ಹೊತ್ತುಕೊಂಡು ಎಮ್ಮೆಗಳನ್ನು ಹಿಂಬಾಲಿಸುವುದನ್ನು ಕಾಣಬಲ್ಲಿರಿ' ಎಂದು ಅವರು ನುಡಿದರು.ಖಾನ್ ಅವರಿಗೆ ಸೇರಿದ ರಾಂಪುರದ ತೋಟದ ಮನೆಯಿಂದ ಫೆಬ್ರುವರಿ 1ರಂದು ಕಳುವಾದ ಏಳು ಎಮ್ಮೆಗಳನ್ನು ಪತ್ತೆ ಹಚ್ಚಲು ನಡೆಸಲಾದ ವ್ಯಾಪಕ ಶೋಧ ಕಾರ್ಯಾಚರಣೆ ಬಗ್ಗೆ ಮಾಧ್ಯಮಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು.ಕಳುವಾದ ಜಾನುವಾರುಗಳ ಬಗ್ಗೆ ಮಾಹಿತಿ ಸಂಗ್ರಹಕ್ಕಾಗಿ ಅಪರಾಧ ವಿಭಾಗದ ಸಿಬ್ಬಂದಿ ಮತ್ತು ವಿವಿಧ ಠಾಣೆಗಳ ಪೊಲೀಸ್ ಸಿಬ್ಬಂದಿ ಕಸಾಯಿಖಾನೆಗಳು, ಮಾಂಸದ ಅಂಗಡಿಗಳ ವ್ಯಾಪಕ ದಾಳಿ ನಡೆಸಿದ್ದರು.ಎರಡು ದಿನಗಳ ಒಳಗಾಗಿ ಎಮ್ಮೆಗಳು ಪತ್ತೆಯಾದರೂ, ಘಟನೆಯ ಹಿನ್ನೆಲೆಯಲ್ಲಿ ಒಬ್ಬ ಸಬ್ ಇನ್ ಸ್ಪೆಕ್ಟರ್ ಮತ್ತು ಇಬ್ಬರು ಪೊಲೀಸ್ ಪೇದೆಗಳನ್ನು  ಕರ್ತವ್ಯ ಚ್ಯುತಿಗಾಗಿ ಅಮಾನತು ಮಾಡಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.