ಶುಕ್ರವಾರ, ಜನವರಿ 24, 2020
21 °C

ನನ್ನ ಪ್ರೀತಿಯ ತಂಗಿಗೆ ಹಾಡುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ನನ್ನ ಪ್ರೀತಿಯ ತಂಗಿ~ ಚಿತ್ರಕ್ಕೆ ಇತ್ತೀಚೆಗೆ `ಮುಕ್ಕಣ್ಣ ನಿನಗೇಕೆ ಮೂರು ಕಣ್ಣು ಕೊಡು ನನಗೆ ಸಾಕು ಒಂದು ಕಣ್ಣು~ ಹಾಗೂ `ಮುಂಜಾನೆಯಲ್ಲಿ ಕೋಳಿ ಕೂಗಿದಾಗ ಬಾನಲ್ಲಿ ಸೂರ್ಯ ಎಚ್ಚೆತ್ತು ಹೊರ ಬಂದಹಾಗೆ~ ಎಂಬ ಹಾಡುಗಳೊಂದಿಗೆ ಒಟ್ಟು 7 ಹಾಡುಗಳನ್ನು ಧ್ವನಿ ಮುದ್ರಿಸಿಕೊಳ್ಳಲಾಯಿತು. ಅಜಯ್ ವಾರಿಯಾರ್, ಹೇಮಂತ, ಅನುರಾಧ ಭಟ್ ಗಾಯಕರು. ಗಂಧರ್ವ ಸಂಗೀತ ನಿರ್ದೇಶಕ. ಶೀಘ್ರ ಮೈಸೂರಿನಲ್ಲಿ ಚಿತ್ರದ ಮುಹೂರ್ತ ನೆರವೇರಲಿದೆ. ಈ ಹಿಂದೆ `ನಂಜುಂಡೇಶ್ವರ ಮಹಿಮೆ~ ಹಾಗೂ `ರೈತನ ರಕ್ತ~ ಚಿತ್ರವನ್ನು ನಿರ್ಮಿಸಿದ್ದ ಪಿ.ಶ್ರಿನಿವಾಸ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮಹದೇವ್ ಛಾಯಾಗ್ರಹಣ, ಕಪಿಲ್ ನೃತ್ಯ ನಿರ್ದೇಶನ ಇದೆ. ತಾರಾಬಳಗಕ್ಕೆ ಸಂದೇಶ್, ತಾವರೆ, ನವ್ಯ, ಡಿಂಗ್ರಿ ನಾಗರಾಜ್, ಬಿರಾದರ್ ಆಯ್ಕೆಯಾಗಿದ್ದಾರೆ.

ಪ್ರತಿಕ್ರಿಯಿಸಿ (+)